ಬ್ಯಾಂಕಿಂಗ್; ಬ್ಯಾಂಕ್‌ಗಳಿಗೆ ವಾರಕ್ಕೆ 5 ದಿನ ಕೆಲಸ: ಈ ವರ್ಷವೇ ಜಾರಿ?

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ನವದೆಹಲಿ: ಬ್ಯಾಂಕ್‌ಗಳಲ್ಲಿ ವಾರಕ್ಕೆ 5 ದಿನ ಮಾತ್ರ ಕೆಲಸ ಎಂಬ ನಿಯಮವು ಪ್ರಸಕ್ತ ವರ್ಷದಿಂದ ಜಾರಿಗೆ ಬರುವ ಸಾಧ್ಯತೆ ಹೆಚ್ಚಿದೆ. ವಿವಿಧ ಬ್ಯಾಂಕ್‌ಗಳ ಉದ್ಯೋಗಿಗಳ ಸಂಘಟಿತ ಒಕ್ಕೂಟ, ಯುನೈಟೆಡ್‌ ಫೋರಂ ಆಫ್ ಬ್ಯಾಂಕ್‌ ಯೂನಿಯನ್‌ ಕೇಂದ್ರ ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಿ, ಅದನ್ನು ಸರ್ಕಾರ ಪರಿಗಣಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ.
ಆದರೆ, ಬ್ಯಾಂಕ್‌ಗಳ ಶಾಖೆಗಳ ಕಾರ್ಯನಿರ್ವಹಣೆ ಅವಧಿಯಲ್ಲಿ(ಗ್ರಾಹಕರು ವಹಿವಾಟು ನಡೆಸುವ ಅವಧಿ) ಇಳಿಕೆ ಮಾಡಲಾಗಿಲ್ಲ ಎಂದು ಯೂನಿಯನ್ ಹೇಳಿಕೊಂಡಿದೆ. ಆದರೆ, ಕೇಂದ್ರ ವಿತ್ತ ಸಚಿವಾಲಯದ ಅನುಮೋದನೆ ಪಡೆದ ಬಳಿಕವೇ ಹೊಸ ನಿಯಮ ಜಾರಿಯಾಗುವ ಸಾಧ್ಯತೆಗಳಿವೆ. ಸದ್ಯ ಬ್ಯಾಂಕ್ ಶಾಖೆಗಳಿಗೆ ಪ್ರತಿ ತಿಂಗಳ 2ನೇ ಮತ್ತು 4ನೇ ಶನಿವಾರ ಸಾರ್ವಜನಿಕ ರಜೆ ಇದೆ. ಆದರೆ, ಎಲ್ಲ ತಿಂಗಳ ಶನಿವಾರ, ಭಾನುವಾರವೂ ರಜೆ ಇದೆ ಎಂದು ಉದ್ಯೋಗಿಗಳ ಬೇಡಿಕೆಯಾಗಿದೆ.

ಇದರೊಂದಿಗೆ ಬ್ಯಾಂಕ್‌ ಉದ್ಯೋಗಿಗಳು ಬಹು ನಿರೀಕ್ಷಿತ ಬೇಡಿಕೆ ವೇತನ ಏರಿಕೆಯು ಜೂನ್‌ನಿಂದ ಜಾರಿಯಾಗುವ ಸಾಧ್ಯತೆಗಳಿವೆ ಎಂದು ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ ಹೇಳಿದೆ.

Post a Comment

0Comments

Post a Comment (0)