*ಪತ್ರಿಕಾ ದಿನಾಚರಣೆಯ ಶುಭಾಶಯಗಳು 🖋️*

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
*ಪತ್ರಿಕಾ ದಿನಾಚರಣೆಯ ಶುಭಾಶಯಗಳು 🖋️*
*ನಾಗರಿಕ ಪ್ರಪಂಚದಲ್ಲಿ ವೃತ್ತ ಪತ್ರಿಕೆಗಳಿಗೆ ವಿಶೇಷ ಸ್ಥಾನವಿದೆ. ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಗಂತೂ ಪತ್ರಕರ್ತರ ಸಹಾಯ ಸಾಮಾನ್ಯವಾದದ್ದೇನಲ್ಲ. ಕನ್ನಡದಲ್ಲಿ ಪತ್ರಿಕೋದ್ಯಮ ಪ್ರಾರಂಭವಾದುದು ಕಳೆದ ಶತಮಾನದ ಉತ್ತರಾರ್ಧದಲ್ಲಿ. ಪಾಶ್ಚಾತ್ಯರ ಸಂಪರ್ಕವಾದ ಮೇಲೆ ಅವರು ಮುದ್ರಣಯಂತ್ರಗಳನ್ನು ಕರ್ನಾಟಕದಲ್ಲೂ ಬಳಕೆಗೆ ತಂದರು ನಂತರ ಅವರಿಂದಲ್ಲೇ ಆದಿಯ ಪತ್ರಿಕೆಗಳು ಪ್ರಾರಂಭವಾದವು. ಪಾದ್ರಿಗಳ ಪ್ರಯತ್ನದಿಂದ ಅವರು ಆ ಕೆಲಸವನ್ನು ತಮ್ಮ ಮತ ಪ್ರಚಾರಕಾರ್ಯಕ್ಕಾಗಿ ಪ್ರಾರಂಭಮಾಡಿದರು. ಆದರೂ ಪತ್ರಿಕೆಗಳು ಕನ್ನಡ ಜನ ಜೀವನದ ಪ್ರತಿಬಿಂಬವಾಗಿದೆ. ಪ್ರಥಮ ಪತ್ರಿಕೆಯವಿಷಯದ ಚರ್ಚೆ ಇದ್ದರೂ ೧೮೪೩ ನೆಯ ಜುಲೈ ಒಂದರಲ್ಲಿ ಪ್ರಾರಂಭವಾದ 'ಮಂಗಳೂರು ಸಮಾಚಾರ' ವೆಂಬ ಪತ್ರಿಕೆಯೇ ಕರ್ನಾಟಕದ ಪ್ರಥಮ ಪತ್ರಿಕೆಯೆಂದು ಭಾವಿಸಬಹುದು.*

Post a Comment

0Comments

Post a Comment (0)