ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಅತಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ದೊಡ್ಡ ಜಿಲ್ಲೆಯ ಕಾರ್ಯಕ್ಷೇತ್ರವಾಗಿರುವದು ಹಲವಾರು ದಶಕಗಳಿಂದ ಅತಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ವಿಭಜಿಸಿ ಬೆಳಗಾವಿ ಚಿಕ್ಕೋಡಿ ಹಾಗೂ ಗೋಕಾಕ್ ಅಥವಾ ಭೈಲಹೊಂಗಲ ರಚಿಸಬೇಕು ಎಂದು ಹೋರಾಟಗಾರರು ಹಲವಾರು ದಿನಗಳಿಂದ ಸಂಘಟನೆಗಳ ಮೂಲಕ ಒತ್ತಡ ಹಾಕುತ್ತಾ ಬರುತ್ತಿದ್ದಾರೆ, ಆಡಳಿತಾತ್ಮಕ ಅನುಕೂಲಕ್ಕಾಗಿ ಜಿಲ್ಲೆಯ ಬೆಳಗಾವಿ ಚಿಕ್ಕೋಡಿ ಹಾಗೂ ಬೈಲಹೊಂಗಲ ಉಪವಿಭಾಗ ರಚಿಸಿ ಆಡಳಿತ ನಡೆಸುತ್ತಿದ್ದಾರೆ. ಜಿಲ್ಲೆಯ ಗಡಿ ಭಾಗದ ತಾಲೂಕುಗಳಾದ ನಿಪ್ಪಾಣಿ, ಚಿಕ್ಕೋಡಿ ಅಥಣಿ, ರಾಯಬಾಗ ಕುಡಚಿ ಹಾಗೂ ಗೋಕಾಕ್ ಸೇರಿದಂತೆ ಈ ತಾಲೂಕಿನ ಜನಸಾಮಾನ್ಯರಿಗೆ ಕೂಗು ಕೇಳಿ ಬರುತ್ತಿದೆ, ಹಲವಾರು ದಿನಗಳಿಂದ ಜಿಲ್ಲೆಯನ್ನು ವಿಭಜಿಸಿ ಜಿಲ್ಲಾ ಕೇಂದ್ರಗಳನ್ನು ಹೊಸದಾಗಿ ರೂಪಿಸಬೇಕೆಂದು ಸಂಘಟನೆಗಳು ತಮ್ಮ ಪ್ರತಿಭಟನೆಯ ಮೂಲಕ ನಗರಗಳನ್ನು ಬಂದು ಮಾಡಿ ಅನೇಕ ಹೋರಾಟಗಳನ್ನು ನಡೆಸುತ್ತದೆ ಬರುತ್ತಿವೆ ಆದರೆ ಈ ಹೋರಾಟಕ್ಕೆ ಇನ್ನೂ ಕೂಡ ಸ್ಪಂದನೆ ಸಿಕ್ಕಿಲ್ಲ ಆದಕಾರಣ ಪ್ರತಿವರ್ಷದಂತೆ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದೆ ಈ ಅಧಿವೇಶನದಲ್ಲಿಯೇ ಜಿಲ್ಲಾ ರಚನೆ ಆಗಬೇಕೆಂದು ಒತ್ತಾಯ ಹಾಗೂ ಜಿಲ್ಲೆಯ ರಚನೆ ಘೋಷಣೆ ಮಾಡಬೇಕೆಂದು ಆಂದೋಲನ ಜೋರಾಗಿದೆ.
ಇದರ ಅಂಗವಾಗಿ ಮನೆ ಗೋಕಾಕ್ ತಾಲೂಕಿನ ಜನತೆ ತಮ್ಮ ನಗರವನ್ನು ಬಂದ್ ಮಾಡಿ ಒಗ್ಗಟ್ಟಿನಿಂದ ಗೋಕಾಕ್ ಜಿಲ್ಲೆ ಮಾಡಬೇಕೆಂದು ಒತ್ತಾಯಿಸಿದ್ದಾರೆ ಅದರಂತೆ ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿಯಿಂದ ಡಿ,6 ರಂದು ನಗರವನ್ನು ಬಂದ್ ಮಾಡಿ ಬೈಲಹೊಂಗಲ ಜಿಲ್ಲೆ ಆಗಬೇಕೆಂದು ಹೋರಾಟವನ್ನು ನಡೆಸಲು ತೀರ್ಮಾನಿಸಿದ್ದಾರೆ.
ಬರುವ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯವಾಗಿ ಯಾವ ರೀತಿ ಚರ್ಚೆ ಆಗುತ್ತೆ ಎಂಬುದನ್ನು ಕಾದು ನೋಡಬೇಕಾಗಿದೆ.