ಬೆಳಗಾವಿಯಲ್ಲಿ 79ನೇ ಸ್ವಾತಂತ್ರ ದಿನಾಚರಣೆಯ ಸಂಭ್ರಮ..

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೆಳಗಾವಿಯಲ್ಲಿ 79ನೇ ಸ್ವಾತಂತ್ರ ದಿನಾಚರಣೆಯ ಸಂಭ್ರಮ..

ನಮ್ಮಲ್ಲಿ ಮಾನವೀಯ ಮೌಲ್ಯಗಳು ಇದ್ದರೆ ದೇಶದ ಪ್ರಗತಿ ಸಾಧ್ಯ..

ಬೇದಭಾವ ಇಲ್ಲದೇ ನಾವೆಲ್ಲಾ ಒಂದೇ ಎಂದು ಕೆಲಸ ಮಾಡುವುದೇ ದೇಶಕ್ಕೆ ನೀಡುವ ಕೊಡುಗೆ.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್..

ಬೆಳಗಾವಿ : ದೇಶವಾಸಿಗಳಾದ ನಮ್ಮಲ್ಲಿ ಮಾನವೀಯ ಮೌಲ್ಯಗಳು ಇದ್ದಾಗ, ಆ ಮೌಲ್ಯಗಳಂತೆ ನಾವು ಬದುಕಿದ್ದಾಗ ದೇಶಕ್ಕೆ ಉತ್ತಮ ಭವಿಷ್ಯದೊಂದಿಗೆ ಅಭಿವೃದ್ಧಿಯೂ ಆಗುವದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಹೇಳಿದ್ದಾರೆ.

ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಧ್ವಜಾರೋಹಣ ಕಾರ್ಯ ನೆರವೇರಿಸಿ, ಜನತೆಗೆ 79ನೇ ಸ್ವಾತಂತ್ಯ ದಿನಾಚರಣೆಯ ಶುಭಾಶಯ ತಿಳಿಸುತ್ತಾ ಮಾತನಾಡಿದ ಜಿಲ್ಲಾಧಿಕಾರಿಗಳು, ಭಾರತೀಯರಾದ ನಾವು ಉತ್ತಮ ಮೌಲ್ಯಗಳನ್ನು ಪಾಲಿಸುತ್ತಾ, ಸಮಾಜಕ್ಕೆ, ನಾಡಿಗೆ, ದೇಶಕ್ಕೆ ಅನುಕೂಲ ಆಗುವಂತಹ ಜೀವನ ನಡೆಸಬೇಕು ಆ ಮೂಲಕ ದೇಶದ ಪ್ರಗತಿಯನ್ನು ಕಾಣಬೇಕು, ದೇಶ ಅಭಿವೃದ್ಧಿ ಆಗಬೇಕಾದರೆ ಜನತೆಯಲ್ಲಿ ಉತ್ತಮ ಮೌಲ್ಯಗಳು ಇರಬೇಕು ಎಂದಿದ್ದಾರೆ.
ಜಾತಿ, ಧರ್ಮ, ಭಾಷೆ, ಜನಾಂಗ ಹಾಗೂ ಕುಲಗಳ ಬೇಧಭಾವ ಮಾಡದೇ ನಾವೆಲ್ಲಾ ಒಂದೇ ಎಂದು ಕೆಲಸ ಮಾಡಿದ್ದಾಗ ಯಶಸ್ಸು ಸಾಧ್ಯ, ಅದಕ್ಕೆ ಉತ್ತಮ ಉದಾಹರಣೆ ಎಂದರೆ ನಮ್ಮ ಜಿಲ್ಲಾಧಿಕಾರಿ ಕಚೇರಿ, ಇಲ್ಲಿ ನಾವೆಲ್ಲಾ ಒಂದೇ ಎಂದು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ, ಅದಕ್ಕೆ ತಕ್ಕ ಹಾಗೂ ಉತ್ತಮ ಸೇವೆಯನ್ನು ನಾವು ನೀಡುತ್ತಿದ್ದೇವೆ ಎಂದರು.
ಒಂದು ಜಿಲ್ಲಾ ಕಚೇರಿ ಉತ್ತಮ ಕೆಲಸ ಮಾಡಿದರೆ, ನಾಡು ಉತ್ತಮ ಆಗುತ್ತದೆ, ನಾಡು ಪ್ರಗತಿ ಆದರೆ ದೇಶದ ಅಭಿವೃದ್ಧಿ ಆಗುತ್ತದೆ, ಈ ನಿಟ್ಟಿನಲ್ಲಿ ನಮ್ಮ ಕಚೇರಿಯ ಸಿಬ್ಬಂದಿಗಳ ಕಾರ್ಯಕ್ಕೆ ನಾನು ತುಂಬಾ ಹೆಮ್ಮೆ ಪಡುತ್ತೇನೆ, ನಮ್ಮ ಕಚೇರಿಯ ಎಲ್ಲಾ ವಿಭಾಗದ ಸಿಬ್ಬಂದಿಗಳು ಅತ್ಯಂತ ಸಮರ್ಥವಾಗಿ ಗುಣಮಟ್ಟದ ಕಾರ್ಯ ಮಾಡುತ್ತಿದ್ದು ಅವರೆಲ್ಲರಿಗೂ ಕೋಟಿ ನಮನಗಳು ಎಂದಿದ್ದಾರೆ.

ಹಿರಿಯ ಸಿಬ್ಬಂದಿ, ಕಿರಿಯ ಸಿಬ್ಬಂದಿ ಎನ್ನದೇ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಕಚೇರಿಗೆ ಉತ್ತಮ ಹೆಸರು ತರುತ್ತಿದ್ದಾರೆ, ಕಚೇರಿಯ ಎಲ್ಲಾ ವರ್ಗದ ಸಿಬ್ಬಂದಿಗಳಿಗೆ ಅವರ ಉತ್ತಮ ಕೆಲಸಕ್ಕೆ ನಾನು ಅಭಿನಂದಿಸುವೆ, ಜೊತೆಗೆ ಹಿರಿಯ ಸಿಬ್ಬಂದಿಗಳು ತಮ್ಮ ಕೆಳಗಿನ ಸಿಬ್ಬಂದಿಗಳಿಗೆ ಯಾವುದೇ ತೊಂದರೆ ನೀಡಬಾರದು ಎಂಬ ಕಿವಿಮಾತು ಹೇಳಿದ್ದು, ಎಲ್ಲಾ ಇಲಾಖೆಗಳ ಕಚೇರಿಗಳು ಇದೆ ರೀತಿ ಉತ್ತಮ ಕಾರ್ಯ ನಿರ್ವಹಿಸಿದ್ದೆ ಆದರೆ ಅದೇ ನಾವು ದೇಶಕ್ಕೆ ಕೊಡುವ ದೊಡ್ಡ ಕೊಡುಗೆ ಎಂದಿದ್ದಾರೆ.

Post a Comment

0Comments

Post a Comment (0)