ಬೈಲಹೊಂಗಲ ನಗರದಲ್ಲಿ ಕಾರ್ಯನಿರತ ಪತ್ರಕರ್ತರ ಹಾಗೂ ಸಂಪಾದಕರ ಸಂಸ್ಥೆ ರಿ ನವದೆಹಲಿಯ ಪದಾಧಿಕಾರಿಗಳ ಪ್ರಥಮ ಸಭೆ ನಡೆಯಿತು...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೈಲಹೊಂಗಲ ನಗರದ ಪ್ರವಾಸಿ ಮಂದಿರದಲ್ಲಿ ಕಾರ್ಯನಿರತ ಪತ್ರಕರ್ತರ ಹಾಗೂ ಸಂಪಾದಕರ ಸಂಸ್ಥೆ ನವದೆಹಲಿಯ ಕರ್ನಾಟಕ ರಾಜ್ಯ ರಾಜ್ಯಾಧ್ಯಕ್ಷರಾದ ಯಲ್ಲಪ್ಪ ಭೀಮಸೇನ್ ಪೂಜೇರ (ಮೌರ್ಯ) ಇವರ ಸಾರಥ್ಯದಲ್ಲಿ ಬರುವ ಸಂಘಟನೆಯ ಬೆಳಗಾವಿ ಜಿಲ್ಲೆಯ   ಬೈಲಹೊಂಗಲ ತಾಲೂಕಿನ ಪ್ರಥಮ ಸಭೆ ನಡೆಸಲಾಯಿತು. 
ಸಂಘದ ಸಭೆಯಲ್ಲಿ ಬೆಳಗಾವಿ ಜಿಲ್ಲಾ ಘಟಕದ ಹಾಗೂ ಬೈಲಹೊಂಗಲ ತಾಲೂಕು ಘಟಕದ ನೇತೃತ್ವದಲ್ಲಿ ಜಿಲ್ಲೆಯ ತಾಲೂಕುಗಳಾದ ಚನ್ನಮ್ಮನ ಕಿತ್ತೂರು ಖಾನಾಪುರ, ಗೋಕಾಕ್, ಮೂಡಲಗಿ, ರಾಯಬಾಗ, ರಾಮದುರ್ಗ, ಈ ತಾಲೂಕುಗಳ ಪದಾಧಿಕಾರಿಗಳ ಗುರುತಿನ ಚೀಟಿ (ಐಡಿ ಕಾರ್ಡ್) ವಿತರಣೆ ಮಾಡಲಾಯಿತು.
ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಮಹಾಂತೇಶ್ ಹಿರೇಮಠ ಅವರು ಮಾತನಾಡಿ ಸಂಘವನ್ನು ಬೆಳೆಸಲು ನಾವೆಲ್ಲರೂ ಕೂಡಿ ಶ್ರಮಿಸೋಣ ಪತ್ರಕರ್ತರ ಸಮಸ್ಯೆ ಹಾಗೂ ಕಷ್ಟಗಳಿಗೆ ಸ್ಪಂದಿಸೋಣ ಅದರಂತೆ ಇನ್ನುಳಿದ ತಾಲೂಕುಗಳಲ್ಲಿ ನಮ್ಮ ಸಂಘಟನೆಯನ್ನು ಎಲ್ಲರೂ ಕೂಡಿ ಬೆಳೆಸೋಣ ಎಂದು ಮಾತನಾಡಿದರು. ಹಾಗೂ ಬೆಳಗಾವಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಶಿವಾಜಿ ಸಂಬೋಜಿ ಮಾತನಾಡಿ ಜಿಲ್ಲೆಯಲ್ಲಿ ಸಂಘಟನೆಯನ್ನು ಭದ್ರವಾಗಿ ಕಟ್ಟೋಣ ಜಿಲ್ಲೆಯ ಹಾಗೂ ತಾಲೂಕುಗಳ ಪತ್ರಕರ್ತರ ಸಮಸ್ಯೆಗಳು ಹಾಗೂ ಪತ್ರಕರ್ತರಲ್ಲಿ ಒಗ್ಗಟ್ಟು ಮೂಡಿಸಲು ಬದ್ಧರಾಗಿದ್ದೇವೆ. ಕಾರ್ಯನಿರತ ಪತ್ರಕರ್ತರ ಹಾಗೂ ಸಂಪಾದಕರ ಸಂಸ್ಥೆಯು ಭಾರತ ಸರಕಾರದ ಮಾನ್ಯತೆ ಪಡೆದಿರುವ ಸಂಸ್ಥೆಯಾಗಿದೆ ಇನ್ನಷ್ಟು ಪತ್ರಕರ್ತರನ್ನು ಸದಸ್ಯತ್ವ ಪಡೆಯುವುದರ ಜೊತೆಗೆ ಸಂಘಟಿತರಾಗೂಣ ಎಂದು ಪದಾಧಿಕಾರಿಗಳಿಗೆ ತಿಳಿಸಿದರು. 
ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಹಾಗೂ ಸಂಪಾದಕರ ಸಂಸ್ಥೆ ನವ ದೆಹಲಿಯ ಬೆಳಗಾವಿ ಜಿಲ್ಲೆಯ ಗೌರವಾಧ್ಯಕ್ಷರಾದ ನಿಂಗಪ್ಪ ಕಮಲದಿನ್ನಿ. ಶಿವಾಜಿ ಸುಬಂಜಿ ಅಧ್ಯಕ್ಷರು . ಶಿವಾನಂದ ಬಡವಣ್ಣವರ ಉಪಾಧ್ಯಕ್ಷರು. ರಾಜು ಜಾಂಗಟಿ ಉಪಾಧ್ಯಕ್ಷರು. ಗುರುಪಾದ ದಾನನ್ನವರ ಪ್ರಧಾನ ಕಾರ್ಯದರ್ಶಿ. ಗಣೇಶ್ ನಲವಡೆ ಕಾರ್ಯದರ್ಶಿ. ರುದ್ರಪ್ಪ ಹುಬ್ಬಳ್ಳಿ ಕಾರ್ಯದರ್ಶಿ. ಪುಂಡಲಿಕ ಸುಣ್ಣಗಾರ ಸಂಘಟನಾ ಕಾರ್ಯದರ್ಶಿ. ಬಸವರಾಜ್ ದೇಶನೂರ ಖಜಾಂಚಿ. ಹಾಗೂ ಬೆಳಗಾವಿ ಜಿಲ್ಲೆಯ ತಾಲೂಕುಗಳ ಪದಾಧಿಕಾರಿಗಳಾದ ಕಿರಣ ಕನಗಾವಿ. ಸಿದ್ರಾಮ ಪೂಜಾರಿ. ಮಲ್ಲಿಕಾರ್ಜುನ ಪೊಲೀಸ ಪ್ಪಗೋಳ. ಶಿವಪ್ಪ ಸಂಕಣ್ಣವರ. ಶಿವಾನಂದ ನೇಸರಗಿ. ಶಿವಾನಂದ್ ಕಿಲ್ಲೇದಾರ. ಮಂಜುನಾಥ ಮಣ್ಣವಡರ. ವಸಂತ ದುರದುಂಡಿ. ಹಾಲಸಿದ್ದ ಕದಂ. ಶಿವಪ್ಪ ಕಡಕೋಳ‌ ಸಭೆಯಲ್ಲಿ ಉಪಸ್ಥಿತರಿದ್ದರು.
ವರದಿ:ಗಣೆಶ ನಲವಡೆ.

Post a Comment

0Comments

Post a Comment (0)