KKNEWS:ಪ್ರಥಮ ಮಹಿಳಾ ಸೈನ್ಯ ಕಟ್ಟಿದ ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವಕ್ಕೆ ಅನುಪಸ್ಥಿತಿ...?
ಬೆಳವಡಿ:1511ರಿಂದ ರಾಜ ಚಂದ್ರಶೇಖರ ರಾಜನೊಂದಿಗೆ ಪ್ರಾರಂಭವಾಗುವ ಮಲ್ಲಮ್ಮನ ಬೆಳವಡಿಯ ಇತಿಹಾಸ ಪ್ರಸಿದ್ಧ ತಾಣ. ದೇಶದ ಇತಿಹಾಸದಲ್ಲೇ ಮಹಿಳಾ ಸೈನ್ಯ ಕಟ್ಟಿದ ಮೊದಲ ಹೋರಾಟಗಾರ್ತಿಯ ದಿವ್ಯ ಇತಿಹಾಸಕ್ಕೆ ಅಧಿಕಾರಿಗಳು ತೋರುವ ಗೌರವ ಶೂನ್ಯ.
ಇಂದು ಉತ್ಸವ ಬೆಳವಡಿ ಮಲ್ಲಮ್ಮನ ಉತ್ಸವ, ಉಪಸ್ಥಿತಿ ಪದಕ್ಕಿಂತ ಅನುಪಸ್ಥಿತಿಯಲ್ಲೇ ಚಾಲನೆ ಸಿಕ್ಕಿದ್ದು ನಮ್ಮ ದೌರ್ಭಾಗ್ಯ. ಸರ್ಕಾರ ಒಂದು ಕೋಟಿ ಅನುದಾನವನ್ನ ಕೊಟ್ಟಿದೆ ಆದ್ರೆ ಮೂಲವಾಗಿ ಕೊಡಬೇಕಿದ್ದ ಗೌರವ ಕೊಡುವಲ್ಲಿ ವಿಪಲವಾಗಿದೆ ಯಾಕೆ.
ಮಲ್ಲಮ್ಮನ ಉತ್ಸವಕ್ಕೆ ಬೆಳಿಗ್ಗೆ ಚಾಲನೆ ಸಿಕ್ಕ ಅಭಿಮಾನ ಒಂದುಕಡೆ ಆದರೆ ಕೇವಲ ಸ್ಥಳೀಯ ಶಾಸಕರಿಗೆ ಮಾತ್ರ ಬೇಕು ಮಿಕ್ಕವರಿಗೆ ಬೇಡ ಎನ್ನುವ ಸ್ಥಿತಿ ಎದ್ದು ಕಂಡಿದ್ದು ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಕಳೆ ಕಟ್ಟಬೇಕಿದ್ದ ಅದೆಷ್ಟೋ ಅಧಿಕಾರಿಗಳು, ಶಾಸಕರು, ಮಂತ್ರಿಗಳು, ಸರ್ಕಾರದ ಘನ ಉಪಸ್ಥಿತಿ ಅನುಪಸ್ಥಿತಿಯಲ್ಲಿ ಉತ್ಸವದ ಮೆರವಣಿಗೆಗೆ ಚಾಲನೆ ಸಿದ್ದು ನಮ್ಮ ದುರ್ವಿಧಿ.
ಔತಣಕೂಟಕ್ಕೆ ಜಮಾವಣೆಗೊಳ್ಳುವ ಅಧಿಕಾರಿ ಶಾಹಿಗಳು ಇತಿಹಾಸದ ಮಹಾತ್ಮರಿಗೆ ಸೂಕ್ತ ಗೌರವ ಸೂಚಿಸುವಲ್ಲಿ ವಿಪುಲವಾಗಿದ್ದು ಯಾಕೆ. ಸ್ಥಳೀಯ ಶಾಸಕ ಮಹಾಂತೇಶ ಕೌಜಲಗಿ ಮುತುವರ್ಜಿಯಿಂದ ಉತ್ಸವಕ್ಕೆ ಕೋಟಿ ಏನೋ ಬಂತು ಆದ್ರೆ ಕೋಟಿ ಕೊಟ್ಟ ಸರ್ಕಾರದ ಅದೆಷ್ಟು ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತಿ ಇದ್ದರು ಎಂದರೆ ೦…?
ನಮ್ಮ ನೆಮ್ಮದಿಯ ಜೀವನಕ್ಕೆ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಡಿದ ಮಹಾತ್ಮರ ನೆನಪಿಗಾಗಿ ಆಚರಿಸುವ ಉತ್ಸವಗಳಿಗೆ ತಮ್ಮ ಅನುಪಸ್ಥಿತಿಯಿಂದ ಸಮಾಜಕ್ಕೆ ಕೊಡುವ ಗೌರವ ಏನು.
ಇಂದು ಮಲ್ಲಮ್ಮನ ಇತಿಹಾಸ ಜಗತ್ತಿಗೆ ಪರಿಚಯ ಇದೆ ಆದ್ರೆ ಪ್ರಕರವಾಗಿ ಬೆಳವಡಿಯಲ್ಲಿ ಯಾವ ಕುರುಹುಗಳು ಇಲ್ಲದೆ ಇರುವುದು ಇತಿಹಾಸ ಪ್ರಿಯರಿಗೆ ಬೇಸರತೆಗೂ ಕಾರಣವಾಗಿದೆ.
ಸಾಮಾನ್ಯನ ಪ್ರಶ್ನೆಗೆ ಉತ್ತರ ಕೊಡಲು ಸರ್ಕಾರದ ಬಳಿ ಉತ್ತರ ಇಲ್ಲಾ ಕಾರಣ ಮಲ್ಲಮ್ಮನ ಇತಿಹಾಸ ಶೋಧನೆ, ಕುರುಹುಗಳ ರಕ್ಷಣೆಯಿಲ್ಲದೆ ಇತಿಹಾಸ ಎಲ್ಲಿ ಎಂಬ ವಾತಾವರಣ ಸೃಷ್ಟಿಯಾಗಿದ್ದು ಎಷ್ಟು ಸರಿ.