ಬೈಲಹೊಂಗಲ: ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ, ಹೊಸ ಭಾರತದ ನಿರ್ಮಾತೃ, ದೇಶದ ಮೊದಲ ಕಾನೂನು ಸಚಿವರಾಗಿ, ದೇಶ ಕಂಡ ಮಹಾನ್ ಚೇತನವೆ ಡಾ.ಬಿ.ಆರ್. ಅಂಬೇಡ್ಕರ್. ಎಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.
ಸಮೀಪದ ಹೊಸೂರ ಗ್ರಾಮದ ಭಾರತ ರತ್ನ ಡಾ. ಬಿ.ಅರ್.ಅಂಬೇಡ್ಕರ್ ಕಾಲೊನಿಯಲ್ಲಿ ಜರುಗಿದ 134 ನೇ ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿ, ಜಾತಿ ವ್ಯವಸ್ಥೆಯ ವಿರುದ್ದು ಹೋರಾಟ ನಡೆಸಿ ಸಮಾನತೆ, ಸಂಘಟನೆ ಮತ್ತು ಸಂಘರ್ಷಣೆಯ ಮೂಲಕ ದೇಶದಲ್ಲಿ ಸಾಮಾಜಿಕ ಸಮಾನತೆಗಾಗಿ ಹಗಲಿರಳು ಶ್ರಮವಹಿಸಿ ಸಂವಿಧಾನ ಬರೆದ ಡಾ. ಬಿ,ಅರ್.ಅಂಬೇಡ್ಕರ್ ಅವರ ಕಾರ್ಯ ಶ್ಲಾಘನೀಯ.
ಛಲದಿಂದ ಭವ್ಯ ಭಾರತದ ಕನಸು ಕಾಣುತ್ತಾ ಜಾತೀಯ ಬೆಂಕಿಯ ಬಲೆಯ ನಡುವೆಯೂ ಬೆಳೆದ ಅವರು ನಮ್ಮ ದೇಶಕ್ಕೆ ಸಂವಿಧಾನ ಅರ್ಪಿಸಿದ್ದಾರೆ.
ಇಡೀ ಭಾರತಕ್ಕೆ ಸ್ಫೂರ್ತಿ ತುಂಬಿದ್ದಾರೆ, ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ನೇತಾರ. ಮಹಿಳಾ ಸಮಾನತೆ, ಪ್ರಗತಿಯ ಕನಸು ಕಂಡ ಮಹಾ ನಾಯಕ ನಮಗೆಲ್ಲ ನ್ಯಾಯ ಒದಗಿಸಿದವರು. ಸಾಮಾಜಿಕ ಸಮಾನತೆಯ ಕನಸು ಕಂಡ ಇವರು ಛಲದಿಂದ ಭವ್ಯ ಭಾರತದ ಕನಸು ಕಾಣುತ್ತಾ ಕಷ್ಟದ ನಡುವೆಯೂ ಬೆಳೆದು ದೇಶದ ಅಗ್ರ ನಾಯಕರಲ್ಲಿ ಒಬ್ಬರಾದರು.
ಅದೆಷ್ಟೋ ನೊಂದ ಸಮುದಾಯದ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದ ಅಂಬೇಡ್ಕರ್, ತಮ್ಮ ಜ್ಞಾನದ ಮೂಲಕ ಭಾರತದ ಸಂವಿಧಾನ ಶಿಲ್ಪಿಯಾಗಿ ರೂಪುಗೊಂಡರು. ಸಂವಿಧಾನ ಭಾರತದ ಪಾಲಿನ ಪವಿತ್ರ ಗ್ರಂಥವಾಗಿದ್ದು, ಪ್ರಜಾಪ್ರಭುತ್ವಕ್ಕೊಂದು ಅರ್ಥ ಕಲ್ಪಿಸಿಕೊಡುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಹಿಂದುಳಿದ ಸಮುದಾಯಗಳ ಜನರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಹಯಕವಾಗಿದೆ.
ವಿದೇಶದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ (ಪಿಎಚ್‌ಡಿ) ಪದವಿಯನ್ನು ಪಡೆದ ಮೊದಲ ಭಾರತೀಯರಾದ ಇವರ ಜನ್ಮದಿನವನ್ನು ದೇಶದಲ್ಲಿ "ಸಮಾನತೆ ದಿನ' ಎಂದು ಆಚರಿಸಲಾಗುತ್ತದೆ.
