ಚನ್ನಮ್ಮ ಕಿತ್ತೂರು ಪಟ್ಟಣ ಪಂಚಾಯಿತಿ ಚುನಾವಣೆ ಹಿನ್ನೆಲೆ ಬಿಜೆಪಿ ಸದಸ್ಯನ ಅಪಹರಣ ಪ್ರಕರಣ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಚನ್ನಮ್ಮ ಕಿತ್ತೂರು ಪಟ್ಟಣ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ತಡರಾತ್ರಿ ಬಿಜೆಪಿ ಸದಸ್ಯನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಮ್ಮನ ಕಿತ್ತೂರು ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಸದಸ್ಯನ‌ ಪತ್ತೆಗೆ ಪೊಲೀಸರು ಮೂರು ತಂಡ ರಚಿಸಿದ್ದಾರೆ.
ಸದಸ್ಯ ನಾಗರಾಜ ಬಸವರಾಜ ಅಸುಂಡಿ (36) ಎಂಬುವರನ್ನು ಗುರುವಾರ ತಡರಾತ್ರಿ ಅಪಹರಣ ಮಾಡಲಾಗಿದದೆ. ಕಿತ್ತೂರು ತಾಲೂಕಿನ ಮೇಟ್ಯಾಲ ಗ್ರಾಮದ ಅಶೋಕ ಚನ್ನಬಸಪ್ಪ ಮಾಳಗಿ, ಚನ್ನಾಪುರದ ಬಸವರಾಜ ಶೇಖಪ್ಪ ಸಂಗೊಳ್ಳಿ ಹಾಗೂ ಕಿತ್ತೂರಿನ ಸೋಮವಾರ ಪೇಟೆಯ ಸುರೇಶ ಈರಪ್ಪ ಕಡೇಮನಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದು ನಾಗರಾಜ ಅವರ ತಂದೆ ಬಸವರಾಜ ದೂರು ನೀಡಿದ್ದಾರೆ.

Post a Comment

0Comments

Post a Comment (0)