ಸಂಘಗಳ ಕ್ಷೇತ್ರದಿಂದ ಮೆಳವಂಕಿಯ ಬಸಗೌಡ ದುಂಡನಗೌಡ ಪಾಟೀಲ, ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳ ಕ್ಷೇತ್ರದಿಂದ ಉಮೇಶ ಬಸನಗೌಡ ಪಾಟೀಲ.
ಪತ್ತಿನ ಸಹಕಾರ ಸಂಘಗಳ ಹಾಗೂ ನೌಕರರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಮೂಡಲಗಿಯ ವರ್ಧಮಾನ ಗುಂಡಪ್ಪ ಬೋಳಿ, ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ ಹೊಸೂರಿನ ಈಶ್ವರಚಂದ್ರ ಬಸಪ್ಪ ಇಂಗಳಗಿ, ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಹಳ್ಳೂರಿನ ಬಸಪ್ಪ ಗುರುಪಾದಪ್ಪ ಸಂತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸವದತ್ತಿ ತಾಲೂಕಿನ ಪಿಕೆಪಿಎಸ್ ಕ್ಷೇತ್ರದಿಂದ ಬಸನಗೌಡ ವೀರನಗೌಡ ಪಾಟೀಲ, ಮಲ್ಲನಗೌಡ ಚನ್ನಪ್ಪ ಗೌಡತಿ, ಸುರೇಶ ಭೀಮಪ್ಪ ಮ್ಯಾಕಲ್ ಮತ್ತು ರಾಮದುರ್ಗ ತಾಲೂಕಿನ ಪಿಕೆಪಿಎಸ್ ಕ್ಷೇತ್ರದಿಂದ ನಿಂಗಪ್ಪ ಭೀಮರಾಯಪ್ಪ ದಂಡಿನದುರ್ಗಿ ಮತ್ತು ನಿಂಗಪ್ಪ ಶಂಕರೆಪ್ಪ ಚಿಂಚಲಿ ಅವರು ಕಣದಲ್ಲಿ ಇದ್ದು.
ಸವದತ್ತಿ ಮತ್ತು ರಾಮದುರ್ಗ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರಕ್ಕೆ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ರಿಟರ್ನಿಂಗ ಅಧಿಕಾರಿ ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜೀತ ಶಿರಹಟ್ಟಿ ಅವರು ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಜಿಲ್ಲೆಯ ಸಚಿವರು, ಶಾಸಕರುಗಳು ಹಾಗೂ ಎಲ್ಲ ಸಹಕಾರಿಗಳ ಸಹಕಾರದಿಂದ ಜಿಲ್ಲಾ ಸಹಕಾರ ಯೂನಿಯನ್‍ಗೆ ಆಡಳಿತ ಮಂಡಳಿಗೆ ಎರಡು ಸ್ಥಾನಗಳು ಹೊರತುಪಡಿಸಿ ಉಳಿದ 14 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ಅದಕ್ಕಾಗಿ ಎಲ್ಲ ಮಹನೀಯರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಸಹಕಾರಿ ತತ್ವದ ಮೇಲೆ ನಂಬಿಕೆಯನ್ನಿಟ್ಟು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಶ್ರಮಿಸಿರುವ ಜಿಲ್ಲೆಯ ಯಾವತ್ತೂ ಸಹಕಾರಿಗಳಿಗೆ ಆಭಾರಿಯಾಗಿರುವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಈ ಯೂನಿಯನ್‍ಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸಹಕಾರ ರಂಗದ ಅಭಿವೃದ್ದಿಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ.
ಬಾಲಚಂದ್ರ ಜಾರಕಿಹೊಳಿ
ಶಾಸಕರು ಹಾಗೂ ಬೆಮುಲ್ ಅಧ್ಯಕ್ಷರು