ಬೆಂಗಳೂರು: ರಾಜ್ಯದಲ್ಲಿದ್ದಾರೆ ಸುಮಾರು 98 ಪಾಕ್ ಪ್ರಜೆಗಳು..!
ಬೆಂಗಳೂರು: ಕಾಶ್ಮೀರದ ಪಹಲ್ಲಾಮ್ ನಲ್ಲಿ ಉಗ್ರರು ದಾಳಿ ನಡೆಸಿ 26 ಯಾತ್ರಿಗಳನ್ನ ಗುಂಡಿಟ್ಟು ಹತ್ಯೆ ಮಾಡಿದ ಬೆನ್ನಲ್ಲೆ ಕೇಂದ್ರ ಸರ್ಕಾರ ಪಾಕ್ ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಮುರಿದುಕೊಂಡಿತ್ತು.
ಈ ಬೆನ್ನಲ್ಲೆ ದೇಶದಲ್ಲಿರುವ ಪಾಕ್ ಪ್ರಜೆಗಳನ್ನ ಗಡಿಪಾರು ಮಾಡಲು ತೀರ್ಮಾನ ಮಾಡಿ ಎಲ್ಲಾ ರಾಜ್ಯ ಸರ್ಕಾರಗಳಿಗೆ ರಾಜ್ಯದಲ್ಲಿರೋ ಪಾಕ್ ಪ್ರಜೆಗಳನ್ನ ಗುರುತು ಮಾಹಿತಿ ಕಲೆ ಹಾಕುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್ಲ ರಾಜ್ಯದ ಸಿಎಂಗಳಿಗೆ ಸೂಚನೆ ನೀಡಿದ್ದರು.
ಈ ಬೆನ್ನಲ್ಲೆ ರಾಜ್ಯ ಸರ್ಕಾರ ಮಾಹಿತಿ ಕಲೆ ಹಾಕಿದ್ದು, ರಾಜ್ಯದಲ್ಲಿ ಸುಮಾರು 100ಜನ ಪಾಕಿಸ್ತಾನದ ಪ್ರಜೆ ಇದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಅದರಲ್ಲಿ 9 ಜನ ಮಾತ್ರ ತಾತ್ಕಾಲಿಕ ವೀಸಾದಲ್ಲಿ ಇದ್ದು, ಬ್ಯುಸಿನೆಸ್, ಶಿಕ್ಷಣ, ಪ್ರವಾಸ ಇತರೆ ವಿಸಾದಡಿ ಬಂದವರು ಇದೇ ತಿಂಗಳು 27 ಕ್ಕೆ ದೇಶದಿಂದ ಹೊರಡಬೇಕು. ವೈದ್ಯಕೀಯ ಕಾರಣದಿಂದ ಕರ್ನಾಟಕದಲ್ಲಿ ಇರೋರು 29 ನೇ ದಿನಾಂಕದಂದು ಹೊರಡಬೇಕು. ಲಾಂಗ್ ಲೈಫ್ ವೀಸಾ ಇಂದ್ರೆ - ಭಾರತೀಯ ಪ್ರಜೆ ಮದುವೆ ಆಗಿರೋರು, ಭಾರತೀಯ ತಂದೆ - ಪಾಕಿಸ್ತಾನದ ತಾಯಿ ಅವರ ಮಕ್ಕಳ ವಿಚಾರದಲ್ಲಿ ಇರೋ ಸುಮಾರು 84 ಜನರ ವೀಸಾ ಬಗ್ಗೆ ಇನ್ನೂ ಕೇಂದ್ರ ಸರ್ಕಾರದಿಂದ ಆದೇಶ ಬಂದಿಲ್ಲ.