ಜೂನ್ 22: ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ಬದಲಾವಣೆಗಳ ಪ್ರಭಾವದಿಂದ ಈ ಭಾರಿ ಕರ್ನಾಟಕಕ್ಕೆ ವರುಣಾಘಾತ ಫಿಕ್ಸ್ ಎನ್ನಲಾಗಿದೆ. ಏಕೆಂದರೆ ಮುಂಗಾರು ಮಳೆ ಸುರಿಸುವ ಮಾರುತುಗಳು ಹೆಚ್ಚು ಸಕ್ರಿಯಗೊಂಡಿವೆ. ಹೀಗಾಗಿ ರಾಜ್ಯದ ಮೂಲೆ ಮೂಲೆಗಳಿಗೆ ಅತ್ಯಧಿಕ ಮಳೆ ಸುರಿಯುವ ಸಾಧ್ಯತೆಗಳು ಇವೆ.
ಮೊದಲನೇಯದಾಗಿ ಕರ್ನಾಟಕದ ಕರಾವಳಿ, ಕೇರಳ ಹಾಗೂ ಮಹಾರಾಷ್ಟ್ರ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಉಂಟಾಗಿದೆ. ಇದರಿಂದ ರಾಜ್ಯದ ಅನೇಕ ಕಡೆಗಳಲ್ಲಿ ಮೋಡ ಕವಿದ ವಾತಾವರಣವನ್ನು ನಾವು ಈಗಾಗಲೇ ಅನುಭವಿಸುತ್ತಿದ್ದೇವೆ. ಆಗಾಗ ಮಳೆ ಸಹ ಬರುತ್ತಿದೆ.
ಇನ್ನೂ ಬಳಗಾಳಕೊಲ್ಲಿಯ ಉತ್ತರ ಭಾಗದಲ್ಲಿ ವಾಯುಭಾರ ಕುಸಿತಗೊಳ್ಳುವ ಲಕ್ಷಣಗಳು ಕಂಡು ಬಂದಿವೆ. ಸದ್ಯ ಪ್ರಾಥಮಿಕ ಹಂತದಲ್ಲಿರುವ ಇಲ್ಲಿನ ಹವಾಮಾನ ವೈಪರಿತ್ಯವು, ಕೆಲವೇ ದಿನಗಳಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳಬಹುದು. ಅದು ಹಾಗೇಯೇ ತೀವ್ರಗೊಂಡರೆ ಚಂಡಮಾರುತವಾಗಿಯು ಬದಲಾಗುವ ಸಾಧ್ಯತೆಗಳು ಇವೆ.
ಅರಬ್ಬಿ ಸಮುದ್ರದಿಂದ ಬಂಗಾಳಕೊಲ್ಲಿಯತ್ತ ಗಾಳಿ ಬೀಸುವಿಕೆ
ಈ ಎರಡು ಕಾರಣಗಳಿಂದ ಕರ್ನಾಟಕ, ಕೇರಳ, ಆಂದ್ರಪ್ರದೇಶ, ಓಡಿಶಾ ರಾಜ್ಯಗಳ ಮೇಲೂ ಆಗಲಿದೆ. ಮುಖ್ಯಮವಾಗಿ ಬಂಗಾಳಕೊಲ್ಲಿ ಎದ್ದಿರುವ ತೀವ್ರ ಸ್ವರೂಪದ ಕಡಿಮೆ ಗಾಳಿ ಒತ್ತಡದ ಪ್ರದೇಶವು ಭೂಮಿ ಮೇಲ್ಮೈನ ಗಾಳಿಯನ್ನು ಸಾಮಾನ್ಯವಾಗಿ ತನ್ನತ್ತ ಸಳೆಯುತ್ತವೆ. ಇದರಿಂದ ವಿರುದ್ಧ ದಿಕ್ಕಿನಲ್ಲಿರುವ ಅರಬ್ಬಿ ಸಮುದ್ರದ ಮೇಲ್ಮೈ ಸ್ಟ್ರನ್ ಗಾಳಿ (ತೇವಭರಿತ)ಯು ಕರ್ನಾಟಕದ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಮೇಲೆ ಹಾದು ಸಾಗುತ್ತದೆ.
ಇದರಿಂದ ಮುಂಗಾರು ಸುರಿಸುವ ಮಳೆಯ ಮಾರುತಗಳು ಸಕ್ರಿಯವಾಗುವ ಜೊತೆಗೆ ರಾಜ್ಯಾದ್ಯಂತ ಭಾರೀ ಮಳೆ ಸುರಿಸುತ್ತವೆ. ಈಗಾಗಲೇ ರಾಜ್ಯದಲ್ಲಿ ಮಳೆಯಲ್ಲಿ, ಹವಾಮಾನದಲ್ಲಿ ಒಂದಷ್ಟು ಬದಲಾವಣೆಗಳನ್ನು ಗಮನಿಸುತ್ತಿದ್ದೇವೆ.
ಮಿ.ಮೀಗೂ ಹೆಚ್ಚು ಮಳೆ ಸಂಭವ, ಪ್ರವಾಹದ ಎಚ್ಚರಿಕೆ
ಮುಂಗಾರು ಆರಂಭವಾದಾಗಿನಿಂದ ಕರ್ನಾಟಕದ ಕರಾವಳಿಯಲ್ಲಿ ಮತ್ತು ಮಲೆನಾಡಿನಲ್ಲಿ ವಾಡಿಕೆಯಷ್ಟು ಅಧಿಕ ಮಳೆ ಸುರಿಯಲಿದೆ. ಸಂಭವನೀಯ ಮಳೆಯು ಈ ಭಾರಿಯ ಮಳೆ ಕೊರತೆಯನ್ನು ಸಂಪೂರ್ಣವಾಗಿ ನೀಗಿಸುವಷ್ಟರ ಮಟ್ಟಿಗೆ ಕೆಲವೇ ದಿನಗಳಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದೆ.
ಒಂದೆರಡು ಕಡೆಗಳಲ್ಲಿ ಮಾತ್ರ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಉಳಿದಂತೆ, ಮಲೆನಾಡು, ಕರಾವಳಿ ಭಾಗದ ಜಿಲ್ಲೆಗಳು ಸೇರಿದಂತೆ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ 200 ಮಿ.ಮೀ.ಗೂ ಹೆಚ್ಚು ಮಳೆ ಆಗಲಿದೆ. ಬಿರುಗಾಳಿ ಸಹಿತ ಒಂದು ವಾರ ಧಾರಾಕಾರ ಮಳೆ ಬಿಟ್ಟು ಬಿಡದೇ ಸುರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (KSNDMC) ಮುನ್ಸೂಚನೆ ನೀಡಿದೆ.
ಆದ್ದರಿಂದ ತಗ್ಗು ಪ್ರದೇಶದ ಮನೆಗಳ ನಿವಾಸಿಗಳು, ನದಿ ಅಂಚಿನಲ್ಲಿ ಮನೆ ಹೊಂದಿರುವವರು ಸೇರಿದಂತೆ ಅಪಾಯ ಎದುರಾಗುವ ಸಂಭವ ಇರುವ ನಿವಾಸಿಗಳು ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಲಾಗಿದೆ.