ನೇಸರಗಿ:ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ವೈದ್ಯರಿಗೆ ಸನ್ಮಾನ...!

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0

ನೇಸರಗಿ:
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿಯ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಾಲಯದಲ್ಲಿ ಇಂದು ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ನೇಸರಗಿ ಹಾಗೂ ದೇಶನೂರು ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಡಾ//ಜಮಾದಾರ್ ಹಾಗೂ ಅವರ ಸಿಬ್ಬಂದಿಗಳಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರಾದ ಸುರೇಶ್ ರಾಯಪ್ಪ ಗೋಳ ಅವರ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. 
"ವೈದ್ಯೋ ನಾರಾಯಣ ಹರಿ" ಎಂಬಂತೆ ವೈದ್ಯರು ಎಂದರೆ ಸಾಕ್ಷಾತ್ ದೇವರ ಸ್ವರೂಪ, ಕಣ್ಣಿಗೆ ಕಾಣುವ ದೇವರು ಎಂಬಂತೆ ವೈದ್ಯರು ನಿಷ್ಠೆಯಿಂದ ಕೆಲಸವನ್ನು ನಿರ್ವಹಿಸಿದರೆ ಅದು ದೇವರ ಆಶೀರ್ವಾದ ಸಿಕ್ಕಂತೆ ಎಂದು ಸಭೆಯಲ್ಲಿ ಸುರೇಶ್ ರಾಯಪ್ಪಗೋಳ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸದಸ್ಯರುಗಳಾದ ಸದಾನಂದ ರಾಯಪ್ಪ ಗೋಳ ವಕೀಲರು, ಸಿದ್ದಲಿಂಗ ಬಡಿಗೇರ್, ಅಬ್ರಡ್ ಸಿರೋಳ್ಳಿ, ಕಿಶನ್ ರಾಯಪ್ಪ ಗೋಳ, ಪುಟ್ಟಿ ಶಿಂತ್ರಿ, ವಿನಾಯಕ್ ರಾಯಪ್ಪ ಗೋಳ, ಜ್ಞಾನೇಶ್ವರ ರಾಯಪ್ಪಗೋಳ, ಮಾರುತಿ ಹುಚ್ಚನಟ್ಟಿ, ಬಸವಂತ ಅಕ್ಕತಂಗಿರಿಹಾಳ, ಯೋಗೀಶ್ವರ ರಾಯಪ್ಪ ಗೋಳ, ಯಶವಂತ ಕೋಲ್ಕಾರ್, ಯಶವಂತ್ ಹಂಚಿಮನಿ ಉಪಸ್ಥಿತರಿದ್ದರು.

Post a Comment

0Comments

Post a Comment (0)