ಪೆಟ್ರೋಲ್/ ಡೀನೆಲ್ ಮತ್ತು ಇತರೆ ಅಗತ್ಯ ವಸ್ತುಗಳ ಮತ್ತು ಸೇವೆಗಳ ಬೆಲೆ ಏರಿಕೆಯನ್ನು ಕೈಬಿಡಲು

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಕೆಲವು ದಿನಗಳ ಹಿಂದೆ, ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ದೀನೇಲ್ ಮೇಲಿನ ತೆರಿಗೆ ಏರಕೆಯ ಮಾಡುವ ಮೂಲಕ ಅವುಗಳ ಬೆಲೆಯನ್ನು ರೂ. 3/- ಏರಿಸಲಾಗಿದೆ. ತಾವು ತಮ್ಮ ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಪೆಟ್ರೋಲ್ / ಡೀಸೆಲ್ ಸೇರಿದಂತೆ ಇತರ ತೆರಿಗೆಗಳನ್ನು ಅಥವಾ ಅಗತ್ಯ ವಸ್ತುಗಳ / ಸೇವೆಗಳ ಬೆಲೆಯನ್ನು ಏರಿಸಲು ನಿರ್ಧರಿಸಲಾಗಿದೆ. ರಾಜ್ಯದ ಜನರು ಈಗಷ್ಟೇ ಬರಗಾಲದಿಂದ ತತ್ತರಿಸಿ, ಸುಧಾರಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ. ಇನ್ನು ಪ್ರಸಕ್ತ ಮುಂಗಾರು ಯಾದ ರೀತಿ ಆಗುತ್ತದೆ ಎಂದು ಯಾರಿಗೂ ತಿಳಿದಿಲ್ಲ, ಅಂತಹ ಸಂದರ್ಭದಲ್ಲಿ ಧಿಡೀರನ ತಾವು ಪಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸುವ ಕ್ರಮ ಕೈಗೊಂಡಿದ್ದೀರಿ. ಹಾಗೆಯೆ ಸದ್ಯದಲ್ಲಿಯೆ, ಬಸ್ ಟಿಕೆಟ್ ದರ, ಹಾಲಿನ ಮತ್ತು ಬೆಂಗಳೂರು ನಗರದಲ್ಲಿ ನೀರಿನ ದರವನ್ನು ಹೆಚ್ಚಿಸುವ ಹಾಗು ಘನ ತ್ಯಾಜ್ಯ ಶುಲ್ಕ ವಿಧಿಸುವ ಪ್ರಸ್ತಾಪ ಇರುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಮ್ಮ ಈ ಕ್ರಮವು ತಮ್ಮ ಖಜಾನೆಯು ಖಾಲಿಯಾಗಿದೆ ಮತ್ತು ತಮ್ಮ ನೆಚ್ಚಿನ ಗ್ಯಾರಂಟಿ ಯೋಜನೆಗಳು ಜಾರಿ ಮಾಡಲು ಹಣ ಹೊಂದಿಸಲು ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ ಅದದೆ, ಭ್ರಷ್ಟಾಚಾದ ಮತ್ತು ದುರಾಡಳಿತದಿಂದ ರಾಜ್ಯದ ಬೊಕ್ಕಸವು. ಖಾಲಿಯಾಗಿದ್ದು, ಗ್ಯಾರಂಟಿ ಕಾರ್ಯಕ್ರಮಗಳನ್ನು ಜಾರಿಯಲ್ಲಿಡಲು ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲು ರಾಜ್ಯದ ಜನರ ಮೇಲೆ ನಿರಂತರವಾಗಿ ಮತ್ತು ಎಲ್ಲಾ ರೀತಿಯಿಂದಲೂ ಬರೆ ಎಳೆಯುವ ಕೆಲಸ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಅವಶ್ಯಕ ವಸ್ತುಗಳ ಮತ್ತು ಸೇವೆಗಳ ಮೇಲೆ ತೆರಿಗೆ ಏರಿಸುತ್ತಾ ಬಂದಿರುತ್ತೀರಿ. ತಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ವಿದ್ಯುತ್‌, ಹಾಲು ಮತ್ತು ಛಾಪಾ ಕಾಗದದ ದರ ಏರಿಸಲಾಗಿತ್ತು. ಈಗ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ಹೆಚ್ಚಿಸಲಾಗಿದೆ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ಮನೆಗೆ ರೂ. 100/- ರಂತೆ ತ್ಯಾಜ್ಯ ವಿಲೇವಾರಿ ಶುಲ್ಕ ವಿಧಿಸಲು ಪ್ರಸ್ತಾವನೆಯನ್ನು ಮಾಡಲಾಗಿದೆ.

ರಾಜ್ಯದಲ್ಲಿ ಕಲ್ಯಾಣ ಯೋಜನೆಗಳ ಜಾರಿಯನ್ನು ಕೆ ಆರ್ ಎಸ್ ಪಕ್ಷವು ಸ್ವಾಗತಿಸಿದೆ ಮತ್ತು ಬೆಂಬಲಿಸಿದೆ. ಇದಕ್ಕೆ ಅಪಾರ ಸಂಪನ್ಮೂಗಳ ಕ್ರೂಢೀಕರಣ ಅಗತ್ಯವಿದ್ದು, ಈ ನಿಟ್ಟಿನಲ್ಲಿ ತಮ್ಮ ನೇತೃತ್ವದ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ದುರಾಡಳಿತವು ಹಿಂದಿನ ಸರ್ಕಾರವನ್ನು ಮೀರಿಸಿದ್ದು ಇದರಿಂದ ರಾಜ್ಯದ ಖಜಾನೆಯು ಸಂಪೂರ್ಣವಾಗಿ ಖಾಲಿಯಾಗಿದೆ. ಪರಿಣಾಮವಾಗಿ ಸರ್ಕಾರಕ್ಕೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಜಾರಿ ಮಾಡಲುಸಾಧ್ಯವಾಗುತ್ತಿಲ್ಲ ಇದರಿಂದ ಸರ್ಕಾರವು ಒಂದೊಂದೇ ಅವಶ್ಯಕ ವಸ್ತುಗಳ ಮತ್ತು ಸೇವೆಗಳ ಮೇಲೆ ತೆರಿಗೆ/ ಬೆಲೆ ಏರಿಸುತ್ತಿದೆ. ರಾಜ್ಯ ಸರ್ಕಾರವು ಒಂದು ಕೈಯಲ್ಲಿ ಗ್ಯಾರಂಟಿ ನೀಡುತ್ತಿದ್ದರೆ, ಮತ್ತೊಂದು ಕೈಯಲ್ಲಿ ಅದನ್ನು ಸೇರಿಸಿ ಕಿತ್ತುಕೊಳ್ಳುತ್ತಿದೆ. ಸರ್ಕಾರದ ಈ ಕ್ರಮದಿಂದ ರಾಜ್ಯದ ಜನರ ಬದುಕು ದುಸ್ತರವಾಗಿದೆ.

ಹಿಂದಿನ 40% ಬಿಜೆಪಿ ಸರ್ಕಾರದಿಂದ ಬೇಸತ್ತಿದ್ದ ರಾಜ್ಯದ ಜನತೆ, ಅನಿಪಾರ್ಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದರು. ಆದರ, ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ನಿರಂತರವಾಗಿ ದಾಖಲೆ ಪ್ರಮಾಣದಲ್ಲಿ ವರ್ಗಾವಣೆ ದಂಧೆಯ ಪರಿಣಾಮವಾಗಿ ಆಧಿಕಾರಿಗಳು ಜನರನ್ನು ಲಂಚಕ್ಕಾಗಿ ಪೀಡಿಸುವುದು ಮತ್ತಷ್ಟು ಹೆಚ್ಚಾಗಿದೆ. ಬಿಡಿಎ ಮತ್ತು ಬಿಬಿಎಂಪಿಗಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದು, ರಾಜ್ಯದಲ್ಲಿ ಭೂ ಪರಿವರ್ತನೆಗೆ ಉದ್ಯಮಿಗಳು ನೀಡುತ್ತಿದ್ದ ಲಂಚವು ಹಲವು ಪಟ್ಟು ಹೆಚ್ಚಾಗಿದ್ದು ಉದ್ಯಮಗಳನ್ನು ನಡೆಸುವುದೇ ಸಾಹಸವಾಗಿದೆ. ರಾಜ್ಯದಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ದಂದೆ. ಕ್ವಾರಿ/ ಕ್ರಶರ್, ಇತರೆ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ ರಾಜ್ಯದ ಬಹುತೇಕ ರಸ್ತೆಗಳು ಇಂದು ಟೋಲ್ ರಸ್ತೆಗಳಾಗಿದ್ದ ರೈಸರು ತಮ್ಮ ಜಮೀನುಗಳಿಗೆ ಓಡಾಡಲು ಸಹ ಟೋಲ್ ನೀಡಬೇಕಾದ ಪರಿಸ್ಥಿತಿ ನಿರ್ಮಿಸಲಾಗಿದೆ.

ವಾಲ್ಮೀಕಿ ನಿಗಮ ಹಗರಣವು ಈ ಸರ್ಕಾರ ಜನರ ತೆರಿಗೆ ಹಣವನ್ನು ಹೇಗೆ ದೋಚುತ್ತಿದೆ ಎಂದು ತೋರಿಸಿದೆ. ಇದೇ ರೀತಿ ಭೋವಿ ನಿಗಮ ಹಾಗು ವಕ್ಸ್ ಬೋರ್ಡ್ ಗಳಲ್ಲೂ ಸಹ ಹಣ ದುರ್ಬಳಕೆಯಾಗಿರುವ ಬಗ್ಗೆ ವರದಿಗಳಿವೆ. ಹಾಗೆಯೆ ಕಾರ್ಮಿಕ ಇಲಾಖೆಯಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆದಿದೆ. ಇಂತಹ ಸಂದರ್ಭದಲ್ಲಿ ಜನರಿಗೆ ಬರೆ ಎಳೆಯುವದು ಸರ್ವೇ ಸಾಮಾನ್ಯವಾಗಲಿದೆ. ರಾಜ್ಯದ ಖಜಾನೆಗೆ ಕನ್ನ ಕೊರೆದಿರಬೇಕಾದರೆ, ಸರ್ಕಾರಕ್ಕೆ ಎಷ್ಟು ದುಡ್ಡಿದ್ದರೂ ಸಾಲುವುದಿಲ್ಲ. ಈ ಬಗ್ಗೆ ತಾವು ಗಂಭೀರವಾಗಿ ಯೋಚಿಸಬೇಕಿದೆ.

ದಿನ ನಿತ್ಯದ ಅಗತ್ಯಗಳಾದ ತರಕಾರಿ, ಬೇಳೆ ಕಾಳು ಹಾಗು ಇತರೆ ವಸ್ತುಗಳ ಬೆಲೆ ಗಗನ ಮುಟ್ಟುತ್ತಿದೆ. ಇದರ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿ ಬಹುತೇಕ ಎಲ್ಲಾ ವಸ್ತುಗಳ ಮತ್ತು ಸೇವೆಗಳು ದುಬಾರಿಯಾಗಿ ಜನರು ಪರದಾಡುವಂತೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರವು ಕಂಡ ಕಂಡ ಕಡೆಯಲ್ಲಾ ಹಣ ಹೊಂದಿಸಲು ಪರದಾಡುತ್ತಿರುವುದು ಕಾಣುತ್ತಿದೆ. ಸರ್ಕಾರವು ಕೆಎಂಇಆರ್‌ಸಿ ಹಣವನ್ನು ದುರ್ಬಳಕೆ ಮಾಡಿಕೊಳ್ಳಲು ನಿರಂತರವಾಗಿ ವಿಫಲ ಪ್ರಯತ್ನ ಮಾಡುತ್ತಿದೆ. ಈಗ ಬೆಂಗಳೂರಿನ ಮತ್ತು ಸುತ್ತಮುತ್ತಲಿನ ಸರ್ಕಾರಿ ಭೂಮಿಯನ್ನು (25 ಸಾವಿರ ಎಕರೆ) ಪರಭಾರೆ ಮಾಡಿ ಹಣ ಹೊಂದಿಸಲು ಹಾಗು ಮತ್ತೊಂದು ಸುತ್ತು ನೀರು, ಹಾಲು, ಬಸ್ ದರ ಏರಿಸಲು ಮುಂದಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿನ ಬಿಡಿಎ ಕಾಂಪ್ಲೆಕ್ಸ್ ಗಳನ್ನು ಖಾಸಗಿಯವರಿಗೆ ಪರಬಾರೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ವಿರುದ್ಧ ಮಾತನಾಡುತ್ತಿದ್ದ ನೀವು. ಈಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೀರಿ.

ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿಯಿದ್ದು, ಬೊಕ್ಕಸದಲ್ಲಿನ ಹಣ ಖಾಲಿಯಾಗಿರುವುದರಿಂದ ನೇಮಕಾತಿ ಮಾಡಲು. ಹೆಣಗಾಡುವಂತಾಗಿದೆ. ಭ್ರಷ್ಟಾಚಾರ ಇದೇ ರೀತಿ ಮುಂದುವರೆದರೆ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಖಾಸಗಿ ವಲಯದ ಬೆಳವಣಿಗೆಯ ಮೇಲೆ ನೇರವಾಗಿ ದುಷ್ಪರಿಣಾಮ ಬೀರಲಿದೆ. ಅದು ರಾಜ್ಯದ ಆರ್ಥಿಕ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಗ್ಯಾರಂಟಿಗಳ ಸುತ್ತ ಗಿರಕಿ ಹೊಡೆಯುತ್ತಿರುವ ಸರ್ಕಾರವು ಎಚ್ಚೆತ್ತುಕೊಳ್ಳದಿದ್ದರೆ, ಇದೇ ಗ್ಯಾರಂಟಿಗಳು ಮುಂದೆ ಉರುಳಾಗುವುದು ಗ್ಯಾರಂಟಿ. ಈ ಉರುಳಿನಿಂದ ತಪ್ಪಿಸಿಕೊಳ್ಳಬೇಕೆಂದರೆ, ತಕ್ಷಣವೇ ಭ್ರಷ್ಟಾಚಾರಕ್ಕೆ ಮತ್ತು ದುರಾಡಳಿಕ್ಕೆ ತಡೆ ಒಡ್ಡಬೇಕು ಮತ್ತು ಖಜಾನೆಯ ರಂಧ್ರಗಳನ್ನು ಮುಚ್ಚುವ ಕೆಲಸವನ್ನು ಆದ್ಯತೆಯ ಮೇಲೆ ಮಾಡಬೇಕಾಗಿದೆ. ಸರ್ಕಾರವು ಈ ಬಗ್ಗೆ ಎಚ್ಚೆತ್ತುಕೊಂಡು, ತಕ್ಷಣವೇ ಡೀಸೆಲ್, ಪೆಟ್ರೋಲ್ ದರ ಏರಿಕೆಯನ್ನು ಹಿಂಪಡೆಯಬೇಕು ಮತ್ತು ಪ್ರಸ್ತಾವನೆಯಲ್ಲಿರುವ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಕೈಬಿಡಬೇಕೆಂದು ಕೆ.ಆರ್.ಎಸ್. ಪಕ್ಷ ಆಗ್ರಹಿಸುತ್ತದೆ.

Post a Comment

0Comments

Post a Comment (0)