ಚನ್ನಮ್ಮನ ಕಿತ್ತೂರು : ಅಮಾಯಕ ಪ್ರವಾಸಿಗರನ್ನು ಕೊಂದ ಉಗ್ರರಿಗೆ ದೇಶದ ಸೈನಿಕರು ತಕ್ಕ ಉತ್ತರವನ್ನು ನೀಡಿದ್ದಾರೆ. ಈ ಮೂಲಕ ಪ್ರಪಂಚಕ್ಕೆ ಒಂದು ಸಂದೇಶವನ್ನು ನೀಡಿದ್ದಾರೆ ಎಂದು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ತಿಳಿಸಿದ್ದಾರೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಂತರ ದೇಶದ ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಚೆನ್ನಮ್ಮನ ಕಿತ್ತೂರಿನಲ್ಲಿ ಆಯೋಜಿಸಲಾಗಿದ್ದ ಬೃಹತ್ ತಿರಂಗಾ ಯಾತ್ರೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಕಿತ್ತೂರಿನಲ್ಲಿ ಇಂದು ಒಂದು ರೀತಿಯ ಹಬ್ಬದ ವಾತಾವರಣದೊಂದಿಗೆ ತಿರಂಗಾ ಯಾತ್ರೆಯಲ್ಲಿ ಸಾರ್ವಜನಿಕರು, ಮಾಜಿ ಸೈನಿಕರು, ವೈದ್ಯಕೀಯ ಸಂಘ, ಆಟೋ ಚಾಲಕರ ಸಂಘ, ಮಹಿಳೆ ಮಕ್ಕಳು ಸೇರಿದಂತೆ ಸ್ವಾಮೀಜಿಗಳು ಸಹ ಪಾಲ್ಗೊಂಡಿದ್ದರು.
ಬೃಹತ್ ರಾಷ್ಟ ಧ್ವಜವನ್ನು ಹಿಡಿದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಸಾಗಿದ್ದು ತಿರಂಗ ಯಾತ್ರೆಗೆ ಮತ್ತೊಂದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಬಿಜೆಪಿ ಬೆಳಗಾವಿ ಜಿಲ್ಲಾಧ್ಯಕ್ಷರು, ಕಿತ್ತೂರು ಮಂಡಲ ಅಧ್ಯಕ್ಷರು ಶ್ರೀಕರ್ ಕುಲಕರ್ಣಿ, ಬಿಜೆಪಿ ಮುಖಂಡರಾದ ಶ್ರೀಮತಿ ಲಕ್ಷ್ಮಿತಾಯಿ ಇನಾಮದಾರ, ರವಿರಾಜ್ ಇನಾದಾರ, ಡಾII ಪರವನ್ನವರ, ಡಾll ವೆಂಕಟೇಶ್ ಉಣಕಲ್ಕರ, ಕಲ್ಮಠ ಶ್ರೀಗಳು, ನಿಚ್ಚಣಕಿ ಶ್ರೀಗಳು, ವಿವಿಧ ಮಠಗಳ ಸ್ವಾಮೀಜಿಗಳು ಹಾಜರಿದ್ದರು.
ವರದಿ : ಮಂಜುನಾಥ ಮಣ್ಣವಡ್ಡರ