ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಸುರಿಯುವ ಭಾರಿ ಮಳೆಯಲ್ಲಿ ಸಿಎಂ ಪರಿಶೀಲನೆ...!!!

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಉತ್ತರ ಕನ್ನಡ: ಅಂಕೋಲಾ (Ankola) ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತದ (Shiruru Hill Collapse) ಪ್ರದೇಶದಲ್ಲಿ ತೆರವು ಕಾರ್ಯಾಚರಣೆ ಇನ್ನೂ ನಡೆಯುತ್ತಲೇ ಇದೆ. ಒಂದೆಡೆ ಭಾರೀ ಮಳೆಯಿಂದಾಗಿ (Heavy Rain) ಕಾರ್ಯಾಚರಣೆಗೆ ಅಡ್ಡಿಯಾಗಿದ್ದರೆ, ಮತ್ತೊಂದೆಡೆ ರಾಜ್ಯ ಸರ್ಕಾರ ಹಾಗೂ ಸಚಿವರುಗಳ ದಿವ್ಯ ನಿರ್ಲಕ್ಷ್ಯಿಂದ ತೆರವು ಕಾರ್ಯಾಚರಣೆ ಕುಂಟುತ್ತಾ ಸಾಗುತ್ತಿದೆ.
ಇದುವರೆಗೂ 7 ಮಂದಿ ಶವ ಪತ್ತೆಯಾಗಿದ್ದು, 15ಕ್ಕೂ ಅಧಿಕ ಮಂದಿ ಕಣ್ಮರೆಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಪೈಕಿ ಕೇರಳ (Kerala) ಮೂಲದ ಲಾರಿ ಚಾಲಕನೂ ಮಣ್ಣಿನಡಿ ಸಿಲುಕಿದ್ದು, ಆತನ ಮೊಬೈಲ್ ಲೊಕೇಶನ್ ತೋರಿಸುತ್ತಿದ್ದು, ಆತ ಬದುಕಿರಬಹುದು ಅಂತ ಕೇರಳ ಸರ್ಕಾರವೇ ಹೇಳುತ್ತಿದೆ. ಆತನನ್ನು ಉಳಿಸೋ ಯತ್ನ ಮಾಡುತ್ತಿಲ್ಲ ಎಂಬ ಆರೋಪವನ್ನೂ ಕೇರಳ ಸರ್ಕಾರ ಮಾಡಿದೆ. ಈ ನಡುವೆಯೇ ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ಘಟನಾ ಸ್ಥಳಕ್ಕೆ ಭೇಟಿ ನೀಡಿದ್ರು. ಈ ವೇಳೆ ಭಾರೀ ಮಳೆ ಬಂದಿರೋದ್ರಿಂದ, ಬಿಳಿ ಪಂಚೆ ಉಟ್ಟಿದ್ದ ಸಿಎಂ, ಪಂಚೆ ಎತ್ತಿಕೊಂಡೇ ಪರಿಶೀಲನೆ ನಡೆಸಿದ್ರು.
ಜಾಹೀರಾತಿಗಾಗಿ....
7 ದಿನಗಳಿಂದ ಕಾರ್ಯಾಚರಣೆ

ಕಳೆದ 7 ದಿನಗಳ ಹಿಂದೆ ಅಂಕೋಲದ ಶಿರೂರಿನಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ಸುಮಾರು 15ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ ಎನ್ನಲಾಗುತ್ತಿದೆ. ಈ ಪೈಕಿ 7 ಶವಗಳು ಸಿಕ್ಕಿವೆ. ಉಳಿದವರು ಯಾರು ಅಲ್ಲಿದ್ದಾರೆ? ಸತ್ತಿದ್ದಾರೋ, ಬದುಕಿದ್ದಾರೋ ಎನ್ನುವುದು ತಿಳಿದಿಲ್ಲ. ಕಳೆದ 7 ದಿನಗಳಿಂದ ಕಾರ್ಯಾಚರಣೆ, ನಡೆಯುತ್ತಿದ್ದರೂ ಬಿಟ್ಟೂ ಬಿಡದೇ ಸುರಿಯುತ್ತಿರೋ ಭಾರೀ ಮಳೆಯಿಂದಾಗಿ ಅಡ್ಡಿಯಾಗುತ್ತಿದೆ.
ಘಟನೆ ನಡೆದು ಇಷ್ಟು ದಿನವಾದರೂ ನಿರ್ಲಕ್ಷ್ಯ

