ಚೆನ್ನಮ್ಮನ ಕಿತ್ತೂರ : ಆಪರೇಷನ್ ಸಿಂಧೂರ್” ಸಮಯದಲ್ಲಿ ತಮ್ಮ ಶೌರ್ಯವನ್ನು ಪ್ರದರ್ಶಿಸಿದ ಭಾರತೀಯ ಸಶಸ್ತ್ರ ಪಡೆಗಳಿಗೆ ಕೃತಜ್ಞತೆ ಸಲ್ಲಿಸಲು ತಿರಂಗ ಯಾತ್ರೆಯನ್ನು ಇದೆ 20 ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಮಹಾಂತೇಶ್ ದೊಡ್ಡಗೌಡರ ಹೇಳಿದರು.
ಇಂದು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ತಿರಂಗ ಯಾತ್ರೆಯ ಪಕ್ಷಾತೀತ ಪೂರ್ವಭಾವಿ ಸಭೆಯ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ “ದೇಶವು ಜನರು ಬಯಸಿದ್ದನ್ನು ಮಾಡಿದೆ. ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಿದ ನಮ್ಮ ಸೈನಿಕರ ಬೆಂಬಲಕ್ಕೆ ಇಡೀ ರಾಷ್ಟ್ರ ನಿಂತಿದೆ” ಎಂದು ಹೇಳಿದರು.
ನಮ್ಮ ಸೈನಿಕರ ಶೌರ್ಯ ಪರಾಕ್ರಮಕ್ಕೆ ಪಾಕಿಸ್ತಾನ ಕಂಗಾಲಾಗಿದ್ದು. ಅದೆಷ್ಟೋ ಕ್ಷಿಪಣಿಗಳನ್ನು ಆಕಾಶದಲ್ಲಿ ಹೊಡೆದು ಉರುಳಿಸಲಾಗಿದೆ ಜೊತೆಗೆ ಪಾಕಿಸ್ತಾನದ ಒಳಗೆ ನುಗ್ಗಿ ನಮ್ಮ ಸೈನಿಕರು ತಮ್ಮ ಶೌರ್ಯವನ್ನು ಪ್ರದರ್ಶಿಸಿದ್ದಾರೆ ಅದರ ನೆನಪಿಗಾಗಿ ಈ ತಿರಂಗ ಯಾತ್ರೆಯನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಹಾಗೆ ತಿರಂಗ ಯಾತ್ರೆ ಕುರಿತು ಮಾಹಿತಿ ನೀಡಿದ ವೈದ್ಯಕೀಯ ಸಂಘದ ಅಧ್ಯಕ್ಷ ಡಾ!! ವೆಂಕಟೇಶ ಉಣಕಲ್ಕರ್ ಕಿತ್ತೂರು ಚೆನ್ನಮ್ಮ ಕೋಟೆಯಿಂದ ತಿರಂಗ ಯಾತ್ರೆ ಪ್ರಾರಂಭವಾಗಿ ಚೆನ್ನಮ್ಮ ಸರ್ಕಲ್ ವರೆಗೆ ಯಾತ್ರೆ ಸಾಗಲಿದೆ. ತಿರಂಗ ಯಾತ್ರೆಯಲ್ಲಿ ತಾಲೂಕಿನ ಎಲ್ಲ ಸಂಘಟನೆಗಳು, ವ್ಯಾಪಾರಸ್ಥರು ಕೂಲಿ ಕಾರ್ಮಿಕರು ನಾಗರಿಕರು ನೂರಾರು ಜನ ಭಾಗಿಯಾಗಲಿದ್ದು ಕಿತ್ತೂರು ನಗರದಲ್ಲಿ ಇದೊಂದು ಅವಿಸ್ಮರಣೆಯ ಕ್ಷಣವಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಗರದ ವ್ಯಾಪಾರಸ್ಥರ ಸಂಘ, ಆಟೋ ಚಾಲಕರ ಸಂಘ, ನ್ಯಾಯವಾದಿಗಳ ಸಂಘ, ಕನ್ನಡ ಪರ ಸಂಘಟನೆಗಳು, ಹಾಗೂ ನಗರದ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಮಂಜುನಾಥ ಮಣ್ಣವಡ್ಡರ