ಸೋಮವಾರ ಶ್ರಾವಣ ಮಾಸದಂದು ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಜರಗಿತು.
ಬೈಲಹೊಂಗಲ ತಾಲೂಕಿನ ಮೇಕಲಮರಡಿ ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದಂದು ವಿಜೃಂಭಣೆಯಿಂದ ಶ್ರೀ ಅಡವಿ ಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ಶರಣರ ಬಳಗದಿಂದ ಹಮ್ಮಿಕೊಳ್ಳಲಾಗಿತ್ತು.
ಶುಭ ಶ್ರಾವಣ ಸೋಮವಾರ ಮುಂಜಾನೆ ಅಡವಿ ಸಿದ್ದೇಶ್ವರ ಮೂರ್ತಿಗೆ ಮಹಾ ರುದ್ರಾಭಿಷೇಕ ಹಾಗೂ ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ಶ್ರೀ ಅಡವಿ ಸಿದ್ದೇಶ್ವರ ಪಲ್ಲಕ್ಕಿ ಉತ್ಸವವನ್ನು ಭಜನೆಯ ವಾದ್ಯ ಮೇಳದೊಂದಿಗೆ ಮೆರವಣಿಗೆ ಮಾಡಲಾಯಿತು. ತದನಂತರ ಶ್ರೀಮಠದಲ್ಲಿ ಮಹಾ ಪ್ರಸಾದದ ಸೇವೆಯನ್ನು ನೆರವೇರಿಸಲಾಯಿತು. ಸಾಯಂಕಾಲ ಭಜನಾ ಮುಕ್ತಾಯ ಕಾರ್ಯಕ್ರಮವನ್ನು ಶ್ರೀ ಅಡವಿ ಸಿದ್ದೇಶ್ವರ ಮಠದಿಂದ ಶ್ರೀ ಪತ್ರಿ ಬಸವೇಶ್ವರ ಗದ್ದುಗೆ ಭಜನೆಯ ಮೂಲಕ ತೆರಳಿ ಮಹಾ ಮಂಗಳಾರತಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ವೇದಮೂರ್ತಿ ಶ್ರೀ ಬಸಯ್ಯ ಹಿರೇಮಠ ಶ್ರೀ ತಮ್ಮಯ್ಯ ಹಿರೇಮಠ ಶರಣರುಕಾರ್ತಿಕ ಹಿರೇಮಠ್ ರುದ್ರಪ್ಪ ಕಲ್ಲನ್ನವರ್ ಯಲ್ಲನಗೌಡ ಮಾಳನಾಯ್ಕರ್ ಬಸವರಾಜ್ ಕುರಗುಂದ್ ಮುದುಕಪ್ಪ ನೇಸರಗಿ ನಿಂಗಪ್ಪ ನಾವಿ ಬಸವರಾಜ್ ಬಡಿಗೇರ್ ನಾರಾಯಣ ಮಿರಜ್ಕರ ಸಮ್ಮೇದ ತುಬಾಕ್ ಈರಪ್ಪ ಕಲ್ಲನ್ನವರ್ ರಮೇಶ್ ಬಡಿಗೇರ್ ಮಾಂತೇಶ್ ಬಡಿಗೇರ್ ಮಾರುತಿ ಹೊಸಮನಿ ಪಾರಿಸ್ ಟಗರಿ
ಬಾಬು ತುಬಾಕ್ ಬಾಬು ಪೂಜಾರಿ ರಾಕೇಶ್ ಹೊಸಮನಿ ಹಾಗೂ ಗ್ರಾಮದ ಗುರು ಹಿರಿಯರು ಪಾಲ್ಗೊಂಡಿದ್ದರು.