03-10-24
ಯರಗಟ್ಟಿ ಸುದ್ದಿ
*ಯರಝರ್ವಿ ಗ್ರಾಮದಲ್ಲಿ 23ನೇ ವರ್ಷದ ಶ್ರೀ ದೇವಿ ಪುರಾಣ ಮತ್ತು ಪಾರಾಯಣ ಕಾರ್ಯಕ್ರಮ.*
*ಯರಗಟ್ಟಿ* -ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ಸುಕ್ಷೇತ್ರ ಯರಝರ್ವಿ ಗ್ರಾಮದ ಶ್ರೀ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ಯವಾಗಿ ಹಮ್ಮಿಕೊಂಡಿರುವ 23ನೇ ವರ್ಷದ ಶ್ರೀ ದೇವಿ ಪುರಾಣ ಮತ್ತು ಪಾರಾಯಣ ಕಾರ್ಯಕ್ರಮವು ದಿನಾಂಕ - 03-10 -24 ರಿಂದ 12 -10 -24 ರಿ ವರೆಗೆ ಪರಮಪೂಜ್ಯ ಶ್ರೀ ಅಭಿನವ ಸಿದ್ದಾನಂದ ಸ್ವಾಮಿಗಳು ಸಿದ್ಧಾರೂಢ ಮಠ ಅಗರಕೇಡ, ತಾಲೂಕ್ ಇಂಡಿ ಜಿಲ್ಲಾ ವಿಜಯಪುರ ಇವರ ಅಮೃತವಾಣಿಯಿಂದ ರಾತ್ರಿ 8 ರಿಂದ 9 ಗಂಟೆಯವರೆಗೆ ಪುರಾಣ ಕಾರ್ಯಕ್ರಮ ಜರುಗಲಿದ್ದು ಸದ್ಭಕ್ತರೆಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ, ದೇವಿ ಆಶೀರ್ವಾದ ಪಡೆಯಬೇಕೆಂದು ಶ್ರೀ ಕರಿಸಿದ್ದೇಶ್ವರ ಟ್ರಸ್ಟ್ ಕಮೀಟಿ ಹಾಗೂ ಯುವಕ ಮಂಡಳದವರು ತಿಳಿಸಿದ್ದಾರೆ.
(ವರದಿ - ಚನ್ನಪ್ಪ ಎಸ್ ಪಣದಿ)