ಅನಧಿಕೃತವಾಗಿ ನಡೆಸುತ್ತಿರುವ ಕೋಚಿಂಗ್ ಸೆಂಟರ್ ಗಳ ಮೇಲೆ ಬಿಇಓ ಅಧಿಕಾರಿಗಳಿಂದ ದಾಳಿ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
 
ಇಂದು ಬೆಳಗ್ಗೆ ಔರಾದ ಪಟ್ಟಣ ದಲ್ಲಿ ಅನಧಿಕೃತವಾಗಿ ನಡೆಯುತಿರುವ ಕೊಚಿಂಗ್ ಕೇಂದ್ರ ಗಳ ಮೇಲೆ ದಾಳಿ ಮಾಡಲಾಗಿದೆ. ಒಟ್ಟು 1000. ಕ್ಕೂ ಹೆಚ್ಚು ಮಕ್ಕಳು ಪತ್ತೆ ಆಗಿದ್ದಾರೆ. ಅದರಲ್ಲಿ 609 ಮಕ್ಕಳು ಸರ್ಕಾರಿ ಶಾಲೆ ಯ ಮಕ್ಕಳು ಇದ್ದಾರೆ. ಅವರಿಗೆ ಶಾಲೆ ಯಲ್ಲಿ ಸೌಲಭ್ಯ ನೀಡಿ ಬೊಗಸ್ ಹಾಜರಿ ಹಾಕುತ್ತಿರುವುದು ಕಂಡು ಬಂದಿದೆ.ಎಲ್ಲಾ ಮಕ್ಕಳ SATS ಪಡೆಯಲಾಗಿದೆ.ಆ ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಿದ್ದಾರೆ ಎಂದು ಕಂಡು ಹಿಡಿದು ಅಂತಹ ಶಾಲೆಯ ಮು.ಗು.ಗಳಿಗೆ ಸೇವೆಯಿಂದ ವಜಾಗೊಳಿಸಿ ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಲು ಈಗ ತಾನೆ ಮಾನ್ಯ CPI ತಿಳಿಸಿದ್ದಾರೆ. ಅನುದಾನಿತ ಶಾಲಾ ಶಿಕ್ಷಕರು ಈ ಶಿಕ್ಷೆಗೆ ಗುರಿಯಾಗುತ್ತಾರೆ.ಅನುದಾನ ರಹಿತ ಶಾಲೆಗೆ ನೀಡಿದ ಅನುಮತಿ ರದ್ದುಗೋಳಿಸಿ ಅವರ ಮೇಲು ಕ್ರಿಮಿನಲ್ ಕೇಸ್ ಹಾಕಲು ತಿಸಿದ್ದಾರೆ.ಈ ಪ್ರಕರಣ ದಲ್ಲಿ ಎಷ್ಟು ಜನ ಮು.ಗು.ಹಾಗೂ ಶಿಕ್ಷಕರು ಮತ್ತು CRP ಗಳು ಕೆಲಸ ಕಳೆದುಕೋಳ್ಳುತ್ತಾರೋ ಕಾದು ನೋಡಬೇಕು.SATS ಪರಿಣತಿ ತಂಡ ಔರಾದ ಗೆ ಬರುತ್ತಿದೆ.ಈ ಮಾಹಿತಿಯನ್ನು ತಮಗೆ ತಿಳಿಸಲಾಗುತ್ತಿದೆ.ಎಚ್ಚರಿಕೆ ಯಿಂದ ಕೆಲಸ ಮಾಡಿ.
ಬಿಇಓ ಔರಾದ.

Post a Comment

0Comments

Post a Comment (0)