ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ನನ್ನು (Basanagowda Patil Yatnal) ಕೊನೆಗೂ ಬಿಜೆಪಿ ಹೈಕಮಾಂಡ್ 6 ವರ್ಷಗಳ ಕಾಲ ಉಚ್ಛಾಟನೆ (expul) ಮಾಡಿದೆ.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬಿಜೆಪಿ ರಾಜ್ಯ ನಾಯಕತ್ವದ ವಿರುದ್ಧ, ಅದರಲ್ಲೂ ವಿಜಯೇಂದ್ರ (Vijayendra) ಹಾಗೂ ಯಡಿಯೂರಪ್ಪ (Yediyurappa) ಅವರ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಾ ತನ್ನದೇ ಪಕ್ಷಕ್ಕೆ ಬಿಸಿ ತುಪ್ಪವಾಗಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ನನ್ನು (Basanagowda Patil Yatnal) ಕೊನೆಗೂ ಬಿಜೆಪಿ ಹೈಕಮಾಂಡ್ 6 ವರ್ಷಗಳ ಕಾಲ ಉಚ್ಛಾಟನೆ (expul) ಮಾಡಿದೆ.
ಈ ಮೂಲಕ ಕರ್ನಾಟಕ ಬಿಜೆಪಿಗೆ ಬಿ. ಎಸ್. ಯಡಿಯೂರಪ್ಪ ಅವರೇ ಸರ್ವೋಚ್ಚ, ಅವರ ಮಾತೇ ಫೈನಲ್ ಎಂದು ಬಿಜೆಪಿ ವರಿಷ್ಠರು ಪರೋಕ್ಷವಾಗಿ ಘೋಷಿಸಿದಂತಾಗಿದೆ. ಇದರೊಂದಿಗೆ ರಾಜ್ಯ ಬಿಜೆಪಿಯಲ್ಲಿನ ಬಣಬಡಿದಾಟಕ್ಕೆ (Faction fighting) ಕೊನೆಗೂ ಹೈಕಮಾಂಡ್ ಬ್ರೇಕ್ ಹಾಕಿದೆ. ಹಾಗಾದ್ರೆ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಕೆಂಡ ಕಾರುತ್ತಿದ್ದ ಯತ್ನಾಳ್ ಅವರ ಘನಘೋರ ತಪ್ಪುಗಳ ಕುರಿತು ವಿವರ ಇಲ್ಲಿದೆ:

ಒಟ್ಟು ಮೂರು ಬಾರಿ ಉಚ್ಛಾಟನೆಗೊಂಡ ಯತ್ನಾಳ್

ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಉಚ್ಛಾಟಿಸಿ ಆದೇಶ ಹೋರಡಿಸಿದೆ. ಆದರೆ ಇದಕ್ಕೂ ಮುನ್ನ ಈ‌ ಹಿಂದೆ ಎರಡು ಬಾರಿ ಪಕ್ಷದ ಉಚ್ಛಾಟನೆ ಶಿಕ್ಷೆಗೆ ಗುರಿಯಾಗಿದ್ದರು. ಹೌದು, 2009 ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಅಮಾನತ್ತಾಗಿದ್ದರು ಯಡಿಯೂರಪ್ಪ, ಶೋಬಾ ಕರಂದ್ಲಾಜೆ ಸದಾನಂದಗೌಡ ವಿರುದ್ದ ಮಾತನಾಡಿ 6 ವರ್ಷಗಳ ಕಾಲ ಪಕ್ಷದಿಂದ ಅಮಾನತ್ತು ಶಿಕ್ಷೆಗೆ ಒಳಗಾಗಿದ್ದರು. ಆದರೆ, 2014 ರಲ್ಲಿ ಅಮಾನತ್ತು ಶಿಕ್ಷೆ ರದ್ದು ಮಾಡಿ ಪಕ್ಷಕ್ಕೆ ಕರೆ ತಂದರು. ಆದರೆ, ಈ ವೇಳೆ ಯಡಿಯೂರಪ್ಪ ಬಿಜೆಪಿಯಲ್ಲಿರಲಿಲ್ಲ. ಮುಂದುವರೆದು, 2014 ರ ಲೋಕಸಭಾ ಚುನಾವಣೆ ಬಳಿಕ ಪರಿಷತ್ ಚುನಾವಣೆಗೆ ಪಕ್ಷದ ಟಿಕೆಟ್ ಸಿಗದ ಕಾರಣ 2016 ರಲ್ಲಿ ಬಂಡಾಯ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಕಾರಣ ಮತ್ತೇ 2016 ರಲ್ಲಿ 6 ವರ್ಷಗಳ ಕಾಲ ಎರಡನೇ ಬಾರಿ ಉಚ್ಚಾಟನೆ ಶಿಕ್ಷೆಗೆ ಗುರಿಯಾದರು. ಆದರೆ, 2018 ರಲ್ಲಿ ಕೇಂದ್ರದ ವರಿಷ್ಟರು ಹಾಗೂ ಯಡಿಯೂರಪ್ಪ ಅಮಾನತ್ತು ಶಿಕ್ಷೆ ರದ್ದು ಮಾಡಿ ಯತ್ನಾಳರನ್ನು ವಾಪಸ್ ಬಿಜೆಪಿಗೆ ಕರೆ ತಂದರು. ಆದ್ದರಿಂದ ಪ್ರಸ್ತುತ ಮೂರನೇ ಬಾರಿಗೆ ಉಚ್ಛಾಟನೆಗೊಂಡಿದ್ದಾರೆ. ಹಾಗಾದರೆ, ಮೂರನೇ ಬಾರಿಗೆ ಯತ್ನಾಳ ಅವರು, ಉಚ್ಛಾಟನೆಯಾಗಲೂ ಕಾರಣವಾದ 8 ವಿಚಾರಗಳು ಇಲ್ಲಿದೆ…..

