ಅಪರಿಚಿತ ವಾಹನ ಡಿಕ್ಕಿ ಬೈಕ್ ಸವಾರ ಸಾವು, ಓರ್ವ ನ ಸ್ಥಿತಿ ಗಂಭೀರ*
*ಅಪರಿಚಿತ ವಾಹನ ಡಿಕ್ಕಿ ಬೈಕ್ ಸವಾರ ಸಾವು, ಓರ್ವ ನ ಸ್ಥಿತಿ ಗಂಭೀರ*
ಬೈಲಹೊಂಗಲ: ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟು ಮತ್ತೊರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ರಾತ್ರಿ ಹೊಸೂರ ಗ್ರಾಮದ ಬಳಿ ನಡೆದಿದೆ.
ಮೃತನನ್ನು ಮಾಟೊಳ್ಳಿ ಗ್ರಾಮದ ನಿವಾಸಿ ಮಂಜುನಾಥ ಅಂಗಡಿ (22) ಎಂದು ಗುರುತಿಸಲಾಗಿದೆ. ಮತ್ತೊರ್ವ ಬಸವರಾಜ ಮಲ್ಲಪ್ಪ ದೊಡಮನಿ( 22) ತೀವ್ರ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ ಸವಾರರು ಡಿಸೈಲ ತರಲು ಮಾಟೊಳ್ಳಿ ಗ್ರಾಮದಿಂದ ಬೈಲಹೊಂಗಲಕ್ಕೆ ಬರುತ್ತಿದ್ದರು. ದಾರಿ ಮದ್ಯೆ ಯಾವೊದೋ ಅಪರಿಚಿತ ವಾಹನ ಡಿಕ್ಕಿ ಯಾಗಿ ಈ ಘಟನೆ ಸಂಭವಿಸಿದೆ.
ಸ್ಥಳಕ್ಕೆ ಮುರಗೋಡ ಪೊಲೀಸ್ ರು ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ.
ವರದಿ ಗಣೇಶ ನಲವಡೆ