*ಕಿತ್ತೂರು ತಾಲೂಕಿನ ಕಲಭಾವಿ ಗ್ರಾಮದಲ್ಲಿ ಸುತ್ತಮುತ್ತಲಿನ ಗ್ರಾಮಗಳಿಗೆ ಚಿರತೆ ಮತ್ತು 2 ಮರಿಗಳ ಓಡಾಟ ಆತಂಕದ ವಾತಾವರಣ ಸೃಷ್ಟಿ*
ಕಿತ್ತೂರು ತಾಲೂಕಿನ ಕಲಭಾವಿ ಗ್ರಾಮದಲ್ಲಿ ಗಾಳಿ ಅಜ್ಜು ಅವರ ಫಾರ್ಮ್ ಹೌಸ್ ಕ್ಯಾಮರಾದಲ್ಲಿ ಪ್ರದೀಪ್ ಫಕೀರಣ್ಣ ಅವರ ಮತ್ತು ಪ್ರಶಾಂತ್ ಹಡಪದ್ ಪರಮೇಶ್ ಅಣ್ಣ ಕಲಬಾವಿ ಅವರ ಕಬ್ಬಿನ ಜಮೀನುಗಳಲ್ಲಿ ಚಿರತೆಯು ಜೊತೆಗೆ ಎರಡು ಮರಿಗಳು ಇದ್ದವು ಎಂದು ಗಾಳಿಯವರ ಫಾರ್ಮ್ ಹೌಸ್ ಕ್ಯಾಮೆರಾದಲ್ಲಿ ಚಿರತೆಗಳು ಶೇರೆಯಾಗಿವೆ ಸತತ 15 ದಿನಗಳ ಕಾಲ ಕಲಬಾವಿ ಮತ್ತು ನಂದಿಹಳ್ಳಿ ಕುಲಮನಟ್ಟಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆತಂಕದ ಭಯ ಉಂಟು ಮಾಡಿವೆ ಕೂಡಲೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡಿ ಚಿರತೆಗಳನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಗಳಿಗೆ ರವಾನಿಸಬೇಕು ಎಂದು ಊರಿನ ಗ್ರಾಮಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ ಅದು ಅಲ್ಲದೆ ಭಯಭೀತರಾಗಿಯೇ ದಿನನಿತ್ಯ ಕೃಷಿ ಚಟುವಟಿಕೆಗಳಿಗೆ ತೆರಳಬೇಕಾಗಿದೆ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಕೆಲಸಕ್ಕೆ ತೆರಳುತ್ತಿರುವ ಕೂಲಿ ಕಾರ್ಮಿಕರಿಗೆ ಕೂಡಾ ತುಂಬಾ ತೊಂದರೆ ಆಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ ವರದಿ : ಶಿವಾನಂದ ಕಿಲ್ಲೇದಾರ