ಸಮೀಪದ ನಯಾನಗರ ಸುಖದೇವಾನಂದಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ ಅವರ ಹುಟ್ಟುಹಬ್ಬದ ನಿಮಿತ್ತ ಶನಿವಾರ ಶ್ರೀಮಠದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೈಲಹೊಂಗಲ: ಸಮೀಪದ ನಯಾನಗರ ಸುಖದೇವಾನಂದಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ ಅವರ ಹುಟ್ಟುಹಬ್ಬದ ನಿಮಿತ್ತ ಶನಿವಾರ ಶ್ರೀಮಠದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಜಿಪಂ ಬೆಳಗಾವಿ, ತಾಲೂಕೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ಬೆಳವಡಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 75 ಕ್ಕಿಂತ ಹೆಚ್ಚು ಜನರು ರಕ್ತದಾನ ಮಾಡಿದರು.

ಬೈಲಹೊಂಗಲದ ಮಾಜಿ ಶಾಸಕರಾದ ಶ್ರೀ ಜಗದೀಶ್ ಮೇಟಗುಡ್ಡ ಹಾಗೂ ಉದ್ಯಮಿ ಶ್ರೀ ವಿಜಯ ಮೇಟಗುಡ್ಡ ಹಾಗೂ ಬೈಲಹೊಂಗಲ ತಾಲೂಕಿನ ಅನೇಕ ಗಣ್ಯ ವ್ಯಕ್ತಿಗಳು ಶ್ರೀಮಠಕ್ಕೆ ಆಗಮಿಸಿ ಪೂಜ್ಯರ ಆಶೀರ್ವಾದವನ್ನು ಪಡೆಯುವುದರ ಜೊತೆಗೆ ಹುಟ್ಟು ಹಬ್ಬದ ಶುಭ ಕೋರಿದರು ಹಾಗೂ ಬೈಲಹೊಂಗಲದ ಬಗಳಾಂಬಿಕಾ ಮಠದ ಧರ್ಮಾಧಿಕಾರಿಗಳಾದ ಶ್ರೀ ವೀರಯ್ಯ ಸ್ವಾಮಿಗಳು ಹಾಗೂ ಕಿತ್ತೂರು ಕ್ರಾಂತಿ ಹಾಗೂ ಭೀಮ ಸಂಸ್ಕೃತಿ ಬಹುಭಾಷಾ ಪತ್ರಿಕೆಯ ಸಂಪಾದಕರಾದ ಮಹಾಂತೇಶ ಹಿರೇಮಠ ಅವರು ಶ್ರೀಮಠಕ್ಕೆ ಭೇಟಿ ನೀಡಿ ಪೂಜ್ಯರಿಗೆ ಸನ್ಮಾನಿಸಿ ಹುಟ್ಟು ಹಬ್ಬದ ಶುಭ ಕೋರಿದರು.

ಬೈಲಹೊಂಗಲ, ಬೆಳವಡಿ, ಅನಿಗೋಳ, ಜಾಲಿಕೊಪ್ಪ ಸೇರಿದಂತೆ ಅನೇಕ ಗ್ರಾಮದ ಭಕ್ತರು ಶ್ರೀಮಠಕ್ಕೆ ಆಗಮಿಸಿ ಶ್ರೀಗಳಿಗೆ ಹುಟ್ಟುಹಬ್ಬದ ಶುಭ ಕೋರಿದರು.

Post a Comment

0Comments

Post a Comment (0)