ಬಣ ರಾಜಕೀಯ: 

2023 ರಲ್ಲಿ ವಿಜಯೇಂದ್ರ ಅವರು ಬಿಜೆಪಿಯ ರಾಜ್ಯಧ್ಯಕ್ಷನಾಗಿ ನೇಮಕವಾದಾಗಿನಿಂದಲೂ ವಿಜಯೇಂದ್ರ ವಿರುದ್ದ ಅಬ್ಬರಿಸಿ ಬೊಬ್ಬಿರಿಯುತ್ತಾ, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ಬಿ. ಪಿ. ಹರೀಶ್‌ ರಂತಹ ಕೆಲವು ನಾಯಕರನ್ನು ಸೇರಿಸಿ ಪಕ್ಷದ ರಾಜ್ಯ ನಾಯಕತ್ವದ ವಿರುದ್ದವೇ ರಾಜಕೀಯ ಚಟುವಟಿಕೆ ನಡೆಸಿ, ಬಿಜೆಪಿಯೊಳಗೆ ಒಡಕು ಸೃಷ್ಟಿಸುವಂತೆ ವರ್ತಿಸಿದ್ದು.

ಮುಖ್ಯಮಂತ್ರಿ ಹುದ್ದೆಗಾಗಿ ಸಾವಿರಾರು ಕೋಟಿ ಲಂಚ: 

ಮುಖ್ಯಮಂತ್ರಿ ಹುದ್ದೆಗಾಗಿ ಬಿಜೆಪಿ ಹೈಕಮಾಂಡ್ ಗೆ ಯಾರು ಎರಡೂವರೆ ಸಾವಿರ ಕೋಟಿ ರೂ. ಕೊಡುತ್ತಾರೋ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿಯುತ್ತದೆ ಎಂದು ಹೇಳುವ ಮೂಲಕ ಭಾರೀ ಸಂಚಲನ ಸೃಷ್ಟಿಸಿದ್ದರು. ಜೊತೆಗೆ ಆಪರೇಷನ್ ಕಮಲ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಕೆಡವಿ ತಾವು ಮುಖ್ಯಮಂತ್ರಿಯಾಗಲು ಬಿಜೆಪಿಯ ಒಬ್ಬ ನಾಯಕರು 1000 ಕೋಟಿ ರೂ.ಗಳನ್ನು ಕೂಡಿಟ್ಟುಕೊಂಡಿಟ್ಟುಕೊಂಡಿದ್ದಾರೆ ಎಂದು ಹೇಳಿದ್ದರು.

ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆಗೆ ಪಟ್ಟು: 

ವಿಜಯೇಂದ್ರ ಕಡು ವಿರೋಧಿಯಾಗಿ ಬದಲಾಗಿದ್ದ ಯತ್ನಾಳ್, ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆಗೆ ಮೂಲಕ ಆಯ್ಕೆ ಮಾಡಬೇಕೆಂದು ಕೇಂದ್ರ ವರಿಷ್ಠರ ಮುಂದೆ ತಮ್ಮ ಬಣದೊಂದಿಗೆ ದುಂಬಾಲು ಬಿದ್ದಿದ್ದರು. ಇದರೊಂದಿಗೆ ಸಂಧಾನ ನಡೆಸಲು ಆರ್‌ಎಸ್‌ಎಸ್‌ ನಾಯಕರು ಸಹ ಇತ್ತೀಚೆಗೆ ಸಭೆ ಕರೆದಿದ್ದು. ಆದರೆ ಯತ್ನಾಳ್ ಬಣ ಈ ಸಭೆಗೂ ಆಗಮಿಸದೇ ತಮ್ಮ ಅಸಮಾಧಾನವನ್ನು ನೇರವಾಗಿಯೇ ತೋಡಿಕೊಂಡಿದ್ದರು. ಇದು ಒಂದರ್ಥದಲ್ಲಿ ಆರ್‌ಎಸ್‌ಎಸ್‌ಗೆ ತೋರಿದ ಆಗೌರವದಂತೆಯೇ ಭಾಸವಾಗಿತ್ತು.

ಜಿಲ್ಲಾಧ್ಯಕ್ಷರ ನೇಮಕಾತಿ ಸರಿಯಿಲ್ಲ: 

ಕೆಲವು ದಿನಗಳಿಂದ ರಾಜ್ಯ ಬಿಜೆಪಿಯು ಪ್ರತಿ ಜಿಲ್ಲಾ ಘಟಕಕ್ಕೂ ಅಧ್ಯಕ್ಷರ ನೇಮಕಾತಿ ಕುರಿತು ಚುನಾವಣೆಗಳನ್ನು ನಡೆಸುತ್ತಿದೆ. ಆದರೆ ಈ ಕುರಿತು ಸಹ ಹರಿಹಾಯ್ದ ಯತ್ನಾಳ್ ಅವರು, ಪಕ್ಷದೊಳಗಿನ ಆಂತರಿಕ ಚುನಾವಣೆಗಳು ಸಂಘಟಿತ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಆರೋಪಿಸುತ್ತಿದ್ದರು. ಇದರೊಂದಿಗೆ ವಿಜಯೇಂದ್ರ ಅಧಿಕಾರಕ್ಕಾಗಿ ತಮ್ಮನ್ನು ಬೆಂಬಲಿಸುವ ಅಭ್ಯರ್ಥಿಗಳ ಹೆಸರುಗಳನ್ನು ಮಾತ್ರ ಕೇಂದ್ರ ನಾಯಕತ್ವಕ್ಕೆ ಕಳುಹಿಸಿದ್ದಾರೆ ಎಂದು ದೂರಿದ್ದರು.

ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಕೆಂಡ: 

ಯಡಿಯೂರಪ್ಪ ಅವರು 2019 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದಾಗ ಕೆಲ ಕಾರಣಗಳಿಂದ ಯತ್ನಾಳ್ ಅವರನ್ನು ಸಚಿವರನ್ನಾಗಿ ಮಾಡಲಿಲ್ಲ. ಇದರಿಂದ ಕುಪಿತಗೊಂಡ ಯತ್ನಾಳ್ ಅಂದಿನಿಂದಲೂ ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರ ವಿರುದ್ದ ಅಂದಿನಿಂದಲೂ ಕೆಂಡ ಕಾರುತ್ತಿದ್ದರು. ಮುಂದುವರೆದು, ಯಡಿಯೂರಪ್ಪ ಅವರ ಅಧಿಕಾರದಲ್ಲಿ ಅವರ ಮಗ ಮೂಗು ತೂರಿಸುತ್ತಿದ್ದಾರೆ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದರು. ಇದು ರಾಜ್ಯ ಬಿಜೆಪಿಗೆ ಮುಜುಗುರ ತಂತು. ಇದಾದ ಬಳಿಕ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗ್ತಾರೆ ಆಗಲೂ ಕೂಡ ಯತ್ನಾಳ್ ಅವರಿಗೆ ಸಂಪುಟದಲ್ಲಿ ಯಾವುದೇ ಸ್ಥಾನಮಾನ ಸಿಗುವುದಿಲ್ಲ. ಇದರಿಂದ ಮತ್ತಷ್ಟು ಕೋಪಗೊಂಡ ಯತ್ನಾಳ್ ತನಗೆ ಅಧಿಕಾರ ಸಿಗದಿರರಲು ಕಾರಣ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಎಂದು ನೇರವಾಗಿ ಅವರ ವಿರುದ್ಧ ವಾಗ್ದಾಳಿ ನಡೆಸಲು ಆರಂಭಿಸುತ್ತಾರೆ. ಇದು ಸಹ ಬಿಜೆಪಿ ಕಳೆದ ವಿಧಾನಸಭ ಚುನಾವಣೆಯಲ್ಲಿ66 ಸ್ಥಾನಗಳಿಗೆ ಕುಸಿಯಲು ಯತ್ನಳ್ ಅವರ ಈ ಹೇಳಿಕೆಗಳು ಕಾರಣ ಎನ್ನಲಾಗಿತ್ತು.

