ಈ ಭಾರಿಯ ಮುಂಗಾರು ಆರಂಭದಲ್ಲಿ ಅಬ್ಬರಿಸಿ, ಕೆಲವು ದಿನಗಳ ಹಿಂದೆ ತಣ್ಣಗಾಯಿತು. ಬಿತ್ತನೆ ಮಾಡಿದ ಉತ್ತರ ಕರ್ನಾಟಕದ ರೈತರಿಗೆ ನಿರಾಸೆ ಉಂಟು ಮಾಡಿತ್ತು. ಈ ಮಧ್ಯೆ ಸಿಹಿ ಸುದ್ದಿ ನೀಡಿದ್ದು, ರಾಜ್ಯದ ಮೂರು ಭಾಗಗಳಲ್ಲೂ ಉತ್ತಮ ಮಳೆ ಆಗಲಿದೆ. ಇದರಿಂದ ಮಳೆಗೆ ಕಾಯುತ್ತಿರುವ ರೈತರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.ದರಿಂದಾಗಿ ರಾಜ್ಯದ ನಾನಾ ಕಡೆಗಳಲ್ಲಿ 200ರಿಂದ 300 ಮಿಲಿ ಮೀಟರ್ ವರೆಗೆ ಅತ್ಯಧಿಕ ಮಳೆ, ನೆರೆ, ಪ್ರವಾಹ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನದಲ್ಲಿ ಬದಲಾವಣೆಗಳನ್ನು ವಿವರವಾಗಿ ನೋಡುವುದಾದರೆ, ಬಂಗಾಳಕೊಲ್ಲಿಯ ಪೂರ್ವದ ಉಪಸಾಗರದಲ್ಲಿ 3.1 ಕಿಲೋ ಮೀಟರ್ ಹಾಗೂ 5.8 ಕಿಲೋ ಮೀಟರ್ ಎತ್ತರದಲ್ಲಿ ಮೇಲ್ಮೈ ಸುಳಿಗಾಳಿ ಪ್ರದೇಶ ನಿರ್ಮಾಣವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿಯ ವಿಜ್ಞಾನಿ. ಡಾ.ಸಿ.ಎಸ್ ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.
ಚಂಡಮಾರುತ ಎದುರಾಗುತ್ತಾ?
ಸದ್ಯ ಈ ಸ್ಟ್ರಫ್ ಮೇಲ್ಮೈ 'ಸುಳಿಗಾಳಿ'ಯ ಲಕ್ಷಣದಿಂದ ಬದಲಾಗಿ 'ಕಡಿಮೆ ಒತ್ತಡದ ಪ್ರದೇಶ'ವಾಗಿ ನಿರ್ಮಾಣವಾಗಿದೆ. ಇದರ ತೀವ್ರತೆ ಇನ್ನೂ ಮುಂದುವರೆದರೆ ಅದು 'ವಾಯುಭಾರ ಕುಸಿತ'ವಾಗಿಯೂ ಅದಾದ ನಂತರ 'ಚಂಡಮಾರುತ'ವಾಗಿಯೂ ಬದಲಾಗುವ ನಿರೀಕ್ಷೆಗಳು ಇವೆ. ಸದ್ಯದ ಮುನ್ಸೂಚನೆ ಪ್ರಕಾರ, ಇದು 'ಕಡಿಮೆ ಒತ್ತಡದ ಪ್ರದೇಶ'ದ ಹಂ ಹಾಗೂತದಲ್ಲಿದೆ ಎನ್ನಲಾಗುತ್ತಿದೆ.
ಯಾವ ವೈಪರಿತ್ಯಗಳಿಂದ ಎಲ್ಲೆಲ್ಲಿ ಮಳೆ ಸಂಭವಿಸುತ್ತದೆ?
ಸಾಮಾನ್ಯವಾಗಿ ಬಂಗಾಳಕೊಲ್ಲಿಯಲ್ಲಿ, ಅಂಡಮಾನ್ ಭಾಗದಲ್ಲಿ ಸಮುದ್ರದಲ್ಲಿ ಬದಲಾವಣೆಗಳು ಸಂಭವಿಸಿದರೆ, ಅವು ನಿರಂತರವಾಗಿ ಮುಂದುವರಿದರೆ ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ, ಬೆಂಗಳೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಚಾಮರಾಜನಗರ, ತುಮಕೂರು, ಚಿತ್ರದುರ್ಗ ಕೆಲವೆ ದಾವಣಗೆರೆ ವರೆಗೆ ಅದರ ಪ್ರಭಾದಿಂದ ಮಳೆ ಬರುತ್ತದೆ. ಈ ವೇಳೆ ಉತ್ತರ ಕರ್ನಾಟಕದಲ್ಲಿ ಅಷ್ಟಾಗಿ ಮಳೆ ಆಗುವುದಿಲ್ಲ.
ಅದೇ ಅರಬ್ಬಿ ಸಮುದ್ರ ಮೇಲ್ಮೈನಲ್ಲಿ ವೈಪರಿತ್ಯಗಳು ಕಂಡು ಬಂದರೆ, ಇದರ ಪ್ರಭಾವದಿಂದ ಮಳೆನಾಡು, ಕರಾವಳಿ ಜಿಲ್ಲೆಗಳು ಸೇರಿದಂತೆ ಉತ್ತರ ಕರ್ನಾಟಕದ ಹಾವೇರಿ, ಗದಗ, ಬೆಳಗಾವಿ, ಕೊಪ್ಪಳ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಉಂಟಾಗುತ್ತಿದೆ. ನಾಳೆ ಸೋಮವಾರದಿಂದ ಮುಂದಿನ ವಾರಪೂರ್ತಿ ಇಂತದ್ದೆ ವಾತಾವರಣ ನಿರ್ಮಾಣವಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಮೀನುಗಾರರಿಗೆ ಎಚ್ಚರಿಕೆ
ಜೂನ್ 23 ದಿನಗಳ ಕಾಲ ಎಲ್ಲೆಲ್ಲಿ ಮಳೆ ಕೊರತೆ ಆಗಿದೆಯೇ ಅಲ್ಲೆಲ್ಲ ವ್ಯಾಪಕ ಮಳೆ ಆಗಲಿದೆ. ಅನೇಕ ಕಡೆಗಳಲ್ಲಿ ನೆರೆ ಪ್ರವಾಹ ಭೀತಿ ಇದ್ದು, ಅಗತ್ಯ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಕರಾವಳಿ ಭಾಗದಲ್ಲಿ ಗಾಳಿಯ ವೇಗ ಹೆಚ್ಚಾಗಿರುವುದರಿಂದ ಮೀನುಗಾರರು ಮೀನುಗಾರಿಕೆಗೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಉತ್ತರ ಕರ್ನಾಟಕಕ್ಕೂ ಭಾರೀ ಮಳೆ
ಈ ಭಾರಿಯು ಉತ್ತರ ಕರ್ನಾಟಕದ ಅನೇಕ ಕಡೆಗಳಲ್ಲಿ ಚೂರು ಮಳೆ ಆಗಿತ್ತು. ನಂತರ ಮಳೆ ಕಣ್ಮರೆಯಾಗಿತ್ತು. ಮಳೆ ಬರುತ್ತದೆ ಎಂಬ ನಿರೀಕ್ಷೆಯಿಂದ ಆರಂಭಿಕ ಮಳೆ ಬಂದಾಗ ಮುಂಗಾರು ಬಿತ್ತನೆ ಮಾಡಿದ ರೈತರಿಗೆ ಮಳೆಯ ಅಗತ್ಯ ಉಂಟಾಗಿದೆ. ಮಳೆ ಆಗದಿದ್ದರೆ, ಮೆಕ್ಕೆಜೋಳ, ಹೆಸರು, ಶೇಂಗಾದಂತೆ ಮುಂಗಾರು ಹಂಗಾಮಿನ ಖಾರೀಫ್ ಬೆಳೆಗೆ ಹಾನಿ ಆಗುವ ಸಾಧ್ಯತೆ ಇದೆ. ಸದ್ಯದ ಮುನ್ಸೂಚನೆ ಪ್ರಕಾರ ಉತ್ತರ ಒಳನಾಡಿಗೂ ಭಾರೀ ಮಳೆ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ.