ನಾಳೆಯಿಂದ ಶ್ರೀ ದಾನಮ್ಮದೇವಿ ಜಾತ್ರಾ ಮಹೋತ್ಸವ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ನಾಳೆಯಿಂದ ಶ್ರೀ ದಾನಮ್ಮದೇವಿ ಜಾತ್ರಾ ಮಹೋತ್ಸವ

ಬೈಲಹೊಂಗಲ : ಪಟ್ಟಣದ ಚೆನ್ನಮ್ಮ ಉಪನಗರದ ಶ್ರೀ ದಾನಮ್ಮದೇವಿ ದೇವಸ್ಥಾನದ 16ನೇ ವರ್ಷದ ಜಾತ್ರಾ ಮಹೋತ್ಸವ ಏಪ್ರಿಲ್ 25 ರಿಂದ ಮೇ 7ವರೆಗೆ ಜರುಗುವುದು. ದಿ. 25 ರಂದು ದೇವಿಗೆ ರುದ್ರಾಭೀಷೇಕ, ಕುಂಕುಮಾರ್ಚನೆ, ದೊಡವಾಡ ಹಿರೇಮಠದ ಜಡಿಸಿದ್ದೆಶ್ವರ ಸ್ವಾಮೀಜಿ ಅವರಿಂದ ಷಟಸ್ಥಲ ಧ್ವಜಾರೋಹಣ ನೇರವೇರುವುದು.

ದಿ. 26 ರಂದು ಸಂಜೆ ಜರುಗುವ ಅಧ್ಯಾತ್ಮಿಕ ಪ್ರವಚನ ವನ್ನೂ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ ಉದ್ಘಾಟಿಸುವರು. ಮುನವಳ್ಳಿ ಮುರುಘರಾಜೇಂದ್ರ ಸ್ವಾಮೀಜಿ, ಮಡಿವಾಳೇಶ್ವರ ಸ್ವಾಮೀಜಿ ನೇತೃತ್ವ ವಹಿಸುವರು. ದೇವಸ್ಥಾನ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ಅಧ್ಯಕ್ಷತೆ ವಹಿಸುವರು. ಗೋಕಾಕ ಕಪರಟ್ಟಿ ಶ್ರೀ ಗುರು ಮಹಾದೇವ ಆಶ್ರಮದ ಬಸವರಾಜ ಮಹಾಸ್ವಾಮಿಜಿಗಳಿಂದ ಅಧ್ಯಾತ್ಮಿಕ ಪ್ರವಚನ ಜರುಗುವುದು.
ದಿ. 28 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ದಾನಮ್ಮದೇವಿ ತಾಯಿ ಸಿರಸಮ್ಮಳಿಗೆ ಸೀಮಂತ, ಸಂತಾನರಹಿತ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಭಕ್ತಿಗೀತೆಗಳ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ.

ದಿ.29 ರಂದು ನಡೆಯುವ ಅಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನಿಧ್ಯವನ್ನು ಹೊಸೂರ ಗಂಗಾಧರ ಸ್ವಾಮೀಜಿ ವಹಿಸುವರು.

ದಿ. 30 ರಂದು ಶ್ರೀ ದಾನಮ್ಮದೇವಿಯ ಜನನ, ತೊಟ್ಟಿಲಲ್ಲಿ ಹಾಕುವ ಕಾರ್ಯಕ್ರಮ, ಸಾನಿಧ್ಯ ಜಾಲಿಕೊಪ್ಪ ಶಿವಾನಂದ ಗುರೂಜಿ ವಹಿಸುವರು.

ದಿ. 1 ಅಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನಿಧ್ಯವನ್ನು ಜಾಕ್ಕನಾಯ್ಕನಕೊಪ್ಪ ಶಿವಯೋಗಿನಿದೇವಿ ವಹಿಸುವರು.

ದಿ. 2 ರಂದು ಮುಂಜಾನೆ ಜಂಗಮದಂಪತಿಗಳ ಪಾದಪೂಜಾ ಹಾಗೂ ಶ್ರೀ ದಾನಮ್ಮದೇವಿ ಬಷ್ಟಗಿ ಕಾರ್ಯಕ್ರಮ. ಸಾನಿಧ್ಯವನ್ನೂ ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ ವಹಿಸುವರು.
ದಿ. 3 ರಂದು ಜರಗುವ ಅಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನಿಧ್ಯವನ್ನು ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ವಹಿಸುವರು.

ದಿ. 4 ರಂದು ಗೋಧೂಳಿ ಮುಹೂರ್ತದಲ್ಲಿ ದೇವಿಗೆ ಮಾಂಗಲ್ಯಧಾರಣ ಹಾಗೂ ಅಕ್ಷತಾರೋಪಣ. ಸಾನಿದ್ಯವನ್ನೂ ಗದಗ ಸದಾಶಿವಾನಂದ ಸ್ವಾಮೀಜಿ ವಹಿಸುವರು.

ದಿ. 5 ರಂದು ತೇರಿನ ಕಳಸದ ಪೂಜೆ, ಕಳಸಾರೋಹಣ, ಸಂಜೆ ಪ್ರವಚನ ಕಾರ್ಯಕ್ರಮದ ಸಾನಿಧ್ಯ ಗೋಕಾಕ ಶೂನ್ಯ ಸಂಪಾದನಾಮಠದ ಮುರುಘರಾಜೇಂದ್ರ ಸ್ವಾಮೀಜಿ ವಹಿಸುವರು.

ದಿ. 6 ರಂದು ಬೆಳಿಗ್ಗೆ ದೇವಿಗೆ ದೈವದ ವತಿಯಿಂದ ಉಡಿ ತುಂಬುವದು. ಸುಮಂಗಲೆಯರಿಗೆ ಉಡಿ ತುಂಬುವುದು. ಭಕ್ತರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ. ಸಂಜೆ ಅಧ್ಯಾತ್ಮಿಕ ಪ್ರವಚನದ ಮಹಾಮಂಗಳ ಜರುಗುವುದು.
ದಿ. 7 ರಂದು ಮಹಾಪೂಜೆ, ಮಹಾಪ್ರಸಾದ ಸಂಜೆ ಮಹಾರಥೋತ್ಸವ ಜಾರುಗುವುದು.

ದಿ. 26 ರಿಂದ ಮೇ 6 ವರೆಗೆ ಪ್ರತಿದಿನ ಸಂಜೆ 6.30 ರಿಂದ 8.30 ವರೆಗೆ ಅಧ್ಯಾತ್ಮಿಕ ಪ್ರವಚನ, ದೇವಿಗೆ ರುದ್ರಾಭಿಷೇಕ, ಕುಂಕುಮಾರ್ಚನೆ ಜರುಗುವುದು. ಭಕ್ತರು ತನು ಮನ ಧನದಿಂದ ಸೇವೆ ಸಲ್ಲಿಸಬೇಕೆಂದು ಶ್ರೀ ದಾನಮ್ಮದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)