ಬೈಲಹೊಂಗಲ- ಪಟ್ಟಣದ ಹೊಸೂರ ರಸ್ತೆಯಲ್ಲಿನ ಶ್ರೀ ಭಗಳಾಂಭಾದೇವಿ ದೇವಸ್ಥಾನದ ಜಾತ್ರಾ ಮಹೋತ್ಸವವು ಏ. 14 ಮತ್ತು 15 ರಂದು ಜರುಗಲಿದೆ.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೈಲಹೊಂಗಲ- ಪಟ್ಟಣದ ಹೊಸೂರ ರಸ್ತೆಯಲ್ಲಿನ ಶ್ರೀ ಭಗಳಾಂಭಾದೇವಿ ದೇವಸ್ಥಾನದ ಜಾತ್ರಾ ಮಹೋತ್ಸವವು ಏ. 14 ಮತ್ತು 15 ರಂದು ಜರುಗಲಿದೆ.

ದಿ.14 ರಂದು ಮುಂಜಾನೆ 6-00 ಘಂಟೆಗೆ ಶ್ರೀದೇವಿಗೆ ಅಬೀಷೇಕ, ಕುಂಕುಮಾರ್ಚನೆ ಮತ್ತು ವಿಶೇಷ ಪೂಜೆ, 9- ಘಂಟೆಗೆ ಪಾಲಕಿ ಉತ್ಸವ, ಮುತೈದೆಯರಿಂದ ಕುಂಭಮೇಳ ನಡೆಯಲಿದ್ದು, ಮಧ್ಯಾಹ್ನ 12-00 ಧರ್ಮಸಭೆ, 2-00 ಘಂಟೆಗೆ ಅನ್ನಪ್ರಸಾದ ಜರುಗಲಿದೆ.

ದಿ. 15 ರಂದು ಮುಂಜಾನೆ 6-00 ಘಂಟೆಗೆ ಪೂಜೆ, ಶ್ರೀದೇವಿಯ ಪಾರಾಯಣ, ರುದ್ರಗಣಹೋಮ, ಮಧ್ಯಾಹ್ನ 12-00 ಘಂಟೆಗೆ ವಿವಿಧ ಕ್ಷೇತ್ರದ ಸಾಧಕರಿಗೆ ಮಾತಾಶ್ರೀ ಭಗಳಾಂಭಾದೇವಿ ಪ್ರಶಸ್ತಿ ವಿತರಣಾ ಸಮಾರಂಭ, ಸಾಯಂಕಾಲ 6-00 ಘಂಟೆಗೆ ಮಹಾತ್ಮರಿಂದ ಧರ್ಮಸಭೆ, 7-30 ಕ್ಕೆ ಶ್ರೀದೇವಿಗೆ ಉಡಿ ತುಂಬುವ ಕಾರ್ಯಕ್ರಮ, 9-00 ಗಂಟೆಗೆ ದೀಪೋತ್ಸವ, 10 ಗಂಟೆಗೆ ಧರ್ಮಸಭೆ ಜರುಗಲಿದೆ. ಮುರಗೋಡದ ಶ್ರೀ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಶ್ರೀ, ಶಾಖಾ ಮೂರುಸಾವಿರ ಮಠದ ಪ್ರಭು ನೀಲಕಂಠ ಶ್ರೀ, ಹೂಲಿಯ ಉಮೇಶ್ವರ ಶಿವಾಚಾರ್ಯ ಶ್ರೀ, ರುದ್ರಾಕ್ಷಿಮಠದ ಬಸವಲಿಂಗ ಶ್ರೀಗಳು, ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯರು, ಹೊಸೂರಿನ ಗಂಗಾಧರ ಸ್ವಾಮೀಜಿ, ಬೈಲಹೊಂಗಲದ ಮಡಿವಾಳೇಶ್ವರ ಶ್ರೀಗಳು, ಯಕ್ಕುಂಡಿಯ ಪಂಚಾಕ್ಷರ ಶ್ರೀಗಳು, ನೇಸರಗಿ ಅಂಬಾ ಮಠದ ಡಾ.ವೀರಪ್ರಭು ಪಂಡಿತಾರಾದ್ಯ ಶಿವಾಚಾರ್ಯರು, ಚಿಪ್ಪಲಕಟ್ಟಿಯ ಬಾಳೇಹೊನ್ನೂರು ಶಾಖಾ ಮಠದ ಕಲ್ಮೇಶ್ವರ ಶ್ರೀಗಳು ಆಗಮಿಸಲಿದ್ದು, ಧರ್ಮಾಧಿಕಾರಿ ಡಾ.ವೀರಯ್ಯ ಸ್ವಾಮೀಜಿ ಹಿರೇಮಠ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಜಾತ್ರೆಯ ಅಂಗವಾಗಿ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಾತ್ರಾ ಉತ್ಸವ ಸಮೀತಿ ಪ್ರಕಟಣೆಯಲ್ಲಿ ತಿಳಿಸಿದೆ.

Post a Comment

0Comments

Post a Comment (0)