ಸ್ವಾತಂತ್ಯಕ್ಕಾಗಿ‌ ಹೋರಾಡಿದ ಮಹಾತ್ಮರ ಆದರ್ಶಗಳನ್ನು ಪಾಲಿಸಿ -ಉದ್ಯಮಿ ವಿಜಯ ಮೆಟಗುಡ್ಡ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಸ್ವಾತಂತ್ಯಕ್ಕಾಗಿ‌ ಹೋರಾಡಿದ ಮಹಾತ್ಮರ ಆದರ್ಶಗಳನ್ನು ಪಾಲಿಸಿ -ಉದ್ಯಮಿ ವಿಜಯ ಮೆಟಗುಡ್ಡ

ಮರಕುಂಬಿ : ಸಮೀಪದ ಇನಾಮದಾರ ಶುಗರ್ಸ ಲಿ., 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತಿ‌ಸಡಗರದಿಂದ ಆಚರಣೆ ಮಾಡಲಾಯಿತು. ಧ್ವಜಾರೋಹವನ್ನು ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ವಿಜಯ ಮೆಟಗುಡ್ಡ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ‌ ಮೊದಲು ಮರಕುಂಬಿ ಪ್ರೌಡಶಾಲೆಯ ಮಕ್ಕಳಿಂದ ಪ್ರಾರ್ಥನೆ ಮುಖಾಂತರ ಕಾರ್ಯಕ್ರಮವನ್ನು ಪ್ರಾರಂಭಮಾಯಿತು . ಸದರಿ ಕಾರ್ಯಕ್ರಮದಲ್ಲಿ ಕಾರ್ಖಾನೆಯ ನಿರ್ದೇಶಕರು ಹಾಗೂ ಯುವ ಮುಖಂಡರಾದ ವಿಜಯ‌ ಮೆಟಗುಡ್ಡ ಮಾತನಾಡಿ ಸ್ವಾತಂತ್ರ್ಯವನ್ನು ನಾವು ಇಂದು ಬ್ರಿಟೀಷರಿಂದ‌ ಅನೇಕ‌ ಹೋರಾಟ ತ್ಯಾಗ ಬಲಿದಾನದ ಮೂಲಕ‌ ಪಡೆದುಕೊಂಡಿದೆವೆ. ಮಹಾತ್ಮರ ಜೀವನಾದರ್ಶಗಳನ್ನು ಯುವ ಪೀಳಿಗೆಯವರು ರೂಡಿಸಿಕೊಳ್ಳಬೇಕು.ನಾವು ಮಾಡುವ ಕೆಲಸದಲ್ಲಿ ಶ್ರದ್ಧಾ ಭಕ್ತಿಯಿಂದ ಕೆಲಸ ಕಾರ್ಯಗಳನ್ನು ಮಾಡಿ ದೇಶದ ಪ್ರಗತಿಯಲ್ಲಿ ಭಾಗಿಯಾಗಬೇಕು ನಮ್ಮ ನಗರ, ಗ್ರಾಮಗಳನ್ನು ಸ್ವಚ್ಛವಾಗಿ ಶುಚಿಯಾಚಿ ಇಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಮುಂಬರುವ ಹಂಗಾಮಿನಲ್ಲಿ ರೈತಭಾಂದವರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಿ ಕಾರ್ಖಾನೆಯ ಅಭಿವೃದ್ದಿ ಕೈ ಜೊಡಿಸಬೇಕು ಎಂದು ಹೇಳಿದರು. ತದ ನಂತರ ಕಾರ್ಖಾನೆಯ ಮುಖ್ಯ ಆಡಳಿತ ಅಧಿಕಾರಿಯಾದ ರವೀಂದ್ರ ಚ ಪಟ್ಟಣಶೆಟ್ಟಿ ಅವರು ಮಾತನಾಡಿ ನಮಗೆ ಸ್ವಾತಂತ್ರ್ಯ ಸಿಗಲು ಅನೇಕ ಜನ ಸ್ವಾತಂತ್ರ್ಯ ಹೋರಾಟಗಾರು ತಮ್ಮ ಪ್ರಾಣವನ್ನು ನೀಡಿದ್ದಾರೆ ಅದರಂತೆ ಬಂದ ಸ್ವಾತಂತ್ರ್ಯವನ್ನು ನಾವು ಕಾಪಾಡಿಕೊಂಡು ಹೋಗಬೇಕು .ಕಾರ್ಖಾನೆಯಲ್ಲಿ ಎಲ್ಲ ಕಾರ್ಮಿಕ ಹಾಗೂ ಸಿಬ್ಬಂದಿಗಳಿಗೆ ಮುಂಬರುವ ಹಂಗಾಮನ್ನು ಯಶಸ್ವಿಯಾಗಿಸಲು ಕರೆಇತ್ತರು..

ಈ ಸಂದರ್ಭದಲ್ಲಿ ಬಿಜೆಪಿ ಬೈಲಹೊಂಗಲ ಮಂಡಲ ಅಧ್ಯಕ್ಷರಾದ ಸುಭಾಷ್ ತುರುಮರಿ ಹಾಗೂ ಕಾರ್ಖಾನೆ ನಿರ್ಧೇಶಕರಾದ ವಿಜಯ ಮೆಟಗುಡ್ಡ ಅವರ ಧರ್ಮಪತ್ನಿ ಹಾಗೂ ಅವರ ಸುಪುತ್ರ, ಮರಕುಂಬಿ ಪ್ರೌಢಶಾಲೆಯ ಮುದ್ದು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಕಾರ್ಖಾನೆ ಎಲ್ಲ ವಿಭಾಗದ ಮುಖ್ಯಸ್ಥರು ಆಡಳಿತ ವರ್ಗದವರು ಸಿಬ್ಬಂದಿಗಳು ಮತ್ತು ಕಾರ್ಮಿಕ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶೋಭೆ ತಂದರು.
ಕಾರ್ಯಕ್ರಮವನ್ನು ಆಡಳಿತ ಮತ್ತು ಮಾನಸ ಸಂಪನ್ಮೂಲ ಪ್ರಧಾನ ವ್ಯವಸ್ಥಾಪಕರಾದ ವೀರಯ್ಯ ವಿರಕ್ತಮಠ ನಿರೂಪಿಸಿ ವಂದಿಸಿದರು.

Post a Comment

0Comments

Post a Comment (0)