ಸರ್ಕಾರದ ವಿರುದ್ಧ ರೆಬೆಲ್ಸ್ ಹೋರಾಟ: 

ಸರ್ಕಾರದ ವಿರುದ್ಧ ಬಿಜೆಪಿ ಒಗ್ಗಟ್ಟಾಗಿ ಹೋರಾಟ ನಡೆಸಿಬೇಕಿತ್ತು. ಆದ್ರೆ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಜೆಡಿಎಸ್ ಪಾದಯಾತ್ರೆಯಿಂದ ಒಡಕು ಉಂಟಾಯಿತು. ಆ ಪಾದಯಾತ್ರೆಯಲ್ಲಿ ಬಿಜೆಪಿಯ ರೆಬೆಲ್ಸ್‌ ನಾಯಕರು ಭಾಗವಹಿಸಲೇ ಇಲ್ಲ. ಆದರೇ ಅವರೇ ವಾಲ್ಮೀಕಿ ನಿಗಮ ಹಗರಣದಲ್ಲಿ ಪ್ರತ್ಯೆಕ ಪಾದಯಾತ್ರೆ ಘೋಷಸಿತ್ತು, ಆದ್ರೆ ಇದನ್ನು ನಡೆಸಲಿಲ್ಲ. ಜೊತೆಗೆ ವಿಜಯೇಂದ್ರ ಬಣ ಹೊರತು ಪಡಿಸಿ ವಕ್ಫ್ ಕಾಯಿದೆ ಪರ ಹೋರಾಟ ನಡೆಸಿದ್ದು.

ಲಿಂಗಾಯತ ವೋಟ್ ಬ್ಯಾಂಕ್ ಇಬ್ಬಾಗ ಪ್ರಯತ್ನ: 

ಕರ್ನಾಟಕ ಬಿಜೆಪಿಗೆ ಲಿಂಗಾಯುತ ಸಮುದಾಯವೇ ಪ್ರಮುಖ ವೋಟ್ ಬ್ಯಾಂಕ್ ಆಗಿತ್ತು. ಆದರೆ ಯಡಿಯೂರಪ್ಪ ಅವರು ಸಕ್ರಿಯ ರಾಜಕೀಯದಿಂದ ಹಿಂದೆ ಸರಿದ ನಂತರ ಯತ್ನಾಳ್ ಅವರು, ಇಡೀ ಲಿಂಗಾಯತ ಸಮುದಾಯ ಬಿವೈ ವಿಜಯೇಂದ್ರ ಹಿಂದೆ ಇಲ್ಲ. ಬಿಎಸ್ ಯಡಿಯೂರಪ್ಪನವರ ವರ್ಚಸ್ಸು ವಿಜಯೇಂದ್ರಗೆ ಇಲ್ಲ. ವಿಜಯೇಂದ್ರ ಬದಲಿಸಿದರೆ ಯಾವುದೇ ಹಿನ್ನಡೆ ಆಗುವುದಿಲ್ಲ ಎನ್ನುವ ಬಣ, ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರರನ್ನು ಬದಲಿಸುವಂತೆ ಪಟ್ಟ ಹಿಡಿದಿದ್ದು. ಯಾಕೆಂದ್ರೆ ಇದು, ಯತ್ನಾಳ್ ವರ್ಸಸ್ ವಿಜಯೇಂದ್ರ ಎನ್ನುವಂತೆ ಲಿಂಗಾಯುತ ಸಮುದಾಯದಲ್ಲಿ ಬಿಜೆಪಿಯ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುವ ಸಾಧ್ಯೆತೆ ಇತ್ತು ಎನ್ನಬಹುದು.

ನೋಟಿಸ್ಗೆ ಡೋಂಟ್ ಕೇರ್: 

ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ಯತ್ನಾಳ್ ಅವರಿಗೆ ಕೇಂದ್ರ ಹೈಕಮಾಂಡ್ಗೆ ನೋಟಿಸ್ ನೀಡಿ 72 ಗಂಟೆಗಳ ಒಳಗಾಗಿ ವಿವರಣೆ ಕೇಳಿತ್ತು. ಆದರೆ, ಇದಕ್ಕೂ ಮುನ್ನ ಕೆಲವು ವರ್ಷಗಳಲ್ಲಿ ಎರಡು ಬಾರಿ ನೋಟಿಸ್ ನೀಡಿತ್ತು.

Post a Comment

0Comments

Post a Comment (0)