ಉನ್ನತ ಮಟ್ಟದ ಶಿಕ್ಷಣದಿಂದ ದೇಶದ ಅಭಿವೃದ್ಧಿ :ಶಾಸಕ ಬಾಬಾಸಾಹೇಬ ಪಾಟೀಲ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಉನ್ನತ ಮಟ್ಟದ ಶಿಕ್ಷಣದಿಂದ ದೇಶದ ಅಭಿವೃದ್ಧಿ :ಶಾಸಕ ಬಾಬಾಸಾಹೇಬ ಪಾಟೀಲ 
ನೇಸರಗಿ.ದೇಶದ ಅಭಿವೃದ್ಧಿಗೆ ಉನ್ನತ ಮಟ್ಟದ ಶಿಕ್ಷಣಕ್ಕೆ ನಾವು ಹೆಚ್ಚಿನ ಮಟ್ಟದ ಸೌಲಭ್ಯ ಕೊಡುವ ಅಗತ್ಯ ಇದ್ದು ಅದಕ್ಕಾಗಿ ನಾನು ಕ್ಷೇತ್ರದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಶಾಲಾ ಕಟ್ಟಡ, ಸ್ಮಾರ್ಟ್ ಕ್ಲಾಸ್, ವಿನೂತನ ವ್ಯಾಸಂಗ ವ್ಯವಸ್ಥೆಗೆ ಸರ್ಕಾರ ಅನುಧಾನ ನೀಡುತ್ತಿದ್ದು ಇದರ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
    ಅವರು ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನೆಯಡಿಯಲ್ಲಿ ನಿರ್ಮಾಣವಾದ 28 ಲಕ್ಷ ರೂಪಾಯಿಗಳ ಅನುಧಾನದಲ್ಲಿ ನಿರ್ಮಾಣವಾಗಿರುವ ಅಂಗನವಾಡಿ ಶಾಲಾ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
   ಈ ಕಾರ್ಯಕ್ರಮದಲ್ಲಿ ಅಡಿವಪ್ಪ ಮಾಳಣ್ಣವರ, ಯುವ ಮುಖಂಡ ಸಚಿನ ಪಾಟೀಲ,ಶಿಶು ಅಭಿವೃದ್ಧಿ ತಾಲೂಕಾ ಯೋಜನಾಧಿಕಾರಿ ಎಸ್ ಬಿ ಅರುಣಕುಮಾರ, ಎಇಇ ಮಹೇಶ ಹೊಲಿ, ಚನಗೌಡ ಪಾಟೀಲ,ಮಲ್ಲಿಕಾರ್ಜುನ ಕಲ್ಲೋಳಿ,ಮಂಜುನಾಥ ಹುಲಮನಿ,ಶಿವನಪ್ಪ ಮದೇನ್ನವರ, ಬಾಬು ಭಾಗವಾನ,ಪ್ರಕಾಶ ಮುಂಗರವಾಡಿ, ಕಾರ್ಯದರ್ಶಿ ಭೀಮಸಿ ಮಾಳಗಿ ಸೇರಿದಂತೆ ಎಲ್ಲ ಸಮಾಜದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು

Post a Comment

0Comments

Post a Comment (0)