30-10-2024
ಯರಗಟ್ಟಿ ಸುದ್ದಿ
*ಕರಾಳ ದಿನಾಚರಣೆಗೆ ಅನುಮತಿ ನೀಡಿದರೆ ರಾಜ್ಯದಾದ್ಯಂತ ಉಗ್ರ ಹೋರಾಟ -ರಫೀಕ ಡಿ ಕೆ*
ಯರಗಟ್ಟಿ ; ರಾಜ್ಯೊತ್ಸವ ದಿನದಂದು ಎಮ್ ಇ ಎಸ್ ಪುಂಡರಿಗೆ ಕರಾಳ ದಿನಾಚರಣೆ ಮಾಡಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಯರಗಟ್ಟಿ ತಹಶಿಲ್ದಾರ ಮುಖೇನ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.
ಒಂದು ವೇಳೆ ಅನುಮತಿ ನೀಡಿದರೆ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ರಾಜ್ಯದಾದ್ಯಂತ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಯರಗಟ್ಟಿ ತಾಲೂಕು ಅಧ್ಯಕ್ಷ ರಫೀಕ ಡಿ ಕೆ ಹೇಳಿದರು.
ಈ ವೇಳೆ ಕರವೇ ಉಪಾಧ್ಯಕ್ಷ ಮಂಜು ಬಾವಿಹಾಳ
ಪ್ರಧಾನ ಕಾರ್ಯದರ್ಶಿ ಚನ್ನಪ್ಪ ಎಸ್ ಪಣದಿ, ಈರಣ್ಣ ಹುಲ್ಲೂರ,ವಿಕ್ರಂ ದೇಸಾಯಿ,
ಲಕ್ಕಪ್ಪ ಜಗದಾರ,ನವೀನ ನೀಸಾನಿಮಠ ವಿನೋದ್ ದೇವರಡ್ಡಿ, ಫಾರೂಕ್ ಅತ್ತಾರ
ಮಹಾದೇವ ಮಲಶೆಟ್ಟಿ ಪ್ರಮೋದ್ ಬಡಿಗೇರ, ಶೇಖರ್ ಇಟ್ನಾಳ, ಸೇರಿದಂತೆ ಆಟೋ ಚಾಲಕರು ಮಾಲೀಕರು ಇದ್ದರು.