ಸ್ವಾಮಿ ವಿವೇಕಾನಂದರು ಭಾಷಣ ಮಾಡಿದ ಅಮೇರಿಕಾದ ಚಿಕಾಗೋದಲ್ಲಿನ ಸಭಾ ಭವನಕ್ಕೆ ಭೇಟಿ ನೀಡಿದ: ಸಂಸದರಾದ ಜಗದೀಶ ಶೆಟ್ಟರ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಸ್ವಾಮಿ ವಿವೇಕಾನಂದರು ಭಾಷಣ ಮಾಡಿದ ಅಮೇರಿಕಾದ ಚಿಕಾಗೋದಲ್ಲಿನ ಸಭಾ ಭವನಕ್ಕೆ ಭೇಟಿ ನೀಡಿದ: ಸಂಸದರಾದ ಜಗದೀಶ ಶೆಟ್ಟರ 

ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಸಂಸದರಾದ ಜಗದೀಶ್ ಶೆಟ್ಟರ್ ಅವರು 
1893ರ ಸಪ್ಟೆಂಬರ್ 11 ರಂದು ಅಮೆರಿಕಾದ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಚೈತನ್ಯದ ಚಿಲುಮೆ, ಮಹಾನ್ ಸಂತ, ವೀರ ಸನ್ಯಾಸಿ, ಭಾರತೀಯ ತತ್ವ ಚಿಂತನೆಗಳನ್ನು ಜಗತ್ತಿಗೆ ಪರಿಚಯಿಸಿದ ಪೂಜ್ಯ ಸ್ವಾಮಿ ವಿವೇಕಾನಂದರು 
"Sisters and brothers of America" ಎಂದು ಭಾಷಣ ಆರಂಭಿಸಿ, ಜಗತ್ತಿಗೆ ನಮ್ಮ "ವಸುದೈವ ಕುಟುಂಬಕಂ" ಎನ್ನುವ ಸನಾತನ ಸಂಸ್ಕೃತಿಯನ್ನು ಪರಿಚಯಿಸಿದ್ದ ಅಮೇರಿಕಾದ ಚಿಕಾಗೋದಲ್ಲಿನ ಸಭಾ ಭವನಕ್ಕೆ ಇಂದು ಭೇಟಿ ನೀಡಿದರು. ವಿಶ್ವದ ದೊಡ್ಡಣ್ಣ ಎಂದೆನಿಸಿಕೊಳ್ಳುವ ಅಮೇರಿಕಾದಂತಹ ದೇಶದಲ್ಲಿನ ಒಂದು ರಸ್ತೆಗೆ ನಮ್ಮ ಭಾರತ‍ದ ಸಿಡಿಲ ಸಂತ ಸ್ವಾಮಿ ವಿವೇಕಾನಂದರ ಹೆಸರಿಟ್ಟಿರುವುದು ನಿಜಕ್ಕೂ ಹೆಮ್ಮೆಯ ವಿಷಯ.

ನಮ್ಮ ದೇಶದ ಪ್ರತಿನಿಧಿಯಾಗಿ ಅಮೇರಿಕಾ ದೇಶಕ್ಕೆ ಬಂದ ವಿವೇಕಾನಂದರು ತಮ್ಮ ವಿದ್ವತ್ಪೂರ್ಣ ನುಡಿಗಳ ಮೂಲಕ ಎಲ್ಲರನ್ನೂ ಆಕರ್ಷಿಸಿ, ಜಗದ ಮೆಚ್ಚುಗೆಗೆ ಪಾತ್ರರಾಗಿದ ಈ ಸ್ಥಳವನ್ನು ಇಂದು ಕುಟುಂಬ ಸಮೇತ ವೀಕ್ಷಿಸಿದ್ದು ಅತ್ಯಂತ ಸಂತಸ ತಂದಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)