ದರ್ಶನ್ ಬಗ್ಗೆ ಜಗ್ಗೇಶ್ ಸ್ಪೋಟಕ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಜಗ್ಗೇಶ್ & ದರ್ಶನ್ ತೂಗುದೀಪ್ ಕಳೆದ 3-4 ವರ್ಷದಿಂದ ಹಾವು & ಮುಂಗುಸಿ ರೀತಿಯಲ್ಲಿ ಕಿತ್ತಾಡಿದ್ದಾರೆ. ಅದರಲ್ಲೂ ನಟ ಜಗ್ಗೇಶ್ ಮೇಲೆ ಅಟ್ಯಾಕ್ ಮಾಡಲು ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮುಂದಾಗಿದ್ದರು, ನಟ ಜಗ್ಗೇಶ್ ಶೂಟಿಂಗ್ ಮಾಡುವ ಜಾಗಕ್ಕೆ ಕೂಡ ನುಗ್ಗಿ ಗಲಾಟೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು ಆದರೆ ಇದೀಗ ಕೊಲೆ ಆರೋಪ ಹೊತ್ತು ಜೈಲಿಗೆ ಸೇರಿರುವ ದರ್ಶನ್ ತೂಗುದೀಪ್ ಅವರ ಬಗ್ಗೆ ನವರಸ ನಾಯಕ ಜಗ್ಗೇಶ್ ನೀಡಿರುವ ಹೇಳಿಕೆ ವಿಡಿಯೋ ವೈರಲ್ ಆಗುತ್ತಿದೆ. ಆ ವಿಡಿಯೋ ನೋಡಲು ಮುಂದೆ ಓದಿ.

ಜಗ್ಗೇಶ್ ಕನ್ನಡ ಸಿನಿಮಾ ರಂಗದಲ್ಲಿ ಹಿರಿಯ ನಟ ಎನಿಸಿಕೊಂಡಿದ್ದು, ಹಲವು ವಿವಾದಗಳ ಮೂಲಕ ಸದ್ದು ಕೂಡ ಮಾಡಿದ್ದಾರೆ. ಅದರಲ್ಲೂ ನಟ ದರ್ಶನ್ ತೂಗುದೀಪ್ & ಜಗ್ಗೇಶ್ ನಡುವೆ ದೊಡ್ಡ ತಿಕ್ಕಾಟವೇ ನಡೆದಿತ್ತು. ದರ್ಶನ್ ತೂಗುದೀಪ್ ಬಗ್ಗೆ ಜಗ್ಗೇಶ್ ಅವರು ಭಾರಿ ಅಸಭ್ಯ ಪದ ಬಳಸಿ ಬೈದಿದ್ದಾರೆ ಎಂದು ಆರೋಪ ಮಾಡಿದ್ದ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು, ಜಗ್ಗೇಶ್ ಅವರ ಸಿನಿಮಾ ಶೂಟಿಂಗ್ ನಡೆಯುತ್ತಿದ್ದ ಜಾಗಕ್ಕೆ ನುಗ್ಗಿ ಗಲಾಟೆ ಕೂಡ ಮಾಡಿದ್ದರು. ಪರಿಸ್ಥಿತಿ ಹೀಗಿದ್ದಾಗ ಇಬ್ಬರೂ ಮಾತು ಬಿಟ್ಟಿದ್ದರು. ಆದರೆ ಈಗ ನಟ ಜಗ್ಗೇಶ್ ಅವರು ದರ್ಶನ್‌ರ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ? ಕುತೂಹಲಕಾರಿ ವಿಡಿಯೋಗೆ ಮುಂದೆ ಓದಿ.

ದರ್ಶನ್ ಬಗ್ಗೆ ಜಗ್ಗೇಶ್ ಮಾತು!

ಕನ್ನಡ ಸಿನಿಮಾ ರಂಗ ಒಗ್ಗಟ್ಟಿನಿಂದ ಇತ್ತು, ಅದರಲ್ಲೂ ಕನ್ನಡ ಸಿನಿಮಾ ರಂಗದ ಒಗ್ಗಟ್ಟು ಇಡೀ ಭಾರತದ ಇತರ ಭಾಷೆಗಳ ಅಂದ್ರೆ ಹಿಂದಿ, ತೆಲುಗು, ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಕೂಡ ಒಗ್ಗಟ್ಟು ಮೂಡಿಸಲು ಕಾರಣ ಆಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಭಿಮಾನಿಗಳ ಗಲಾಟೆ & ಬಡಿದಾಟದ ಕಾರಣ ಕನ್ನಡ ಸಿನಿಮಾ ರಂಗ ಒಡೆದ ಮನೆಯಾಗಿದೆ. ಹೀಗಿದ್ದರೂ ನಟ ಜಗ್ಗೇಶ್ ಅವರು ಇದೀಗ ದರ್ಶನ್ ತೂಗುದೀಪ್ ಬಗ್ಗೆ ನೀಡಿರುವ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದೆ.
ದರ್ಶನ್ ತೂಗುದೀಪ್ ಫ್ಯಾನ್ಸ್ ಖುಷ್!

ಹೌದು, ವಿಡಿಯೋ ನೋಡಿದ್ರಲ್ಲ? 'ಕಾಮಿಡಿ ಕಿಲಾಡಿ'ಗಳು ವೇದಿಕೆಯಲ್ಲಿ ಒಬ್ಬ ಹಾಸ್ಯ ನಟ ಕನ್ನಡ ಕಲಾವಿದರ ಮಿಮಿಕ್ರಿ ಮಾಡುತ್ತಿದ್ದ. ಈ ವೇಳೆ ಜಗ್ಗೇಶ್ ಅವರು ಕನ್ನಡದ ನಟರನ್ನು ಹೆಸರಿನಿಂದ ಗುರುತಿಸಿ, ಮಿಮಿಕ್ರಿ ಅಂದ್ರೆ ಸ್ಟಾರ್ ನಟರ ಮಾತಿನ ಶೈಲಿ & ಧ್ವನಿ ಅನುಕರಣೆ ಮಾಡಲು ಹೇಳುತ್ತಿದ್ದರು. ಹೀಗಿದ್ದಾಗ ನಟ ದರ್ಶನ್ ತೂಗುದೀಪ್ ಅವರ ಮಿಮಿಕ್ರಿ ಕೂಡ ಮಾಡು ಎಂದು ಜಗ್ಗೇಶ್ ಅವರು ಮನವಿ ಮಾಡಿಕೊಂಡರು. ಅಲ್ಲದೆ ಈ ಮೂಲಕ ತಮಗೆ ಕೂಡ ದರ್ಶನ್ ತೂಗುದೀಪ್ ಅವರ ಬಗ್ಗೆ ಗೌರವ ಇದೆ ಎಂಬುದನ್ನು ತೋರಿಸಿದ್ದಾರೆ. ಈಗ ವಿಡಿಯೋ ನೋಡಿ ದರ್ಶನ್ ತೂಗುದೀಪ್‌ರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ನಾಯಿ ಮರಿ ಗಿಫ್ಟ್ ಕೊಟ್ಟಿದ್ದ ಡಿ-ಬಾಸ್?

ಪವಿತ್ರಾ ಗೌಡ ಒಬ್ಬರೇ ಇರುತ್ತಿದ್ದ ಕಾರಣಕ್ಕೆ ಅವರ ರಕ್ಷಣೆಗೆ ಅಂತಾ ಖುದ್ದು ದರ್ಶನ್ ಅವರೇ ಬುಲ್ ಡಾಗ್ ನಾಯಿ ತಳಿಯನ್ನು ಕೊಡಿಸಿದ್ದರು ಎಂಬ ಮಾತು ಓಡಾಡುತ್ತಿದೆ. ಆದರೆ ಇದರ ಬಗ್ಗೆ ಅಧಿಕೃತ ಹೇಳಿಕೆ ಸಿಕ್ಕಿಲ್ಲ. ಹೀಗಿದ್ದಾಗ, ರೇಣುಕಾ ಸ್ವಾಮಿ ಮರ್ಡರ್ ಆಗಲು ಪವಿತ್ರಾ ಕಾರಣ ಎಂಬ ಆರೋಪದ ಹಿನ್ನೆಲೆ, ಪೊಲೀಸರು ಅರೆಸ್ಟ್ ಮಾಡಿಕೊಂಡು ಕರ್ಕೊಂಡು ಹೋಗಿ ಜೈಲಿಗೆ ತಳ್ಳಿದ್ದಾರೆ. ಹೀಗೆ ಪವಿತ್ರಾ ಜೈಲಿಗೆ ಹೋದ ನಂತರ ಆ ನಾಯಿಗಳು ಅನಾಥವಾಗಿವೆ.

ದರ್ಶನ್ ಮನೆಗೆ ನಾಯಿಗಳು ಶಿಫ್ಟ್?

ಕೇಸ್‌ನ ಮತ್ತೊಬ್ಬ ಕೊಲೆ ಆರೋಪಿ ಪವನ್ ನಾಯಿಗಳನ್ನು ನೋಡಿಕೊಳ್ಳುತ್ತಿದ್ದನಂತೆ. ಆದರೆ ದರ್ಶನ್ ಬಳಿ ಫಿಟಿಂಗ್ ಇಟ್ಟು, ಎಲ್ಲರ ಬಾಳು ಹಾಳು ಮಾಡಿದ್ದೇ ಈ ಪವನ್ ಎಂಬ ಆರೋಪ ಇದೆ. ಹೀಗಿದ್ದಾಗ ಅನಾಥವಾಗಿದ್ದ ಪವಿತ್ರಾ ಗೌಡ ಮನೆ ನಾಯಿಗಳನ್ನ ರಕ್ಷಣೆ ಮಾಡಿ ದರ್ಶನ್ ಮನೆಗೆ ಶಿಫ್ಟ್ ಮಾಡಲಾಗಿದೆ. ಇನ್ನೊಂದು ನಾಯಿ ಮರಿಯನ್ನು ಪವಿತ್ರಾ ಗೌಡಳ ಸ್ನೇಹಿತರು ತೆಗೆದುಕೊಂಡು ಹೋಗಿದ್ದಾರಂತೆ. ನಾಯಿಗಳು ಈಗ ದರ್ಶನ್ ತೂಗುದೀಪ್ ಮನೆಯಲ್ಲಿ ಸೇಫ್ ಆಗಿವೆ ಎಂಬ ಮಾಹಿತಿ ಸಿಕ್ಕಿದ್ದು, ದರ್ಶನ್ ಅವರ ಮನೆಯಲ್ಲಿ ನಾಯಿಗಳನ್ನ ಆರೈಕೆ ಕೂಡ ಮಾಡಲಾಗುತ್ತಿದೆಯಂತೆ.

Post a Comment

0Comments

Post a Comment (0)