ಬೈಲಹೊಂಗಲ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಮಹಾಂತೇಶ್ ಕೌಜಲಗಿ ಅವರಿಂದ ಚಾಲನೆ
ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳ ಮುಖಾಂತರ ನಾಡಗೀತೆ ಹಾಡುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ...!
ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವಕ್ಕೆ ವಿದ್ಯುತ್ ಚಾಲನೆ >>
ಬೈಲಹೊಂಗಲ : (ವೀರರಾಣಿ ಮಲ್ಲಮ್ಮನ ವೇದಿಕೆ)
ವೀರರಾಣಿ ಬೆಳವಡಿ ಮಲ್ಲಮ್ಮನ ಜೀವನ ಚರಿತ್ರೆ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವಂತಾಗಬೇಕೆಂದು ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.
ತಾಲೂಕಿನ ಬೆಳವಡಿ ಗ್ರಾಮದಲ್ಲಿ ಜಿಲ್ಲಾಡಳಿತ ಬೆಳಗಾವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮನ ಉತ್ಸವ-2024 ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ಅನೇಕ ಜನರ ತ್ಯಾಗ-ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕೀದೆ. ಉತ್ತರ ಭಾರತದ ಝಾನ್ಸಿ ಬಾಯಿ ಅವರಿಗೆ ನೀಡಿದಂತ ಪ್ರಚಾರ ರಾಣಿ ಚನ್ನಮ್ಮಾ, ವೀರವನಿತೆ ಬೆಳವಡಿ ಮಲ್ಲಮ್ಮ ಅವರಿಗೆ ಪ್ರಚಾರ ದೊರಕದೆ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನು ಬಲಿದಾನಗೈದ ವೀರರ ಸ್ಮರಣೆ ಇಂದು ಅತ್ಯವಶ್ಯವಾಗಿದೆ. ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚಿಗೆ ಬೈಲಹೊಂಗಲ ನಾಡು ಕ್ರಾಂತಿಕಾರಿ ನಾಡಿನಲ್ಲಿ ನಾವು ನೀವೆಲ್ಲರೂ ಜನ್ಮ ತಾಳಿರುವುದು ಪುಣ್ಯವಂತರು. ದೇಶಕ್ಕೆ ವೀರವನಿತೆಯರನ್ನು ಕೊಟ್ಟಿರುವ ಪುಣ್ಯ ಭೂಮಿಯಾಗಿದೆ. ಅವರ ಶೌರ್ಯ-ಸಾಹಸ, ರಾಷ್ಟ್ರ ಪ್ರೇಮವನ್ನು ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯ ಇದೆ. ವಿಶ್ವದಲ್ಲಿ ಪ್ರಪ್ರಥಮವಾಗಿ ಮಹಿಳಾ ಸೈನ್ಯ ಕಟ್ಟಿ ಬಲಿಷ್ಠ ಛತ್ರಪತಿ ಶಿವಾಜಿ ಮಹಾರಾಜಾರ ಸೈನ್ಯದೊಂದಿಗೆ ಹೋರಾಡಿ ವಿಜಯಶಾಲಿಯಾಗಿ ಶಿವಾಜಿ ಮಹಾರಾಜರಿಂದ ಸಹೋದರತ್ವ ಬಾಂಧವ್ಯ ಹೊಂದಿ ಕನ್ನಡ ಮತ್ತು ಮರಾಠಿ ಭಾಷಿಕರೊಂದಿಗೆ ಬಾಂಧವ್ಯ ಬೆಸೆದ ವೀರರಾಣಿ ಬೆಳವಡಿ ಮಲ್ಲಮ್ಮಳ ಸಾಹಸ-ಶೌರ್ಯ, ನಾಡ ಪ್ರೇಮ ಪ್ರೇರಣೆಯಾಗಲಿದೆ.
ಶಾಸಕ ಮಹಾಂತೇಶ ಕೌಜಲಗಿ ಅವರು ಸರಕಾರದ ಮೇಲೆ ಒತ್ತಡ ಹೇರಿ ಈ ಬಾರಿ 1 ಕೋಟಿ ರೂ. ಅನುದಾನ ತಂದು ವಿಜೃಂಭಣೆಯಿಂದ ಉತ್ಸವ ಆಚರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಮುಂಬರುವ ದಿನಗಳಲ್ಲಿ ಬೆಳವಡಿ ಮಲ್ಲಮ್ಮ ಉತ್ಸವ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವೈಭವ ಭರಿತವಾಗಿ ಜರುಗಲೆಂದು ಆಶೀಸಿದರು.
ಬೈಲಹೊಂಗಲ ಕಾರ್ಮೆಲ್ ಶಾಲೆಯ
ವಿಶೇಷ ಸಾಮರ್ಥದ ಬುದ್ದಿಮಾಂದ್ಯ ಮಕ್ಕಳ ಪ್ರಾಂಶುಪಾಲೆ ೧೦೦ ಮಕ್ಕಳ ಸೇವೆ ಮಾಡುತ್ತಿರುವ ರೀತಾ ಪಿಂಟೋ ಅವರಿಗೆ ೨೦೨೪ ರ ರಾಣಿ ಮಲ್ಲಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪಡೆದು ಮಾತನಾಡಿದ ಅವರು, ವಿಶೇಷ ಮಕ್ಕಳ ಸೇವೆ ದೇವರ ಸೇವೆಯಾಗಿದೆ. ಸೇವೆಯಲ್ಲಿ ಸಹಕರಿಸುತ್ತಿರುವ ಶಾಸಕ ಮಹಾಂತೇಶ ಕೌಜಲಗಿ ಹಾಗೂ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಮೈಸೂರಿನ ಲೇಖಕ ರಾಮಣ್ಣ ತಟ್ಟಿ ಅವರ ರಚಿಸಿದ
ಬೀಳದ ಬೆಳವಡಿಯ ಆ ಇಪ್ಪತ್ತೇಳು ದಿನಗಳು ಎಂಬ ಕೃತಿಯನ್ನು ಗಣ್ಯರು ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಸಾಹಿತಿ ರಾಮಣ್ಣ ತಟ್ಟಿ ಮಲ್ಲಮ್ಮಳ ಶೌರ್ಯವನ್ನು ಪ್ರತಿಯೊಬ್ಬ ಕನ್ನಡಿಗರು ಅರಿಬೇಕೆಂಬುದು ನನ್ನ ಆಶಯವಾಗಿದೆ. ಪತಿಯನ್ನು ಕಳೆದುಕೊಂಡು ರಾಣಿ ಮಲ್ಲಮ್ಮ ಹೋರಾಡಿದ್ದು ವಿರೋಚಿತ. ಅಪಾರ ವಿದ್ಯೆಯ ಮಲ್ಲಮ್ಮ ೨೦೦೦ ಮಹಿಳಾ ಸೈನ್ಯ ಕಟ್ಟಿ ಹೋರಾಡಿದ್ದು ಸ್ಮರಣೀಯವಾಗಿದೆ. ಮುಸ್ಲಿಂ, ಮೊಘಲರಿಗೆ ಹೆದರಿ ಬದುಕುತ್ತಿದ್ದ ಕಾಲದಲ್ಲಿ ಮಲ್ಲಮ್ಮಳ ಧೈರ್ಯದ ಹೋರಾಟ ನಡೆದಿದೆ. ಬ್ರಿಟಿಷರಿಗೆ ವ್ಯಾಪಾರಕ್ಕೆ ಅನುಮತಿ ಬೇಡ ಎಂದು ಮಲ್ಲಮ್ಮ ೧೬ ನೇ ಶತಮಾನದಲ್ಲಿಯೇ ಪ್ರತಿಪಾದಿಸಿದ್ದರು. ಮಲ್ಲಮ್ಮಳ ಉತ್ಸವ ರಾಜ್ಯದ ಉತ್ಸವವಾಗಬೇಕು. ಪ್ರಾಧಿಕಾರ ರಚನೆಯಾಗಬೇಕೆಂದು ಸರಕಾರಕ್ಕೆ ಆಗ್ರಹಿಸಿದರು.
ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ ಮಾತನಾಡಿ, ಬೆಳವಡಿ ಮಲ್ಲಮ್ಮ ಪ್ರಾಧಿಕಾರ ರಚನೆ ಮಾಡಬೇಕು, ಮಲ್ಲಮ್ಮ ಹೆಸರಿನಲ್ಲಿ ವಸತಿ ಶಾಲೆ, ಮಲ್ಲಮ್ಮ ರಾಕ್ ಗಾರ್ಡನ್, ಮ್ಯೂಸಿಯಂ ಹಾಗೂ ಉತ್ಸವ ಆಚರಣೆಗೆ ಶಾಶ್ವತ ಜಾಗೆ ಒದಗಿಸಲು ಮುಖ್ಯಮಂತ್ರಿ ಜೊತೆ ಚರ್ಚಿಸಿ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.
ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆವಹಿಸಿ ಮಾತನಾಡಿ,
ಈ ನಾಡಿನ ಪ್ರತಿಯೊಬ್ಬರ ಮನದಲ್ಲಿ ಮಲ್ಲಮ್ಮ ನೆಲೆಸಿದ್ದು, ಇತಿಹಾಸ ಅರಿತವರು ಇತಿಹಾಸ ಬಗ್ಗೆ ಮಾತನಾಡಲು ಸಾಧ್ಯ. ಬೆಳವಡಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಶ್ರಮಿಸುವೆ ಎಂದರು.
ಇದೇ ವೇಳೆ ಮೈಸೂರಿನ ಲೇಖಕ ರಾಮಣ್ಣ ತಟ್ಟಿ ಇವರು ರಚಿಸಿದ ಬೀಳದ ಬೆಳವಡಿ ಆ ಇಪ್ಪತ್ತೇಳು ದಿನಗಳು ಕುರಿತು ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಬೆಳವಡಿ ಹಿರೇಮಠ ಹೂಲಿಯ ರಾಜಗುರು ಸಂಸ್ಥಾನದ ಶಿವಮಹಾಂತ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿದ್ದರು,
ವೇದಿಕೆ ಮೇಲೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಪಿ ಡಾ.ಭೀಮಾಶಂಕರ ಗುಳೇದ, ಜಿ.ಪಂ.ಸಿಇಓ ರಾಹುಲ್ ಶಿಂಧೆ, ಎಸಿ ಪ್ರಭಾವತಿ ಫಕ್ಕೀರಪೂರ, ಕನ್ನಡ ಮತ್ತು ಸಂಸ್ಕೃತಿಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಡಿವೈಎಸ್ಪಿ ರವಿ ನಾಯಕ, ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ, ಉಪಾಧ್ಯಕ್ಷೆ ಸಂಗೀತಾ ಕಿನೇಕರ, ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು.ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪೂರ ಸ್ವಾಗತಿದರು. ದೈಹಿಕ ಶಿಕ್ಷಕ ಮಹಾಂತೇಶ ಉಪ್ಪಿನ, ಲಕ್ಷ್ಮೀ ಜಾಧವ ನಿರೂಪಿಸಿದರು. ತಹಶಿಲ್ದಾರ ಸಚ್ಚಿದಾನಂದ ಕುಚನೂರ ವಂದಿಸಿದರು.
ವರದಿ ಗಣೇಶ ನಲವಡೆ...