ಪರಿಸ್ಥಿತಿ ಗಂಭೀರವಾಗಿದ್ದರೂ ಸಿಎಂ ಸೇರಿದಂತೆ ಸಚಿವರು, ವಿಪಕ್ಷ ನಾಯಕರು ಯಾರೂ ಕೂಡ ಘಟನಾ ಸ್ಥಳಕ್ಕೆ ಬಂದಿರಲಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಸ್ಥಳೀಯ ಶಾಸಕ ಸತೀಶ್ ಸೈಲ್, ಸಚಿವ ಮಂಕಾಳು ವೈದ್ಯ ಬಿಟ್ಟರೆ ಸರ್ಕಾರದ ಯಾವೊಬ್ಬ ಸಚಿವರೂ ಅತ್ತ ಸುಳಿದಿರಲಿಲ್ಲ.

ನಿನ್ನೆ ಎಚ್‌ಡಿಕೆ ಪರಿಶೀಲನೆ, ಇಂದು ಬಿಜೆಪಿ ನಾಯಕರ ಭೇಟಿ

ಇದಾದ ಬಳಿಕ ನಿನ್ನೆ ಕುಮಾರಸ್ವಾಮಿ ಭೇಟಿ ನೀಡಿ, ಪರಿಶೀಲನೆ ಮಾಡಿದ್ದರು. ಇದರ ಬೆನ್ನಲ್ಲೇ ಇಂದು ಸಿಎಂ ಸಿದ್ದರಾಮಯ್ಯ, ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕ ಆರ್‌ವಿ ದೇಶಪಾಂಡೆ, ಸಚಿವ ಕೃಷ್ಣಭೈರೇಗೌಡ ಭೇಟಿ ನೀಡಿದ್ರು. ಮತ್ತೊಂದೆಡೆ ವಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ರಾಘವೇಂದ್ರ ಸೇರಿದಂತೆ ಬಿಜೆಪಿ ನಾಯಕರೂ ಕೂಡ ಭೇಟಿ ನೀಡಿ ಪರಿಶೀಲಿಸಿದ್ರು.
5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಸಿಎಂ

ಇಂದು ಸ್ಥಳಕ್ಕೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಪರಿಶೀಲನೆ ನಡೆಸಿದ್ರು. ಭಾರೀ ಮಳೆಯಲ್ಲೇ ರೇನ್‌ಕೋಟ್ ಹಾಕಿಕೊಂಡು, ಛತ್ರಿ ಹಿಡಿದುಕೊಂಡು ಪರಿಶೀಲಿಸಿದ್ರು. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಇದೇ ವೇಳೆ ಸಿಎಂ 5 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ರು.

ಮಿಲಿಟರಿ ಪಡೆಯಿಂದ ಕಾರ್ಯಾಚರಣೆ ಆರಂಭ

ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಇದೀಗ ಕೇಂದ್ರದ ಮಿಲಿಟರಿ ಪಡೆ ಆಗನಮಿಸಿದೆ. ಬೆಳಗಾವಿಯಿಂದ ಅಂಕೋಲಕ್ಕೆ ಆಗಮಿಸಿರೋ ಮಿಲಿಟರಿ ಪಡೆ, ಇದೀಗ ಕಾರ್ಯಾಚರಣೆಗೆ ಆರಂಭಿಸಿದೆ. ಗುಡ್ಡದ ಮಣ್ಣನ ಅಡಿಯಲ್ಲಿ ಸಿಲುಕಿರುವ ಕೇರಳ ಮೂಲದ ಲಾರಿ ತೆಗೆಯಲು ಮಿಲಿಟರಿ ಪಡೆ ಕಾರ್ಯಾಚರಣೆ ನಡೆಸಲಿದೆ.

Post a Comment

0Comments

Post a Comment (0)