ಹೊಸಕೋಟೆ:ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ಶ್ರೀ ಪ್ರಭುದೇವರ ಸಂಸ್ಥಾನ ಮಠ ತಪೋ ಕ್ಷೇತ್ರ ಮಾಸ್ತಮರಡಿ ಮಠದ ಶಾಖೆ ಶ್ರೀ ಪ್ರಭುದೇವರ ಮಠ ಹೊಸಕೋಟೆ ಗ್ರಾಮದಲ್ಲಿ 19 ನೇ ವರ್ಷದ ಜಾತ್ರಾ ಮಹೋತ್ಸವ ದಿ 25,6,2025 ರಂದು ಶ್ರೀ ಪ್ರಭುದೇವರ ಮಹಾ ರುದ್ರಾಭಿಷೇಕ, ಅಲಂಕಾರ ಮಹಾಪೂಜೆ, ಹೋಮ ಹವನಗಳು ಹಾಗೂ ಷ ಬ್ರ ವೀರಪ್ರಭು ಪಂಡಿತಾರಾಧ್ಯ ಶಿವಾಚಾರ್ಯ ನೇತೃತ್ವದಲ್ಲಿ ಧಾರ್ಮಿಕ ಸಭೆಗಳು ಗ್ರಾಮದ ಭಕ್ತಾದಿಗಳಿಂದ ಕಾರ್ಯಕ್ರಮ ನಡೆಯಿತು.
ನಾಳೆ ದಿ 26,6,2025 ರಂದು ಮುಂಜಾನೆ 10 ಗಂಟೆಗೆ ಗ್ರಾಮದ ಮುತ್ತೈದೆಯರಿಂದ ಮಹಾ ಕೊಂಬೋತ್ಸವ ಹಾಗೂ ಪೂಜ್ಯರ ಮೆರವಣಿಗೆ ಕಾರ್ಯಕ್ರಮವು ಗ್ರಾಮದ ದುರ್ಗಾದೇವಿ ದೇವಸ್ಥಾನದಿಂದ ಪ್ರಭುದೇವರ ಮಠದ ವರೆಗೆ ಭವ್ಯವಾದ ಡೊಳ್ಳು, ಭಜನೆ ವಾದ್ಯ ಮೇಳಗಳ ಮುಖಾಂತರ ಮೆರವಣಿಗೆಯ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಷ ಬ್ರ ವೀರಪ್ರಭು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಕ್ಷೇತ್ರದ ಹರ ಗುರು ತ್ರಿಮೂರ್ತಿಗಳು ಸಾನಿಧ್ಯದಲ್ಲಿ ಹಾಗೂ ನಾಡಿನ ಗಣ್ಯ ರಾಜಕೀಯ ಮುಖಂಡರುಗಳು, ಗ್ರಾಮದ ಮುಖಂಡರುಗಳು, ರೈತ ಸಂಘದ ಮುಖಂಡರುಗಳು ಧಾರ್ಮಿಕ ಮಹಾಸಭೆಯಲ್ಲಿ ಭಾಗವಹಿಸಲಿದ್ದು ನಂತರ ಮಹಾಪ್ರಸಾದ ಕಾರ್ಯಕ್ರಮವು ನಡೆಯುತ್ತವೆ ಆದಕಾರಣ ಸುತ್ತಮುತ್ತಲಿನ ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಆಶೀರ್ವಾದವನ್ನು ಪಡೆದುಕೊಳ್ಳಿ.