ಬೈಲಹೊಂಗಲ ತಾಲೂಕಿನ ವ್ಯಾಪ್ತಿಯಲಿ ಬರುವ ರೈತರ ಜಮೀನಿನಲ್ಲಿ ಕೃಷಿ ಇಲಾಖೆಯಲ್ಲಿರುವ ಯೋಜನೆಗಳಿಂದ ಕೃಷಿ ಸಲಕರಣೆಗಲಾದ. ಸೋಯಾಬೀನ್ ಬಿತ್ತನೆ ಹಾಗೂ ಅಂತರ ಬೇಸಾಯ ಕುರಿತು ಪ್ರಾತ್ಯಕ್ಷಕೆ. ವಿವಿಧ ಕೀಟನಾಶಕ ಸಿಂಪರಣಾ ಸಾಧನೆಗಳೊಂದಿಗೆ ಕೀಟನಾಶಕಗಳ ಸಿಂಪರಣೆ. ರೈತರ ಕ್ಷೇತ್ರದಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯ. ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮೆ ಪ್ರಚಾರ ವಾಹನ ಉದ್ಘಾಟನೆ. ಉಪಕರಣಗಳನ್ನು ಚಾಲನೆ ನೀಡಿದ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಸಚಿವರು ಬೈಲಹೊಂಗಲ ಮತಕ್ಷೇತ್ರದ ರೈತರ ಹೃದಯ ಭಾಗವಾಗಿರುವ ಕೃಷಿ ಮಾರುಕಟ್ಟೆಯ ಕೆಲವು ಚಟುವಟಿಕೆಗಳು ಸ್ಥಗಿತಗೊಂಡಿರುವ ಹಾಗೆ ಕಂಡು ಬರುತ್ತಿದ್ದು ಎಂಬ ರೈತರ ಪ್ರಶ್ನೆಗೆ ಉತ್ತರಿಸಿದ ಸಚಿವ ಸ್ಥಳೀಯ ಶಾಸಕರ ಜೊತೆ ಚರ್ಚಿಸಿ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಲು ಭರವಸೆ ನೀಡಿದರು.
ಕೃಷಿ ಇಲಾಖೆಯಲ್ಲಿ ಬರುವ ಖಾಲಿ ಹುದ್ದೆಗಳನ್ನು ಕೂಡಲೇ ನೇಮಕ ಮಾಡಬೇಕೆಂದು ಪ್ರಶ್ನಿಸಿದಾಗ ಸಚಿವರು ಮಾತನಾಡಿ ಹತ್ತು ಹದಿನೈದು ವರ್ಷಗಳಿಂದ ಈ ಹುದ್ದೆಗಳು ಖಾಲಿ ಇದ್ದು ಈಗ ನಮ್ಮ ಸರ್ಕಾರ ಸಿದ್ದರಾಮಯ್ಯ ಸರ್ಕಾರ ಡಿಕೆ ಶಿವಕುಮಾರ್ ಸರಕಾರ ಹಾಗೂ ಚೆಲುವರಾಯಸ್ವಾಮಿಅವರು ಕೂಡಿಕೊಂಡು ಆದಷ್ಟು ಬೇಗ ಭರ್ತಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಡಿ. ದರ್ಜೆಯ ನೌಕರರ ಹುದ್ದೆಗೆ ಯಾರು ಅರ್ಹತೆ ಇದ್ದಾರೆ ಅಪ್ಲಿಕೇಶನ್ ಆಗ್ತಾರೆ ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನರ್ ಮೂಲಕ ನೇಮಕ ಮಾಡಿಕೊಳ್ಳುವುದು ನೇರ ನೇಮಕಾತಿ ಇಲಾಖೆ ಮಾಡಲ್ಲ ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನರ್ ಅದರ ಮೂಲಕ 650 ಜನರನ್ನು ಕೃಷಿ ಇಲಾಖೆಯಲ್ಲಿ ನೇಮಕ ಮಾಡ್ಲಿಕ್ಕೆ ಸರ್ಕಾರ ಮಂಜೂರು ಮಾಡಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ರೈತ ಸಂಘದ ಪ್ರಭಾವಿ ನಾಯಕರಾದ ಕೇಂದ್ರ ಮಾಜಿ ಸಚಿವರು ಬಾಬಾಗೌಡ ಪಾಟೀಲ ಅಭಿಮಾನಿಗಳು ರೈತರ ಹೊಲಗಳಿಗೆ ಹೋಗುವ ರಸ್ತೆಗಳ ನಿರ್ಮಾಣ ಮಾಡಬೇಕೆಂದು. ಮಲ್ಲೂರು ಮಾಟೊಳ್ಳಿ ಹೊಸೂರ್ ಗ್ರಾಮಗಳಿಂದ ಆಗಮಿಸಿದ ರೈತರಿಂದ ಒತ್ತಾಯಿಸಿದರು.
ರೈತರ ಆಕ್ರೋಶಕ್ಕೆ ಮೌನವಾದ ಸಚಿವರು ಗ್ರಾಮ ಪಂಚಾಯತಿಯಲ್ಲಿ ನರೇಗಾ ಕಾಮಗಾರಿಯನ್ನು ನಿಲ್ಲಿಸಲು ಸಚಿವರಿಗೆ ಬೇಡಿಕೊಂಡರು. ನರೇಗಾ ಕಾಮನಗಾರಿಕೆಯಿಂದ ರೈತರಗೆ ಕೂಲಿ ಕಾರ್ಮಿಕರ ಕೊರತೆ ಕಾಣುತ್ತಿದ್ದು. ರೈತರ ಆರ್ಥಿಕತೆಗೆ ಹೊಡೆತ ಬಿದ್ದಿದ್ದು ನರೇಗಾ ಕಾಮಗಾರಿಯಿಂದ ರೈತರಿಗೆ ತಮ್ಮ ಹೊಲಗಳಿಗೆ ಕೆಲಸ ಮಾಡಲು ತುಂಬಾ ಅನಾನುಕೂಲ ಆಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಮಹಾಂತೇಶ್ ಕೌಜಲಗಿ ರೈತರನ್ನು ಸಮಾಧಾನ ಪಡಿಸಿದರು
ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಮಹಾಂತೇಶ್ ಕೌಜಲಗಿ ಹಾಗೂ ಕಿತ್ತೂರು ಕ್ಷೇತ್ರದ ಶಾಸಕರ ಪತ್ನಿಯಾದ ರೋಹಿಣಿ ಬಾಬಾಸಾಹೇಬ್ ಪಾಟೀಲ್ ಹಾಗೂ ಉಪವಿಭಾಗಾಧಿಕಾರಿಗಳಾದ ಪ್ರಭಾವತಿ ಫಕೀರ್ಪೂರ. ತಹಶೀಲ್ದಾರ ಹನುಮಂತ ಶಿರಹಟ್ಟಿ ಕೃಷಿ ಇಲಾಖೆಯ ಅಧಿಕಾರಿಗಳಾದ ಬಸವರಾಜ ದಳವಾಯಿ ತಾಲೂಕ ಪಂಚಾಯತಿ ಆಡಳಿತ ಅಧಿಕಾರಿಗಳಾದ ಸುಭಾಷ್ ಸಂಪಗಾವಿ ವಿಜಯ್ ಪಾಟೀಲ . ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ರೈತ ಸಂಘದ ಪ್ರತಿನಿಧಿಗಳು ರೈತರು ಉಪಸ್ಥಿತರಿದ್ದರು.