ಬೈಲಹೊಂಗಲದಲ್ಲಿ ಸ್ವಾಭಿಮಾನಿ ಕ್ರಿಯಾಶೀಲ ಗೆಳೆಯ ಬಗಳ ವತಿಯಿಂದ ಅಪಘಾತದಲ್ಲಿ ಮೃತಪಟ್ಟ ಲೋಕಾಯುಕ್ತ ಇನ್ಸಪೆಕ್ಟರ್ ಪಂಚಾಕ್ಷರಯ್ಯ ಸಾಲಿಮಠ ಅವರ ಬೃಹತ್ ಕಟೌಟ್ ನಿರ್ಮಿಸಿ ಗೌರವ ಸಲ್ಲಿಸಿ ದೀಪ ಬೆಳಗಿದರು.
ಸ್ವಾಭಿಮಾನಿ ಕ್ರಿಯಾಶೀಲ ಗೆಳೆಯರ ಬಳಗದಿಂದ ಬೃಹತ್ ಕಟೌಟ್ ನಿರ್ಮಾಣ ಲೋಕಾಯುಕ್ತ ಇನ್ಸಪೆಕ್ಟರ್ ಪಂಚಾಕ್ಷರಯ್ಯ ಸಾಲಿಮಠಗೆ ದೀಪ ನಮನ...
ಬೈಲಹೊಂಗಲ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸ್ವಾಭಿಮಾನಿ ಕ್ರಿಯಾಶೀಲ ಗೆಳೆಯರ ಬಳಗ ವತಿಯಿಂದ ಅಪಘಾತದಲ್ಲಿ ಮೃತಪಟ್ಟ ಲೋಕಾಯುಕ್ತ ಇನ್ಸೆಪೆಕ್ಟರ್ ಪಂಚಾಕ್ಷರಯ್ಯ ವೀರಯ್ಯ ಸಾಲಿಮಠ ಅವರ ಬೃಹತ್ ಕಟೌಟ್ ನಿರ್ಮಿಸಿ ಶನಿವಾರ ರಾತ್ರಿ ದೀಪ ನಮನ ಸಲ್ಲಿಸಿ ಭಕ್ತಿಪೂರ್ವಕ ಗೌರವ ಸಲ್ಲಿಸಲಾಯಿತು.
ನಾಡು ಕಂಡ ಅಪರೂಪದ ವ್ಯಕ್ತಿತ್ವದ ಜನಸ್ನೇಹಿತ ಅಧಿಕಾರಿ ಪಂಚಾಕ್ಷರಯ್ಯ ಸಾಲಿಮಠ ಅವರ ನಿಧನದ ವಿಷಯ ತಿಳಿಯುತ್ತಿದ್ದಂತೆ ಕಂಬನಿ ಮಿಡಿದ ನಾಡಿನ ಜನತೆ, ಗೆಳೆಯರ ಬಳಗ ಸದಸ್ಯರು, ನಾಗರಿಕರು, ಆತ್ಮೀಯರು, ಹಿತೈಷಿಗಳು ಸ್ವಯಂ ಪ್ರೇರಣೆಯಿಂದ ಭಾಗವಹಿಸಿ ಪಂಚಾಕ್ಷರಯ್ಯ ಸಾಲಿಮಠ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸಾಲಿಮಠ ಅಮರ ಹೈ, ಅಮರ ಹೈ ಎಂದು ಜಯ ಘೋಷಣೆ ಮೊಳಗಿಸಿದರು.
ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ ಮಾತನಾಡಿ, ‘ನಾಡಿನ ಜನತೆಯೊಂದಿಗೆ ಅವಿಭಾನಭಾವ ಸಂಬಂಧ ಹೊಂದಿದ್ದ ಸಾಲಿಮಠ ಅವರು ಕಾನೂನು ಚೌಕಟ್ಟಿನಲ್ಲಿ ಕೈಕೊಂಡ ದಿಟ್ಟ ನಿರ್ಧಾರಗಳು ಎಂದೆಂದಿಗೂ ಸ್ಮರಣೀಯವಾಗಿವೆ’ ಎಂದರು.
ಸ್ವಾಭಿಮಾನಿ ಕ್ರಿಯಾಶೀಲ ಗೆಳೆಯರ ಬಳಗ ಅಧ್ಯಕ್ಷ ರವಿಕುಮಾರ ಹುಲಕುಂದ, ಶಿಕ್ಷಕ ಸಂತೋಷ ಹುನಶೀಕಟ್ಟಿ ಮಾತನಾಡಿ, ಅಪಘಾತದಲ್ಲಿ ಮೃತಪಟ್ಟ ಲೋಕಾಯುಕ್ತ ಇನ್ಸಪೆಕ್ಟರ್ ಪಂಚಾಕ್ಷರಯ್ಯ ಸಾಲಿಮಠ ಅವರ ಕೊಡುಗೆ ಸ್ಮರಿಸಿದರು.
ಮುಖಂಡರಾದ ಮಂಜುನಾಥ ಜ್ಯೋತಿ, ಮಂಜುನಾಥ ಕರಿಗಾರ, ಈರಣ್ಣಾ ಮೇಲಿಕಟ್ಟಿ, ಬಸವರಾಜ ಸರಾಯದ, ಆನಂದ ತೋಟಗಿ, ರವಿ ವನ್ನೂರ, ಸಚಿನ ಬೊಂಗಾಳೆ, ಬಸವರಾಜ ಚಪಳಿ, ರಾಜು ದಳವಾಯಿ, ಚಂದ್ರು ಉಂಡಿ, ನಾಗರಾಜ ಬಿಡಿಮಠ, ಈಶ್ವರ ಶಿಲ್ಲೇದಾರ, ಶಿವು ಬಿಸನಕೊಪ್ಪ, ಗುರು ಕಡತಾಳ, ಅನೇಕರು ಇದ್ದರು.
************