ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯಿತಿ ಸದಸ್ಯ ನಾಗೇಶ್ ಅಸುಂಡಿ ಅಪಹರಣ, ಇಂದು ಬಿಜೆಪಿ ವತಿಯಿಂದ ಮಾಜಿ ಶಾಸಕ ಮಹಂತೇಶ ದೊಡ್ಡಗೌಡರ ನೇತೃತ್ವದಲ್ಲಿ ಕಿತ್ತೂರು ಚಲೋ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.
ಕಳೆದ ಕೆಲ ದಿನಗಳಿಂದ ಕಿತ್ತೂರು ಪಟ್ಟಣ ಪಂಚಾಯತಿಯ ಬಿಜೆಪಿ ಸದಸ್ಯ ನಾಗೇಶ್ ಅಸುಂಡಿ ಅಪಹರಣಕ್ಕೆ ಇದು ವರೆಗೆ ಯಾವುದೇ ಸೂಕ್ತ ವರದಿ ಸಿಗದ ಕಾರಣ ಇಂದು ಕಿತ್ತೂರು ಬಿಜೆಪಿಯಿಂದ ಮಹಾಂತೇಶ ದೊಡ್ಡಗೌಡರ ನೇತೃತ್ವದಲ್ಲಿ ಉಗ್ರ ಹೋರಾಟಕ್ಕೆ ಕರೆ ನೀಡಲಾಗಿದೆ.
ಇಂದು ಮಹಾನಗರ ಬೃಹತ್ ಹೋರಾಟ ಒಂದಕ್ಕೆ ಸಾಕ್ಷಿಯಾಗಲಿದ್ದು ಪ್ರಜಾಪ್ರಭುತ್ವದ ಮೇಲೆ ಆದ ಕಗ್ಗೊಲೆಯ ವಿರುದ್ಧ ರಣ ಕಹಳೆಯನ್ನು ಕಿತ್ತೂರು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ನೇತೃತ್ವದಲ್ಲಿ ಮೊಳಗಲಿದೆ ಎಂದು ಮಾಹಿತಿ ಲಭ್ಯವಾಗಿದೆ.