ತಾಯಿ ಮತ್ತು ತಂದೆಯನ್ನು ಹೊರತುಪಡಿಸಿ, ಗುರುವು ವ್ಯಕ್ತಿಯ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿಶೇಷವಾಗಿ ಭಾರತದಲ್ಲಿ, ಗುರುವು ಶಿಕ್ಷಣವನ್ನು ನೀಡುವುದು ಮಾತ್ರವಲ್ಲದೆ ತನ್ನ ಶಿಷ್ಯರಲ್ಲಿ ಮೌಲ್ಯಗಳನ್ನು ಕಲಿಸುವ ಮತ್ತು ಜೀವನದ ಪ್ರಮುಖ ಪಾಠಗಳನ್ನು ಕಲಿಸುವ ವ್ಯಕ್ತಿ ಎಂದು ಗೌರವಿಸಲಾಗುತ್ತದೆ. ಆದ್ದರಿಂದ, ಜ್ಞಾನ, ಶಿಕ್ಷಣ ಅಥವಾ ಕೌಶಲ್ಯದ ರೂಪದಲ್ಲಿ ನಾವು ಯಾರ ಆಶೀರ್ವಾದವನ್ನು ಪಡೆಯುತ್ತೇವೆಯೋ ಅವರನ್ನು ಗೌರವಿಸಲು ಮೀಸಲಾದ ದಿನ ಈ ಗುರು ಪೂರ್ಣಿಮಾವಾಗಿದೆ.
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ| ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ನಾಡಿನ ಸಮಸ್ತ ಗುರು ವೃಂದಕ್ಕೆ ಗುರು ಪೂರ್ಣಿಮಾ 2024 ಶುಭಾಶಯಗಳು..
ಹರ ಮುನಿದರೂ ಗುರು ಕಾಯ್ವನು.. ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.
ಗುರು ಜೀವನದ ಕತ್ತಲೆಯನ್ನು ದೂರ ಮಾಡಿ, ಮಾನವ ಜೀವಿಗೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈ 4 ಪುರುಷಾರ್ಥಗಳನ್ನು ಧರ್ಮ ಮಾರ್ಗದಲ್ಲಿ ಸಾಧಿಸುವ ಕಲೆಯನ್ನು ಕಲಿಸುವವನೇ ನಿಜವಾದ ಗುರು.. ಅಂತಹ ಗುರುಗಳಿಗೆ ಗುರು ಪೂರ್ಣಿಮೆ ಶುಭಾಶಯಗಳು.
ಗುರುವಿಲ್ಲದೆ ಜ್ಞಾನವಿಲ್ಲ.. ಗುರು ಪೂರ್ಣಿಮಾ 2024 ರ ಶುಭಾಶಯಗಳು..
ಒಬ್ಬ ವ್ಯಕ್ತಿ ಸಮಾಜದಲ್ಲಿ ಸದ್ಗುಣಶೀಲನಾಗಲು ತಾಯಿಯ ಪ್ರೀತಿ, ಮಮತೆ, ಬೈಗುಳ ಎಷ್ಟು ಮುಖ್ಯವೋ ಗುರುವಿನ ಪಾತ್ರವೂ ಅಷ್ಟೇ ಮುಖ್ಯ.. ಹ್ಯಾಪಿ ಗುರು ಪೂರ್ಣಿಮಾ.
ಎದೆಯ ಹಣತೆಯಲ್ಲಿ ಅಕ್ಷರದ ದೀಪ ಹೊತ್ತಿಸಿ, ಸಕಲರ ಜೀವನವನ್ನು ಬೆಳಗುವ ಗುರುಗಳಿಗೆ ಗುರು ಪೂರ್ಣಿಮಾ ಶುಭಾಶಯಗಳು..
ಮಾನವನನ್ನು ಸೃಷ್ಟಿಸುವುದು ದೇವರ ಧರ್ಮ, ಅದೇ ಮಾನವನನ್ನು ಉತ್ತಮನನ್ನಾಗಿ ಮಾಡುವುದು ಗುರುಗಳ ಧರ್ಮ.. ಗುರು ಪೂರ್ಣಿಮಾ 2024 ರ ಶುಭಾಶಯಗಳು..
ಧ್ಯಾನ ಹೆಚ್ಚಾದಂತೆ ಜ್ಞಾನ ಹೆಚ್ಚಾಗುವುದು.. ಜ್ಞಾನ ಹೆಚ್ಚಾದಂತೆ ಮೌನ ಹೆಚ್ಚಾಗುವುದು - ಗೌತಮ ಬುದ್ದ. ಗುರು ಪೂರ್ಣಿಮಾ ಶುಭಾಶಯಗಳು..