ಬೈಲಹೊಂಗಲ: ಹಿಂದೂ ಹುಲಿ ಯತ್ನಾಳ ಬಿಜೆಪಿಯಿಂದ ಉಚ್ಚಾಟನೆ! ಪಂಚಮಸಾಲಿ ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ...
ಬೈಲಹೊಂಗಲ: ಹಿಂದೂ ಹುಲಿ ಹಿಂದುತ್ವದ ಫೈಯರ್ ಬ್ರಾಂಡ್ ಎಂದೇ ಖ್ಯಾತರಾಗಿರುವ ಧೀಮಂತ ನಾಯಕ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಶುಕ್ರವಾರ ತಾಲೂಕಿನ ಪಂಚಮಸಾಲಿ ಸಮಾಜ ಸಂಘಟನೆ, ಹಿಂದೂ ಪರ ಸಂಘಟನೆಗಳು, ಭಜರಂಗದಳ ಹಾಗೂ ಕನ್ನಡಪರ ಹೋರಾಟಗಾರರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅನೇಕ ಮುಖಂಡರು ಮಾತಾನಾಡಿದರು. ಪ್ರಾಮಾಣಿಕ ಹೋರಾಟಗಾರ ಬಸನಗೌಡ ಪಾಟೀಲ್ ಯತ್ನಾಳ ರು ಬಿಜೆಪಿ ಪಕ್ಷದಲ್ಲಿದ್ದರೆ ತಮಗೆ ಉಳಿಗಾಲವಿಲ್ಲ ಎಂದು ಹೆದರಿರುವ ಪಕ್ಷದೊಳಗಿನ ಭ್ರಷ್ಟರು ನಯ ವಂಚಕರು ಸೇರಿ ಮೋಸ ಮಾಡಿ ಯತ್ನಾಳರನ್ನು ಉಚ್ಚಾಟಿಸುವಂತೆ ಮಾಡಿದ್ದಾರೆ. ಬಿಜೆಪಿಯಲ್ಲಿರುವ ಭ್ರಷ್ಟ ಅಪ್ಪ ಮಕ್ಕಳ ಕುಮ್ಮಕ್ಕಿನಿಂದ ಯತ್ನಾಳರಂಥ ಹಿಂದುತ್ವದ ಹೋರಾಟಗಾರರಿಗೆ ಅನ್ಯಾಯವಾಗಿದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಮತ್ತು ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯವರು ಕೂಡಲೆ ಯತ್ನಾಳರ ಉಚ್ಚಾಟನೆ ರದ್ದು ಪಡಿಸಿ ಮತ್ತೆ ಅವರನ್ನು ಗಿರವಯುತವಾಗಿ ಬಿಜೆಪಿ ಪಕ್ಷಕ್ಕೆ ಬರಮಾಡಿಕೊಳ್ಳಬೇಕು ಇದೇ ಎಪ್ರಿಲ್ 13 ರಂದು ಒಳಗಾಗಿ ಬಿಜೆಪಿ ಪಕ್ಷ ತನ್ನ ನಿಲುವನ್ನು ತಿಳಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ರಾಜ್ಯದಲ್ಲಿ ಉಳಿಗಾಲವಿಲ್ಲ ಎಂಬುದನ್ನು ಮಹಾನ ನಾಯಕರು ತಿಳಿದುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀಶೈಲ ಬೋಳಣ್ಣವರ, ಮಹೇಶ ಹರಕುಣಿ, ಮುರುಗೇಶ ಗುಂಡೂರ, ರಾಜು ಸೊಗಲ, ಶಿವಾನಂದ ಕಾಲಕಾರ,ಸಿ.ಕೆ.ಮೆಕ್ಕೇದ, ಮಲ್ಲಿಕಾರ್ಜುನ ಹುಂಬಿ, ಧೂಳಪ್ಪ ಇಟಗಿ,ರಾಜು ಸೊಗಲ, ಶಿವಾನಂದ ಬಡ್ಡಿಮನಿ, ಮಹಾಂತೇಶಗೌಡ ಪಾಟೀಲ, ಮಹಾಂತೇಶ ಗುಂಡೂರ, ಶಿವಾನಂದ ಬೆಳಗಾವಿ, ರಿತೇಶ ಪಾಟೀಲ, ಸಿದ್ಧಾರೂಢ ಹೊಂಡಪ್ಪನವರ, ಬಿ.ಬಿ.ಗಣಾಚಾರಿ, ಪ್ರಕಾಶ ಹುಂಬಿ, ಶಿವಾನಂದ ಗುಗ್ಗರಿ, ಶಶಿಕುಮಾರ್ ಪಾಟೀಲ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.