ಬೆಳಗಾವಿ: ಡಿಸೆಂಬರ್ 8ರಿಂದ ಆರಂಭವಾಗಲಿರುವ ಅಧಿವೇಶನಕ್ಕಾಗಿ ಸಿಎಂ ಸಿದ್ದರಾಮಯ್ಯ ಬೆಳಗಾವಿಗೆ ಆಗಮಿಸಿದರು.
ಸುವರ್ಣ ಸೌಧದ ಹೆಲಿಪ್ಯಾಡ್ ಗೆ ಆಗಮಿಸಿದ ಸಿಎಂ ಅವರಿಗೆ ಸಚಿವರಾದ ಕೆ.ಜೆ. ಜಾರ್ಜ್, ಎಚ್.ಸಿ. ಮಹಾದೇವಪ್ಪ ಹಾಗೂ ಕೃಷ್ಣ ಬೈರೇಗೌಡ ಸಾಥ್ ನೀಡಿದ್ದಾರೆ.
ಬೆಳಗಾವಿಗೆ ಆಗಮಿಸಿದ ಸಿಎಂ ಅವರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಸ್ವಾಗತ ಕೋರಿದ್ದಾರೆ. ಬಳಿಕ ಸಿದ್ದಾರಾಮಯ್ಯ ಅವರು ಪೊಲೀಸ್ ಗೌರವ ಸ್ವೀಕರಿಸಿದರು.