ಪ್ರಯಾಗ್‌ರಾಜ್‌: ಭೂಮಿ ಮೇಲೆ ಅತೀಹೆಚ್ಚು ಜನ ಒಂದೆಡೆ ಸೇರುವ ಅತೀದೊಡ್ಡ ಆಚರಣೆ ಎಂಬ ಖ್ಯಾತಿಗೆ ಪಾತ್ರವಾದ ಮಹಾಕುಂಭಮೇಳ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಪ್ರಯಾಗ್‌ರಾಜ್‌: ಭೂಮಿ ಮೇಲೆ ಅತೀಹೆಚ್ಚು ಜನ ಒಂದೆಡೆ ಸೇರುವ ಅತೀದೊಡ್ಡ ಆಚರಣೆ ಎಂಬ ಖ್ಯಾತಿಗೆ ಪಾತ್ರವಾದ ಮಹಾಕುಂಭಮೇಳ ಸೋಮವಾರ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಆರಂಭವಾಗಲಿದೆ.
ಗಂಗಾ, ಯಮುನಾ ಮತ್ತು ಸರಸ್ವತಿ ಸಂಗಮ ದಲ್ಲಿ ಪುಣ್ಯ ಸ್ನಾನ ಮಾಡಲು ಈಗಾಗಲೇ ಲಕ್ಷಾಂತರ ಜನ ಪ್ರಯಾಗ್‌ರಾಜ್‌ನಲ್ಲಿ ಸೇರಿದ್ದಾರೆ.
ಕುಂಭಮೇಳ ಆರಂಭವಾಗುವುದಕ್ಕೆ 2 ದಿನ ಬಾಕಿ ಯಿದ್ದರೂ ಶನಿವಾರವೇ 25 ಲಕ್ಷ ಮಂದಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಸೋಮವಾರದ ದಿನ ಮೊದಲ ಶಾಹಿ ಸ್ನಾನ ನಡೆಯಲಿದ್ದು, ಇದರಲ್ಲಿ ಭಾಗಿಯಾಗಲು ಈಗಾಗಲೇ ಜನ ಪ್ರಯಾಗ್‌ರಾಜ್‌ಗೆ ಪ್ರಯಾಣಿಸಿದ್ದಾರೆ.
ಸಕಲ ಸಿದ್ಧತೆ: ಮಹಾಕುಂಭದಲ್ಲಿ ಭಾಗಿಯಾಗಲು ಆಗಮಿಸುವ ಸಂತರು, ಸಾಧುಗಳು, ಸಾಮಾನ್ಯ ಜನರನ್ನು ಸ್ವಾಗತಿಸಲು ಪ್ರಯಾಗ್‌ರಾಜ್‌ನಲ್ಲಿ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ. ಇದಕ್ಕಾಗಿಯೇ ಮಹಾಕುಂಭ ಹೆಸರಿನಲ್ಲಿ ನಗರವನ್ನು ಸ್ಥಾಪನೆ ಮಾಡಲಾಗಿದೆ.

Post a Comment

0Comments

Post a Comment (0)