ಬೈಲಹೊಂಗಲ: ನಾಟಕಗಳಿಂದ ಸಾಮಾಜಿಕ ಕಳಕಳಿ ಕುರಿತು ಜನರಿಗೆ ತಿಳುವಳಿಕೆ ಮತ್ತು ಸ್ವಂತ ಗ್ರಾಮೀಣ ಪ್ರತಿಭಾವಂತರಿಂದ ನಟಿಸಲ್ಪಡುವ ಗ್ರಾಮೀಣ ಜನರ ಕಲೆಯನ್ನು ಹೊರಕ್ಕೆ ತರಲು ಜಾತ್ರೆಗಳಲ್ಲಿ ಸಾಮಾಜಿಕ ನಾಟಕ ಪ್ರಮುಖವಾಗಿ ಕಾರ್ಯ ಮಾಡುತ್ತಿದ್ದು, ಇದು ಆಧುನಿಕ ಕಾಲದಿಂದಲೂ ನಡೆದುಕೊಂಡು ಬಂದ ಕಲಾ ಸಂಪ್ರದಾಯ ಎಂದು ಮಾಜಿ ಶಾಸಕ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಅವರು ತಾಲೂಕಿನ ವಣ್ಣೂರ ಗ್ರಾಮದಲ್ಲಿ ಶ್ರೀ ಗ್ರಾಮದೇವತೆಯರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಧರ್ಮದ ದೊರೆ ಎಂಬ ಸಾಮಾಜಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.
ಟಿ ಎ ಪಿ ಸಿ ಎಮ್ ಎಸ್ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ, ಮಾಜಿ ತಾ ಪಂ ಸದಸ್ಯ ಬಸವರಾಜ ಅಂಗಡಿ, ಶೇಖರ ಬಶೆಟ್ಟಿ, ರವಿಗೌಡ ಪಾಟೀಲ, ವಿಶಾಲಗೌಡ ಪಾಟೀಲ, ಮಲ್ಲೇಶ ಹಳ್ಳೂರಿ, ನಾಗಪ್ಪ ಬಶೆಟ್ಟಿ, ಭೀಮಪ್ಪ ಸೋಮನಟ್ಟಿ, ಹೊನ್ನಾನಾಯ್ಕ ಪಾಟೀಲ, ಬಾಬು ಶೇಬನ್ನವರ, ರೇವಪ್ಪ ಗಾಣಿಗೇರ, ಈರಪ್ಪ ಹಳ್ಳೂರಿ, ಸಂಗಯ್ಯ ಬಾಗೋಜಿ, ಮಾರುತಿ ಕೆಳಗೇರಿ, ಬಸಪ್ಪ ಕುಲಕರ್ಣಿ, ವೀರಭದ್ರ ಬಡಿಗೇರ, ಪ್ರಕಾಶ ಗಿಡಗಿ, ಕಲ್ಮೀಶ ಕುಲಕರ್ಣಿ, ಗದಗಯ್ಯ ಹಿರೇಮಠ ಸೇರಿದಂತೆ ಗ್ರಾಮದ ಮುಖಂಡರು, ಸುತ್ತಮುತ್ತಲಿನ ಗ್ರಾಮಸ್ಥರು, ವನ್ನೂರ ಗ್ರಾಮಸ್ಥರು ಪಾಲ್ಗೊಂಡಿದ್ದರು.