ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ)ಯರಗಟ್ಟಿ.* *"ಸೃಜನಶೀಲ ಕಾರ್ಯಕ್ರಮ"

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
*ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ)ಯರಗಟ್ಟಿ.* *"ಸೃಜನಶೀಲ ಕಾರ್ಯಕ್ರಮ" ಯರಗಟ್ಟಿ ತಾಲೂಕಿನ ಚಿಕ್ಕನಂದಿ ವಲಯದ ಮಲಗಳಿ ಕಾರ್ಯಕ್ಷೇತ್ರದ "ಶ್ರೀ ರಾಮ" ಜ್ಞಾನವಿಕಾಸ ಕೇಂದ್ರದಲ್ಲಿ "ಸೃಜನಶೀಲ ಕಾರ್ಯಕ್ರಮ"ದಡಿಯಲ್ಲಿ ಹಸಿ ಕಸ - ಒಣ ಕಸ ವಿಂಗಡಣೆ, ತ್ಯಾಜ್ಯ ವಸ್ತುಗಳ ಮರುಬಳಕೆ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು..* *ಕಾರ್ಯಕ್ರಮದ* *ಉದ್ಘಾಟನೆಯನ್ನು ಮಾನ್ಯ ಜಿಲ್ಲಾ ನಿರ್ದೇಶಕರಾದ ಲವಕುಮಾರ ಸರ್, ಗ್ರಾಮ ಪಂಚಾಯತ ಅಭಿವೃದ್ಧಿಗಳಾದ ಗುರುಪಾದ ಗಿರಿಯನ್ನವರ್, ತಾಲೂಕಿನ ಮಾನ್ಯ* *ಯೋಜನಾಧಿಕಾರಿಗಳಾದ ಸತೀಶ್ ಸರ್ , ಸಂಪನ್ಮೂಲ ವ್ಯಕ್ತಿಗಳಾದ ಶಿವರಾಜ ಸರ್, ಸರಕಾರಿ ಶಾಲಾ ಮುಖ್ಯ ಶಿಕ್ಷಕಿಯಾದ RA ತಳವಾರ ಮೇಡಂ, ಎಸ್ ಡಿ ಎ ಅಧ್ಯಕ್ಷರಾದ ತಿಮ್ಮಣ್ಣ ಸರ್, ಶಿಕ್ಷಕರಾದ ಸುಲೇಮಾನ ಹಾದಿಮನಿ ಸರ್, ಪಾರಿಜಾತ ಕಲಾವಿದರಾದ ಯಲ್ಲಪ್ಪ ನಾಯ್ಕರ್ ಸರ್, ಗ್ರಾಮ್ ಪಂಚಾಯತ್ ಸದಸ್ಯರಾದ ಪಕೀರಪ್ಪ ವಕ್ಕುಂದ ಸರ್,ಜ್ಞಾನ ವಿಕಾಸ ಕೇಂದ್ರದ ಸದ್ಯಸರು ಊರಿನ ಗಣ್ಯರು, ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.* *ಮಾನ್ಯ ಜಿಲ್ಲಾ ನಿರ್ದೇಶಕರಾದ ಎಚ್. ಆರ್ ಲವಕುಮಾರ ಸರ್ ರವರು ಕಾರ್ಯಕ್ರಮ ವನ್ನು ಉದ್ದೇಶಿಸಿ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆಯ ಹತ್ತು ಹಲವಾರು ಕಾರ್ಯಕ್ರಮ ಗಳಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮ ತುಂಬಾ ಅತ್ಯುತ್ತಮ ಕಾರ್ಯಕ್ರಮ ಆಗಿದ್ದು,ಈ ಒಂದು ಕಾರ್ಯಕ್ರಮ ದಡಿಯಲ್ಲಿ "ಸೃಜನಶೀಲ ಕಾರ್ಯಕ್ರಮ" ದಡಿಯಲ್ಲಿ {ಹಸಿ ಕಸ, ಒಣ ಕಸ} ವಿಂಗಡನೆ ಬಗ್ಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದೊಂದು ತುಂಬಾ ಒಳ್ಳೆಯ ಕಾರ್ಯಕ್ರಮ ಆದ್ದರಿಂದ ಕೇಂದ್ರದ ಎಲ್ಲ ಸದಸ್ಯರು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ಸ್ವಚ್ಛತೆ ಕಡೆ ಹೆಚ್ಚಿನ ಗಮನಹರಿಸುವುದು. ಹಾಗೆ ಕಸದ ವಿಲೇವಾರಿ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಯೆಂದು ತಿಳಿಸಿ, ಯೋಜನೆ ಕಾರ್ಯಕ್ರಮದ ಬಗ್ಗೆ ಸಂಕ್ಷಿಪ್ತ ಮಾಹಿತಿ ಮಾರ್ಗದರ್ಶನವನ್ನು ಸದಸ್ಯರಿಗೆ ನೀಡಿದರು* .
  *ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದಂತಹ ಶಿವರಾಜ್ ಸರ್ ರವರು ಯೋಜನೆ ಕಾರ್ಯಕ್ರಮಗಳು, ಈ ಕಾರ್ಯಕ್ರಮಗಳಲ್ಲಿ ಒಂದಾದ ಸೃಜನಶೀಲ ಕಾರ್ಯಕ್ರಮ ಮಾಡುವ ಮುಖ್ಯ ಉದ್ದೇಶ, ಹಾಗೆಯೇ ಈ ಕಾರ್ಯಕ್ಷೇತ್ರದಲ್ಲಿ ಈ ಕಾರ್ಯಕ್ರಮ ಮಾಡಲು ಕಾರಣ,ಹಸಿ ಕಸ-ಒಣ ಕಸ ಬೇರೆ ಮಾಡುವುದರಿಂದ ಆಗುವ ಪ್ರಯೋಜನಗಳು, ತ್ಯಾಜ್ಯ ವಸ್ತುಗಳನ್ನು ಮರುಬಳಕೆ ಮಾಡುವ ವಿಧಾನಗಳು, ಕಸದಿಂದ ಪರಿಸರಕ್ಕೆ ಆಗುವ ಹಾನಿಕಾರಗಳು ಹಾಗೂ ಸಂರಕ್ಷಣೆ, ಬಗ್ಗೆ ಮಾಹಿತಿ ನೀಡಿದರು.ಆದ ಕಾರಣ ವಾತಾವರಣವನ್ನು ನಾವೆಲ್ಲರೂ ಸೇರಿ ಸ್ವಚ್ಛವಾಗಿ ಇಡುವುದರ ಬಗ್ಗೆ ಮಾಹಿತಿ ನೀಡಿದರು* *ಸರಕಾರಿ ಶಾಲಾ ಶಿಕ್ಷಕರಾದ ಸುಲೇಮಾನ್ ಸರ್ ರವರು ಯೋಜನೆಯ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ, ಹಾಗೂ ಈ ಕಾರ್ಯಕ್ರಮದ ಸದುಪಯೋಗ ಪ್ರತಿಯೊಬ್ಬರು ಪಡೆದುಕೊಳ್ಳುವ ಬಗ್ಗೆ,ಕೇಂದ್ರ ಸದ್ಯಸರು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿ ಸಂತೋಷವನ್ನು ವ್ಯಕ್ತಪಡಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು *ಕಾರ್ಯಕ್ರಮದಲ್ಲಿ ಕೇಂದ್ರದ 50 ಜನ ಸದಸ್ಯರಿಗೆ "ಒಣ" ಕಸ ಸಂಗ್ರಹಣಾ ಬುಟ್ಟಿ,"ಹಸಿ" ಕಸ ಸಂಗ್ರಹಣಾ ಬುಟ್ಟಿ ವಿತರಣೆ ಮಾಡಲಾಯಿತು *ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕದ ಸಂಭಾಜಿ ಸರ್ ಸ್ವಾಗತಿಸಿ, ಜ್ಞಾನ ವಿಕಾಸ ಸಮನ್ವಧಿಕಾರಿ ನಿಶಾ ನಾಯ್ಕ ನಿರೂಪಿಸಿ, ಸೇವಾ ಪ್ರತಿನಿಧಿಯಾದ ಶ್ರೀದೇವಿ ವಂದಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರದ ಎಲ್ಲಾ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು*

Post a Comment

0Comments

Post a Comment (0)