*ರಾಜ್ಯ ಬಿಜೆಪಿ ಪೂರ್ವ ಸೈನಿಕರ ಪ್ರಕೋಷ್ಠ ಸಹ ಸಂಚಾಲಕ ಕುಮಾರ್ ಹಿರೇಮಠ ಆಗ್ರಹ*
ಭಾರತೀಯ ಜನತಾ ಪಾರ್ಟಿ ಬೆಳಗಾವಿ ವತಿಯಿಂದ ಬೆಳಗಾವಿ ನಗರದ ಸರ್ಕಿಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಕುಮಾರ್ ಹಿರೇಮಠ ಅವರು ಮಾತನಾಡಿ
ಲೋಕಸಭೆ ಪ್ರತಿಪಕ್ಷ
ರಾಹುಲ್ ಗಾಂಧಿಯವರು ಅಗ್ನಿಪಥ
ಯೋಜನೆ
ಕುರಿತು ಹಗುರವಾಗಿ
ಮಾತನಾಡಿದ್ದು, ಇದು ಸೈನಿಕರಿಗೆ
ಮಾಡಿದ ಅವಮಾನವಾಗಿದೆ. ಕೂಡಲೆ
ಅವರು ಯುವ ಜನತೆಯ ಕ್ಷಮೆ ಕೇಳ
ಬೇಕು ,ಅಗ್ನಿಪಥ
ಯೋಜನೆಯು ಭಾರತದ ಸೈನ್ಯವನ್ನು
ಬಲಪಡಿಸುವ ಹಾಗೂ ದೇಶ ಕಾಪಾ
ಡುವ ದೇಶ ಸೇವೆಯೇ ಪರಮೋಚ್ಛ
ಎಂದು ಬಿಂಬಿಸುವ ಯೋಜನೆಯಾ
ಗಿದೆ. ಆದರೆ, ಕಾಂಗ್ರೆಸ್ಸಿಗರು ಅದ
ರಲ್ಲೂ ರಾಹುಲ್ ಗಾಂಧಿಯವರು ಈ
ಯೋಜನೆ ಬಗ್ಗೆ ಅಪಪ್ರಚಾರ
ಮಾಡುತ್ತಿದ್ದಾರೆ ಎಂದು ದೂರಿದರು.
ಪ್ರಧಾನಿ ಮೋದಿಯವರು ಭಾರತೀ
ಯ ಸೈನ್ಯಕ್ಕೆ ಬಲ ತುಂಬುತ್ತಿದ್ದಾರೆ.
ಸೈನಿಕರಿಗೆ ಎಲ್ಲಾ ಸೌಕರ್ಯಗಳನ್ನು
ಒದಗಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ
ಯುವ ಸೈನಿಕರು ಹೆಚ್ಚಾಗಬೇಕು ಎಂಬ
ಉದ್ದೇಶದಿಂದ ಅಗ್ನಿಪಥ ಯೋಜನೆ
ಜಾರಿಗೆ ತಂದಿದ್ದಾರೆ. ಈಗಾಗಲೇ
ಸುಮಾರು 80 ಸಾವಿರ ಯುವಕರು ಈ
ಯೋಜನೆಯಡಿ ದೇಶ ಸೇವೆ
ಮಾಡುತ್ತಿದ್ದಾರೆ ಎಂದರು.
-18 ವರ್ಷ ಮೇಲ್ಪಟ್ಟವರು, ಈ
ಯೋಜನೆಯಡಿ ಸೈನ್ಯಕ್ಕೆ
ಸೇರ
ಬಹುದು.
ತರಬೇತಿಗಾಗಿಯೇ - 1
ಕೋಟಿಗೂ ಅಧಿಕ ಹಣವನ್ನು ಖರ್ಚು
ಮಾಡಲಾಗುತ್ತಿದೆ. ಅಗ್ನಿಪಥಯೋಜನೆ
ಇದೊಂದು ದೇಶದ ಸೇವೆ ಜೊತೆಗೆ
ಯುವಕರಲ್ಲಿ ಆರ್ಥಿಕ ಬಲ ತುಂಬುವ
ಮಹತ್ವದ ಯೋಜನೆ ಯಾಗಿದೆ ಎಂದು
ತಿಳಿಸಿದರು. ಯುವಕರಿಗೆ ಆಸರೆಯಾ
ಗಿರುವ, ದೇಶ ಪ್ರೇಮ ಬೆಳೆಸುವ ಯೋಜನೆ ಕುರಿತು ಕಾಂಗ್ರೆಸ್ ಮುಖಂಡರು
ಹಗುರವಾಗಿ ಮಾತನಾಡುತ್ತಿದ್ದು,
ಸರಿಯಲ್ಲ ಎಂದರು. ಈ ಸಂದರ್ಭದಲ್ಲಿ ಭಾ.ಜ.ಪಾ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ
ಮಹೇಶ್ ಮೋಹಿತೆ,ಜಿಲ್ಲಾ ಮಾಧ್ಯಮ ಪ್ರಮುಖ ಸಚಿನ್ ಕಡಿ, ಸಹ ಪ್ರಮುಖ ಬಾಳೇಶ್ ಚವ್ವನ್ನವರ,ಮಾಜಿ ಸೈನಿಕರ ಒಕ್ಕೂಟದ ಬೆಳಗಾವಿ ಗ್ರಾಮಂತರ ತಾಲೂಕಾ ಅಧ್ಯಕ್ಷ ರಮೇಶ ಚೌಗಲಾ, ಜಗದೀಶ್ ಪೂಜೇರಿ,ಭಾ.ಜ.ಪಾ ಕಾರ್ಯಾಲಯ ಕಾರ್ಯದರ್ಶಿ ವಿಠ್ಠಲ್ ಸಾಯಣ್ಣವರ,ಲಕ್ಷ್ಮಣ ದಂಡಾಪುರೆ, ರಾಜೇಂದ್ರ ಹಲಗಿ,ಶಿವಾಜಿ ಕದಂ,ಸಂಗಪ್ಪ ಮೇಟಿ, ವಿಲಾಸ್ ಜಾಂಗಳೆ ಹಾಗೂ ಅನೇಕರು ಉಪಸ್ಥಿತರಿದ್ದರು.