ಬೆಳಗಾವಿ:ಎರಡು ಲಾರಿ,ಎರಡು ಬಸ್ ಹಾಗೂ ದ್ವಿಚಕ್ರ ವಾಹನದ ಮಧ್ಯೆ ಸರಣಿ ಅಪಘಾತ ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೆಳಗಾವಿ: ಮಂಗಳವಾರ ದಿ 25-3-25 ರಂದು ಸಾಯಂಕಾಲ 4:22 ಗಂ ಸಮಯದಲ್ಲಿ ಎರಡು ಲಾರಿ,ಎರಡು ಬಸ್ ಹಾಗೂ ದ್ವಿಚಕ್ರ ವಾಹನದ ಮಧ್ಯೆ ಸರಣಿ ಅಪಘಾತ ನಡೆದಿರುವ ಘಟನೆ ಹೀರೆಬಾಗೇವಾಡಿ ಬಳಿಯ ಬಡೆಕೊಳ್ಳ ಘಾಟನಲ್ಲಿ ನಡೆದಿದೆ.

ಜಿಟಿ ಜಿಟಿ ಮಳೆಯಲ್ಲಿ ಎರಡು ಲಾರಿ,ಎರಡು ಬಸ್‌ ಹಾಗೂ ದ್ವಿಚಕ್ರ ವಾಹನದ ಮಧ್ಯೆ ಸರಣಿ ಅಪಘಾತವಾಗಿದೆ. ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಸರಣಿ ಅಪಘಾತದಿಂದ ಕೆಲಹೊತ್ತು ವಾಹನಗಳು ಸಾಲು ಸಾಲಾಗಿ ನಿಂತು ಟ್ರಾಫಿಕ್ ಸಮಸ್ಯೆ ಉಂಟಾಯಿತು. ಈ ಕುರಿತು ಹೀರೆಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

0Comments

Post a Comment (0)