2026ರ ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಆರಂಭ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಹೊಸದಿಲ್ಲಿ: 2026ರ ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, ಭಾನುವಾರದಂದೇ ಬಜೆಟ್ ಮಂಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಮೂಲಕ ಸತತ 9ನೇ ಬಾರಿಗೆ ಬಜೆಟ್ ಮಂಡಿಸಿ, ತಮ್ಮದೇ ದಾಖಲೆಯನ್ನು ಮುರಿಯಲು ಅವರು ಸಜ್ಜಾಗಿದ್ದಾರೆ.
2026ರ ಕೇಂದ್ರ ಬಜೆಟ್ ಫೆಬ್ರವರಿ 1, ಭಾನುವಾರದಂದು ಮಂಡನೆಯಾಗುವ ಸಾಧ್ಯತೆ
ಸತತ 9ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ ನಿರ್ಮಲಾ ಸೀತಾರಾಮನ್‌
ಇದಕ್ಕೂ ಮುನ್ನ ಶನಿವಾರದಂದು ಬಜೆಟ್ ಮಂಡಿಸಿದ್ದರು ಅರುಣ್ ಜೇಟ್ಲಿ ಮತ್ತು ಸ್ವತಃ ನಿರ್ಮಲಾ ಸೀತಾರಾಮನ್
ಅತಿ ಹೆಚ್ಚು (10 ಬಾರಿ) ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ ಮೊರಾರ್ಜಿ ದೇಸಾಯಿ
ಸಂಸತ್ತಿನ ಬಜೆಟ್ ಅಧಿವೇಶನದ ದಿನಾಂಕಗಳ ಬಗ್ಗೆ ಇನ್ನಷ್ಟೇ ಅಧಿಕೃತ ಪ್ರಕಟಣೆ ಹೊರಡಿಸಬೇಕಿದೆ ಸರ್ಕಾರ.

Post a Comment

0Comments

Post a Comment (0)