ನೇಸರಗಿ. ಇಲ್ಲಿನ ಅಧಿಕೃತ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಅಧಿಕೃತ ಮಾರಾಟಗಾರರಾದ ಶ್ರೀಕಾಂತ ಐ. ಉಳವಿ ಇವರಿಗೆ ಬೈಲಹೊಂಗಲ ತಾಲೂಕಿನಲ್ಲಿ ನಂದಿನಿ ಮತ್ತು ಹಾಲಿನ ಉತ್ಪನ್ನಗಳನ್ನು ಅತೀ ಹೆಚ್ಚು ವಹಿವಾಟು ಮಾಡಿದ ಪ್ರಯುಕ್ತ ಪ್ರಥಮ ಸ್ಥಾನ ನೀಡಿ ಸನ್ಮಾನಿಸಲಾಯಿತು. ದಿ. 23-09-2024 ರಂದು ಬೆಳಗಾವಿಯ ಆಂಜನೇಯ ನಗರದ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟ ನಿ. ಬೆಳಗಾವಿ ಇದರ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೆ ಎಮ್ ಎಫ್ ಅಧಿಕಾರಿಗಳು, ಜಿಲ್ಲೆಯ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಗಾರರು ಉಪಸ್ಥಿತರಿದ್ದರು.
ನಂದಿನಿ ಹಾಲು, ಉತ್ಪನ್ನ ಅತೀ ಹೆಚ್ಚು ವಹಿವಾಟು ಶ್ರೀಕಾಂತ ಉಳವಿ ಗೆ ಪ್ರಥಮ ಸ್ಥಾನ.
By -
September 24, 2024
0
Tags: