ರೈತರು ಬಿತ್ತನೆ ಬೀಜಗಳ, ಗೊಬ್ಬರಗಳ ಸದುಪಯೋಗ ಪಡೆಯಿರಿ :ಮಹಾಂತೇಶ ದೊಡ್ಡಗೌಡರ
ನೇಸರಗಿ. ಪ್ರಸಕ್ತವಾಗಿ ಮುಂಗಾರು ಮಳೆಯೂ ಅವಧಿಗೂ ಮುಂಚೆ ಬಂದು ಹೊಲ ಗದ್ದೆಗಳಲ್ಲಿ ಮಳೆಯಾಗಿದೆ ಹಸಿಯಾಗಿರುವದರಿಂದ ಸರ್ಕಾರ ರಿಯಾಯತಿ ದರದಲ್ಲಿ ಕೊಡಮಾಡುವ ಬಿತ್ತನೆ ಬೀಜ ಮತ್ತು ರಸ ಗೊಬ್ಬರಗಳನ್ನು ಕೃಷಿ ಇಲಾಖೆಯ ಸಹಯೋಗದೊಂದಿಗೆ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಕೇಂದ್ರಗಳಲ್ಲಿ ಪಡೆದು ಬಿತ್ತನೆ ಮಾಡಿ ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕೆಂದು ಮಾಜಿ ಶಾಸಕರು ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹೇಳಿದರು.
ಅವರು ಶನಿವಾರದಂದು ಸಮೀಪದ ಮೇಕಲಮರ್ಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಈ ಭಾಗದ ರೈತರಿಗೆ ಬೀಜ ಮತ್ತು ರಸ ಗೊಬ್ಬರ ವಿತರಣೆ ಮಾಡಿ ಮಾತನಾಡಿ
ಮಳೆ ಆಧಾರಿತ ಭೂಮಿ ಆಗಿರುವ ನೇಸರಗಿ ಹಾಗೂ ನಾಗನೂರ ಜಿ ಪಂ ಕ್ಷೇತ್ರದಲ್ಲಿ ಒಳ್ಳೆಯ ಪ್ರಮಾಣದಲ್ಲಿ ಮಳೆಯಾಗಿದ್ದು ಇದರಿಂದ ರೈತರು ಬಿತ್ತನೆ ಮಾಡಲು ಸೂಕ್ತ ಸಂದರ್ಭ ಇದ್ದು ಮುಂದೆಯೂ ಚೆನ್ನಾಗಿ ಬೆಳೆ ಬಂದು ಅನ್ನಧಾತ ಸುಖದಿಂದ ಬದಕಲಿ ಅಂದರು.
ಈ ಸಂದರ್ಭದಲ್ಲಿ ಮಾಜಿ ಜಿ ಪಂ ಸದಸ್ಯ ನಿಂಗಪ್ಪ ಅರಿಕೇರಿ, ನೇಸರಗಿ ಕೃಷಿ ಇಲಾಖೆಯ ಅಧಿಕಾರಿ ಆರ್ ಐ ಕುಂಬಾರ, ಪಿಕೆಪಿಎಸ್ ಅಧ್ಯಕ್ಷರಾದ ಬಾಹುಬಲಿ ಟಗರಿ, ಉಪಾಧ್ಯಕ್ಷರಾದ ನಿಂಗಪ್ಪ ಬದ್ನೂರ, ಆಡಳಿತ ಮಂಡಳಿ ಸದಸ್ಯರಾದ ಸಿದ್ದಪ್ಪ ಕಡಕೋಳ,ಶ್ರೀಮತಿ ಶಾಂತವ್ವ ಕಂಡೈನವರ, ನಿಂಗಪ್ಪ ಕುರಗುಂದ,ಚಂದ್ರಪ್ಪ ದುಪದಾಳ, ರವಿ ಹರಿಜನ,ಲಕ್ಕಪ್ಪ ಹುಣಶಿ, ರಾಜು ಯರಡಾಲ, ಬಸಪ್ಪ ಹಣ್ಣಿಕೇರಿ, ಮಕಬುಲಸಾಬ್ ಬಾಳೆಕುಂದ್ರಿ, ಶ್ರೀಮತಿ ಶೋಭವ್ವಾ ಹುಲಮನಿ, ಸುರೇಶ ಮತ್ತಿಕೊಪ್ಪ, ಕಾರ್ಯನಿರ್ವಾಹಕ ಭರತ ಹಣ್ಣಿಕೇರಿ, ಗ್ರಾಮದ ರೈತರು, ರಾಜಕೀಯ ಮುಖಂಡರು, ಹಿರಿಯರು ಪಾಲ್ಗೊಂಡಿದ್ದರು.