ದಲಿತರು ಮತ್ತು ಅಸ್ಪೃಶ್ಯರ ಉನ್ನತಿಗೆ ಬಾಬಾಸಾಹೇಬರ ಕೊಡುಗೆಯನ್ನು ನೆನಪಿಸಿಕೊಳ್ಳುತ್ತೇವೆ ಎಂದರು.
ಸವದತ್ತಿ ತಾಲೂಕಿನ ಕೃಷಿಕ ಸಮಾಜ ಅಧ್ಯಕ್ಷ ಉಮೇಶ ಬೋಳೆತ್ತಿನ, ಮಾತನಾಡಿ, ದೇಶದ ಭವಿಷ್ಯಕ್ಕಾಗಿ ಸರ್ವಸ್ವವನ್ನೆ ಸಮರ್ಪಿಸಿಕೊಂಡ ಅಂಬೇಡ್ಕರ್ ಕಾರ್ಯ ಅಮರ ಎಂದರು.
ಗ್ರಾಮ ಸಾಹಯಕ ಮಹಾದೇವ ಇಂಗಳಗಿ ಮಾತನಾಡಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಸ್.ಡಿ ಕನಕನ್ನವರ, ಪುಂಡಲಿಕ ಇಂಗಳಗಿ ಮಾತನಾಡಿದರು.
ವೇದಿಕೆಯ ಮೇಲೆ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ತಳವಾರ ಉಪಾಧ್ಯಕ್ಷೆ ನಿರ್ಮಲಾ ಲಂಗೋಟಿ, ಸದಸ್ಯರಾದ ಮಲ್ಲಿಕಾರ್ಜುನ ಕರಡಿಗುದ್ದಿ, ಅಪ್ಪು ಇಳಿಗೇರ, ಮಲ್ಲಿಕಾರ್ಜುನ ವಕ್ಕುಂದ, ಈರಣ್ಣ ಸಂಪಗಾಂವ, ಜಯಶ್ರೀ ಇಂಗಳಗಿ, ಮಲ್ಲವ್ವ ಬಾರಿಗಿಡದ, ಗಂಗವ್ವ ಅರಬಳ್ಳಿ, ರುಕ್ಸಾನ ಶೇಖ, ರೋಶನಬಿ ಶೇಖ ಇದ್ದರು.
ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆ ವಿಭಾಗದ ಡಿ ಆರ್ ಯು ಸಿ ಸಿ ಕೇಂದ್ರ ಸರ್ಕಾರದ ನಾಮ ನಿರ್ದೇಶಕ ಸದಸ್ಯ ಎಫ್.ಎಸ್.ಸಿದ್ದನಗೌಡರ ಹಾಗೂ ತಾಲ್ಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಉಮೇಶ ಬೋಳೆತ್ತಿನ ಅವರನ್ನು ಸತ್ಕರಿಸಿದರು.
ಕಾರ್ಯಕ್ರಮದಲ್ಲಿ ಮಹಾಂತೇಶ ಮಲಮೇತ್ರಿ, ಶಂಕರ ಹಿರುಣವರ, ವಿಠಲ ಮಲಮೆತ್ರಿ, ಅಕ್ಷಯ ಗಡ್ಡಿ, ಮನಿಕಂಠ ಮಲಮೇತ್ರಿ, ಸೊಮಲಿಂಗ ಜುಮೆತ್ರಿ, ಮಹಾದೇವ ಹಿರುಣ್ಣವರ, ಶೋಬಾ ಮಲಮೇತ್ರಿ, ಶಂಕರೆವ್ವ ಜುಮೇತ್ರಿ, ಸುಧಾ ಹಿರುಣ್ಣವರ ಸೇರಿದಂತೆ ನೂರಾರು ಜನರು ಇದ್ದರು.
ಪ್ರಮೊದ ಇಂಗಳಗಿ ಸ್ವಾಗತಿಸಿದರು ಸಂಜು ಜುಮೇತ್ರಿ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದ ನಂತರ ಗ್ರಾಮದ ಪ್ರಮುಖ ಬಿದಿಗಳಲ್ಲಿ ವಾದ್ಯ ಮೇಳದೊಂದಿಗೆ ನಡೆದ ಕುಂಬ ಮೇಳದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಮೆರುವಣಿಗೆ ನಡೆಯಿತು.