ಜೈಲಿನಲ್ಲಿ ರಾಜಾರೋಷ; ದರ್ಶನ್‌ ಸೇರಿ ಹಲವರ ವಿರುದ್ಧ 3 ಪ್ರತ್ಯೇಕ FIR...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ(Parappana Agrahara Prison) ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ (Darshan) ರಾಜಾರೋಷವಾಗಿ ಜೈಲಿನಲ್ಲಿರುವ ಫೋಟೋ ,ವಿಡಿಯೋ ವೈರಲ್‌ ಆಗುತ್ತಿವೆ. ಸೋಶಿಯಲ್‌ ಮೀಡಿಯಾದಲ್ಲಿ ಅನೇಕರು ಜೈಲಿನಲ್ಲಿನ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಒಂದು ಕೈಯಲ್ಲಿ ಸಿಗರೇಟ್‌ ಇನ್ನೊಂದು ಕೈಯಲ್ಲಿ ಕಾಫಿ ಕಪ್‌ ಹಿಡಿದುಕೊಂಡು ಇತರೆ ಆರೋಪಿಗಳೊಂದಿಗೆ ಜೈಲಿನ ಆವರಣದಲ್ಲಿ ಆರಾಮವಾಗಿ ದರ್ಶನ್‌ ಕೂತಿರುವ ಫೋಟೋ ವೈರಲ್‌ ಆದ ಬೆನ್ನಲ್ಲೇ ಈ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಲೋಪವೆಸಗಿದ 7 ಮಂದಿ ಜೈಲು ಅಧಿಕಾರಿಗಳನ್ನು ಅಮಾನತು ಮಾಡಿದೆ.
ಈ ಫೋಟೋ ಹಾಗೂ ಸಿಗರೇಟ್‌ ವಿಚಾರಕ್ಕೆ ಸಂಬಂಧಿಸಿ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ 3 ಪ್ರತ್ಯೇಕ ಎಫ್‌ಐಆರ್‌ (FIR) ದಾಖಲಾಗಿದೆ. ಜೈಲು ಅಧೀಕ್ಷರ ದೂರನ್ನು ಆಧರಿಸಿ ಮೂರು ಎಫ್‌ ಐಆರ್‌ ದಾಖಲಿಸಲಾಗಿದೆ.

Post a Comment

0Comments

Post a Comment (0)