ಸಮಾಜಮುಖಿ ಕೆಲಸಗಳ ಬೆಂಬಲಕ್ಕೆ ಮಾಧ್ಯಮ ನಿಲ್ಲಬೇಕು. ನಾನಾಸಾಹೇಬ ಪಾಟೀಲ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಸಮಾಜಮುಖಿ ಕೆಲಸಗಳ ಬೆಂಬಲಕ್ಕೆ ಮಾಧ್ಯಮ ನಿಲ್ಲಬೇಕು. ನಾನಾಸಾಹೇಬ ಪಾಟೀಲ
ಬೈಲಹೊಂಗಲ. ಸಮಾಜದಲ್ಲಿ ಎಲ್ಲ ಜಾತಿಗಳಲ್ಲಿ ಬಡವರಿದ್ದಾರೆ ಆ ಎಲ್ಲ ಜಾತಿಯ ಬಡವರಿಗಾಗಿ ಈ ಅಂಬೇಡ್ಕರ್ ಧ್ವನಿ ನ್ಯೂಸ್ ಚಲನ ಮಾಧ್ಯಮ ಕೆಲಸ ಮಾಡಬೇಕು ಎಂದು ಯುವ ಮುಖಂಡ, ನೇಗಿನಹಾಳ ಪಿಕೆಪಿಸ್ ಅಧ್ಯಕ್ಷ ನಾನಾಸಾಹೇಬ ಪಾಟೀಲ ಹೇಳಿದರು.
     ಅವರು ಬುಧವಾರದಂದು ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ ಧ್ವನಿ ನ್ಯೂಸ 24x 7 ಕನ್ನಡ ನ್ಯೂಸ್ ಚಾನಲ ಉದ್ಘಾಟನಾ ಸಮಾರಂಭ ನೇರವೇರಿಸಿ ಮಾತನಾಡಿ ರಾಜಕಾರಣಿ, ಅಧಿಕಾರಿಗಳು ಮಾಧ್ಯಮ ಪ್ರಭಾವದಿಂದ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.
     ಹಿರಿಯ ರಂಗಭೂಮಿ ಕಲಾವಿದ, ರೈತ ಮುಖಂಡ ಸಿ ಕೆ. ಮೆಕ್ಕೇದ ಮಾತನಾಡಿ ಅಂದು ವಿಶ್ವಗುರು ಬಸವಣ್ಣನವರು ಮಾಡಿದ ಸಮಾನತೆ ಕಾರ್ಯವನ್ನು ಕಾರ್ಯರೂಪಕ್ಕೆ ತಂದು ನಮ್ಮ ಶ್ರೇಷ್ಠ ಸಂವಿದಾನ ರೂಪಿಸಿದವರು ಡಾ. ಬಾಬಾಸಾಹೇಬ ಅಂಬೇಡ್ಕರ ಅದನ್ನು ಕಾರ್ಯರೂಪಕ್ಕೆ ತಂದರು. ಅವರ ಹೆಸರಲ್ಲಿ ಮಾಧ್ಯಮ ಪ್ರಾರಂಭ ಮಾಡಿದ ಡಿ ಎಸ್ ಎಸ್ ಅಧ್ಯಕ್ಷ ಸುರೇಶ ರಾಯಪ್ಪಗೋಳ ಅವರು ಬಡವರಿಗೆ ಬೆಳಕಾಗಲಿ ಎಂದರು.
  ಅಂಬೇಡ್ಕರ್ ಧ್ವನಿ ಮಾಧ್ಯಮ ಚನಲನ ಸಂಸ್ಥಾಪಕ, ಡಿ ಎಸ್ ಎಸ್ ರಾಜ್ಯಾಧ್ಯಕ್ಷರಾದ ಸುರೇಶ ರಾಯಪ್ಪಗೋಳ ಮಾತನಾಡಿ ಬಡವರ ಧ್ವನಿಯಾಗಿ ಕೆಲಸ ಮಾಡುವ ಉದ್ದೇಶ ಹೊಂದಿದ್ದು ರಾಜಕಾರಣಿಗಳು, ಅಧಿಕಾರಿಗಳು ಪತ್ರಕರ್ತರ ಹಾವಳಿಗೆ ಅಂಜದೆ ತಮ್ಮ ನ್ಯಾಯಸಮ್ಮತವಾದ ಕೆಲಸ ಮಾಡಿ ಸಮಾಜದ ಒಳಿತಿಗೆ ಶ್ರಮಿಸಬೇಕು. ಕೆಲಸ ಮಾಡದ ರಾಜಕಾರಣಿಗಳ, ಅಧಿಕಾರಿಗಳ ವಿರುದ್ಧ ನಮ್ಮ ಚಾನಲ್ ಹೋರಾಟ ಮಾಡಲಿದೆ ಎಂದರು.
      ಕಾರ್ಯಕ್ರದಲ್ಲಿ ಡಿ ಎಸ್ ಎಸ್ ಸಂಚಾಲಕ ಮನೋಜ ಕೆಳಗೇರಿ, ನಾಗಪ್ಪ ಬೈಲಪ್ಪಗೋಳ, ರಮೇಶ ಹಂಚಿನಮನಿ, ಫಕೀರಪ್ಪ ಹೊಸಮನಿ, ಶಾನು ರಾಮಣ್ಣವರ, ಅಮೃತ ಮಾಳಗಿ, ಸಂಜೀವ ಮುರಗೋಡ, ಪ್ರಕಾಶ ಕೆಳಗಿನಮನಿ, ಎಮ್ ಎನ್ ಮಕರವಳ್ಳಿ, ವಿಠ್ಠಲ ಎಲ್ ನ್ಯಾಮಗೌಡರ, ಸಂಗಮೇಶ ರೋಳ್ಳಿ ಜ್ಞಾನೇಶ್ವರ ರಾಯಪ್ಪಗೋಳ,ವಿಠ್ಠಲ ಕಡಬಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Post a Comment

0Comments

Post a Comment (0)