ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಬ್ಲಾಕ್ಮೇಲ್ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ಸುವರ್ಣ ಕರ್ನಾಟಕ ವೃತ್ತಿನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಬೆಳಗಾವಿಯಿಂದ ಒತ್ತಾಯಿಸಿದೆ.
ಸುವರ್ಣ ಕರ್ನಾಟಕ ವೃತ್ತಿನಿರತ ಪತ್ರಕರ್ತರ ಕರ್ತರ ಸಂಘ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಮಹಾಂತೇಶ ಹಿರೇಮಠ ಮಾತನಾಡಿ ಇತ್ತೀಚಿಗೆ ನಡೆಯುತ್ತಿರುವ ಪತ್ರಕರ್ತರು ಅಲ್ಲದೆ ಇರುವ ಕೆಲ ವ್ಯಕ್ತಿಗಳು ಬ್ಲಾಕ್ ಮೇಲ್ ಮಾಡುತ್ತಿರುವ ದಂದೆ ಮಾಡಿಕೊಂಡಿದ್ದಾರೆ, ಇದರಿಂದ ನಿಜವಾದ ಪತ್ರಿಕೆಯನ್ನು ಹಾಗೂ ಡಿಜಿಟಲ್ ಮಾಧ್ಯಮ ನಡೆಸುತ್ತಿರುವ ವರದಿಗಾರರು ಮತ್ತು ಸಂಪಾದಕರಿಗೆ ಮುಜುಗರ ಉಂಟುಮಾಡುತ್ತಿದೆ ಏಕೆಂದರೆ ರಾಜ್ಯಮಟ್ಟದ ಪತ್ರಿಕೆಗಳು ಪ್ರಾದೇಶಿಕ ಪತ್ರಿಕೆಗಳು ರಾಷ್ಟ್ರಮಟ್ಟದ ಪತ್ರಿಕೆಗಳು ಹಾಗೂ ಡಿಜಿಟಲ್ ಮಾಧ್ಯಮಗಳು ಕೇಂದ್ರ ಸರಕಾರದ ನೊಂದಣಿ ಸಂಸ್ಥೆಗಳಲ್ಲಿ ಸರ್ಕಾರಕ್ಕೆ ಶುಲ್ಕ ಬರಿಸಿ ಅಧಿಕೃತ ಸಂಸ್ಥೆಗಳಾಗಿ ಮಾಡಿಕೊಂಡು ಮುದ್ರಣ ಮಾಧ್ಯಮಗಳಾಗಿ ಅಂತ ಸಮಯಕನುಸಾರವಾಗಿ ಮುದ್ರಣ ಮಾಡಿ ಲಕ್ಷಾಂತರ ರೂಪಾಯಿಗಳು ವೆಚ್ಚ ಬರಿಸಿ ತಮ್ಮ ಕಚೇರಿಗಳಿಂದ ಸರಕುಗಳ ಮೂಲಕ ನೊಂದಣಿ ಸುದ್ದಿ ಸಂಸ್ಥೆಗಳು ತಾವು ಆಯ್ಕೆ ಮಾಡಿಕೊಂಡಿರುವ ವರದಿಗಾರರಿಗೆ ಹಾಗೂ ವಿತರಕರಿಗೆ ಪತ್ರಿಕೆಗಳನ್ನು ತಲುಪಿಸುತ್ತಿವೆ ಅಂತಹ ಅಧಿಕೃತ ಪತ್ರಿಕೆಗಳ ವರದಿಗಾರರಿಗೆ ಇತ್ತೀಚಿನ ದಿನಗಳಲ್ಲಿ ಬಹಳ ನೋವನ್ನುಂಟು ಮಾಡುತ್ತಿವೆ. ಏಕೆಂದರೆ ಪತ್ರಕರ್ತರು ಅಲ್ಲದೇ ಇರುವ ನೊಂದಣಿ ಸಂಸ್ಥೆ ಇಲ್ಲದೆ ಇರುವ ಪತ್ರಿಕೆಗಳು ಹಾಗೂ ನಿಷ್ಕ್ರಿಯೆ ಹೊಂದಿರುವ ಪತ್ರಿಕೆಗಳು ಮತ್ತು ಮಾಧ್ಯಮದ ಹೆಸರು ಹೇಳಿಕೊಂಡು ಅಧಿಕಾರಿಗಳ ಅಷ್ಟೇ ಅಲ್ಲ ಸಾರ್ವಜನಿಕರಿಗೂ ಕೂಡ ತೊಂದರೆ ಮಾಡುತ್ತಿವೆ ಅಂತಹ ವ್ಯಕ್ತಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿ ತಮ್ಮಲ್ಲಿ ವಿನಂತಿಸುತ್ತೇವೆ ಹಾಗೂ ಪೊಲೀಸ್ ಇಲಾಖೆಗಳಿಗೆ ಅಂತಹ ಸಂದರ್ಭದಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಬೇಕೆಂದು ಈ ಮೂಲಕ ವಿನಂತಿ ಮಾಡಿಕೊಳ್ಳುತ್ತೇವೆ.
ಸುವರ್ಣ ಕರ್ನಾಟಕ ವೃತ್ತಿನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಬೆಳಗಾವಿ.